ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ನಿಗೆ ಮುಸ್ಲಿಮರಿಂದ 31 ಬಿಲಿಯನ್ ಪೌಂಡ್ ಕೊಡುಗೆ

By Mahesh
|
Google Oneindia Kannada News

Muslims contribute 31 billion pounds to British economy
ಲಂಡನ್, ನ.6: ಬ್ರಿಟನ್ ನಲ್ಲಿ ಸುಮಾರು 27.2 ಲಕ್ಷ ಮುಸ್ಲಿಮರು ವಾಸಿಸುತ್ತಿದ್ದು, ಈ ಪೈಕಿ 10,000ಕ್ಕೂ ಅಧಿಕ ಮಂದಿ ಮಿಲಿಯನೇರ್ ಗಳಿದ್ದಾರೆ. ಇವರಿಂದ ಬ್ರಿಟನ್ ಬೊಕ್ಕಸಕ್ಕೆ 31 ಬಿಲಿಯನ್ ಪೌಂಡ್ (ಸುಮಾರು ಮೂರು ಲಕ್ಷ ಕೋಟಿ ರೂ.) ದೇಣಿಗೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೆ ಲಂಡನ್ ನಲ್ಲಿ ಮುಕ್ತಾಯಗೊಂಡ 9ನೇ ವಿಶ್ವ ಇಸ್ಲಾಮಿಕ್ ಆರ್ಥಿಕ ವೇದಿಕೆ ಸಮಾವೇಶ, 2013ಕ್ಕೆ ಮುನ್ನ ಮುಸ್ಲಿಂ ಕೌನ್ಸಿಲ್ ಆಫ್ ಬ್ರಿಟನ್ 'ದ ಮುಸ್ಲಿಂ ಪೌಂಡ್-ಹೌ ಮುಸ್ಲಿಮ್ಸ್ ಅಂಡ್ ವ್ಯಾಲ್ಯೂ ಟು ಬ್ರಿಟನ್ಸ್ ಪ್ರಾಸ್ಪರಿಟಿ'' ಎಂಬ ವರದಿಯನ್ನು ಬಿಡುಗಡೆ ಮಾಡಿತ್ತು.

ಹೆಚ್ಚಿನ ಮುಸ್ಲಿಮರು ತಮ್ಮ ತಾಯ್ನಾಡನ್ನು ತೊರೆದು ವಿದೇಶಿ ನೆಲವೊಂದಕ್ಕೆ ಹೋದಾಗ ಅಲ್ಲಿ ಹತ್ತಿ ಗಿರಣಿಗಳು, ಮಗ್ಗಗಳು, ಉಕ್ಕು ಮತ್ತು ಆಟೊಮೊಬೈಲ್ ಉದ್ದಿಮೆಗಳಲ್ಲಿ ಕಾರ್ಮಿಕರಾಗಿ ಕೆಲಸ ಆರಂಭಿಸಿದರು ಹಾಗೂ ಯುದ್ಧಾನಂತರದ ಬ್ರಿಟನ್ ರೂಪಿಸುವುದರಲ್ಲಿ ಪಾತ್ರ ವಹಿಸಿದರು. ಆದರೆ, ತಮ್ಮ ಕನಸುಗಳು ಈಡೇರುವ ಬಗ್ಗೆ ಅವರಿಗೆ ಭರವಸೆಯಿರಲಿಲ್ಲ.

ಐದು ದಶಕಗಳ ಬಳಿಕ ನಿರ್ವಹಣೆ, ಆಡಳಿತ ಮತ್ತು ವೃತ್ತಿಪರ ಉದ್ಯೋಗಗಳಲ್ಲಿ 10,000ಕ್ಕಿಂತ ಅಧಿಕ ಕೋಟ್ಯಧಿಪತಿಗಳು ಹಾಗೂ ಸಾವಿರಾರು ಇತರರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.'ಎಲಿಜಬೆತ್ ಕಾಲದ ಲಂಡನ್ ನಲ್ಲಿನ ಕಾಫಿ ಅಂಗಡಿಗಳಿಂದ ಹಿಡಿದು ಆಧುನಿಕ ಕಾಲದ ಬ್ರಿಟನ್ ನ ಸಾಂಬಾರು ಅಂಗಡಿಗಳವರೆಗೆ ಸಾವಿರಾರು ಮುಸ್ಲಿಂ ಒಡೆತನದ ಉದ್ದಿಮೆಗಳು ಬ್ರಿಟನ್ ನ ಆರ್ಥಿಕತೆಗೆ ಗಮನಾರ್ಹ ದೇಣಿಗೆ ನೀಡಿವೆ ಹಾಗೂ ಆ ಮೂಲಕ ಬ್ರಿಟನ್ ನ ಸಾಂಸ್ಕೃತಿಕ ಬದುಕಿಗೆ ದೇಣಿಗೆ ಕೊಟ್ಟಿವೆ'' ಎಂದು ವರದಿ ಹೇಳಿದೆ.

ಲಂಡನ್ ವೊಂದರಲ್ಲೇ ಸುಮಾರು 33.6 ಶೇಕಡ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಮುಸ್ಲಿಮ್ ಮಾಲಕರಿಗೆ ಸೇರಿವೆ. 13,400ಕ್ಕೂ ಹೆಚ್ಚು ಮುಸ್ಲಿಂ ಒಡೆತನದ ಉದ್ದಿಮೆಗಳು 70,000ಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಿವೆ. ಈ ಉದ್ದಿಮೆಗಳ ಪೈಕಿ ಕೆಲವು ಮನೆಮಾತಾಗಿವೆ.(ಐಎಎನ್ಎಸ್)

English summary
Britain has more than 10,000 millionaires from the among 2.72 million Muslims who live and work in the country, contributing 31 billion pounds (Rs.3 trillion) to its economy, a new report says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X