ಪಾಕ್ ಬೆಂಬಲಕ್ಕೆ ಬಂದ ಮುಸ್ಲಿಂ ರಾಷ್ಟ್ರಗಳು: ಯುದ್ಧ ವಿಮಾನ & ಶಸ್ತ್ರಾಸ್ತ್ರ ಪೂರೈಕೆ!
ಭಾರತ ಹಾಗೂ ಪಾಕಿಸ್ತಾನದ ನಡುವೆ ಪರಿಸ್ಥಿತಿಯು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ದಲ್ಲಿ ಉಗ್ರರು ದಾಳಿ ನಡೆಸಿದ್ದು. ಈ ದಾಳಿಯಲ್ಲಿ 26 ಜನ ಭಾರತೀಯರು ಮೃತಪಟ್ಟಿದ್ದಾರೆ. ಭಾರತದ ಮೇಲೆ ಅದರಲ್ಲೂ ಹಿಂದೂಗಳನ್ನು ಗುರಿಯಾಗಿಸಿಕೊಂಡು ಮಾಡಿರುವ ದಾಳಿಗೆ ಪ್ರತೀಕಾರ ಇಲ್ಲವೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತೀಯರು ಆಗ್ರಹಿಸಿದ್ದಾರೆ. ಭಾರತದ ವಿರುದ್ಧ ದಾಳಿಗೆ ಪಾಕಿಸ್ತಾನವು ಬೆಲೆ ತರಬೇಕು ಎಂದು ಹೇಳಲಾಗುತ್ತಿದೆ. ಎರಡೂ ರಾಷ್ಟ್ರಗಳ ನಡುವೆ ಪರಿಸ್ಥಿತಿ ಉದ್ವಿಗ್ನವಾಗುತ್ತಿರುವಾಗಲೇ ಪಾಕಿಸ್ತಾನಕ್ಕೆ ಬೆಂಬಲ ಹೆಚ್ಚಾಗುತ್ತಿದ್ದು. ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ. ಪಾಕಿಸ್ತಾನಕ್ಕೆ ಮುಸ್ಲಿಂ ರಾಷ್ಟ್ರಗಳು ಬೆಂಬಲ ಕೊಡುವುದಕ್ಕೆ ಶುರು ಮಾಡಿವೆ. ಚೀನಾ ಬೆಂಬಲದ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ.
ಪಹಲ್ಗಾಮ್ ಭಯೋತ್ಪಾದಕರ ದಾಳಿಯ ನಂತರ ಭಾರತ Vs ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಟರ್ಕಿ ದೇಶವು ಪಾಕಿಸ್ತಾನಕ್ಕೆ ಬೆಂಬಲವನ್ನು ಸೂಚಿಸಿದ್ದು. ಇಸ್ಲಾಮಾಬಾದ್‌ಗೆ ಯುದ್ಧ ಉಪಕರಣಗಳನ್ನು ಸರಬರಾಜು ಮಾಡಿದೆ. ಟರ್ಕಿ ವಾಯುಪಡೆಯ C-130 Hercules ಯುದ್ಧ ವಿಮಾನಗಳು ಹಾಗೂ ಯುದ್ಧ ಸಾಮಾಗ್ರಿಗಳು ಪಾಕಿಸ್ತಾನದ ಕರಾಚಿಗೆ ಬಂದಿಳಿದಿವೆ!. ಟರ್ಕಿಯಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿದೆ. ಈ ದೇಶ ತನ್ನನ್ನು ಸೆಕ್ಯೂಲರ್ ದೇಶ ಎಂದು ಕರೆದುಕೊಳ್ಳುತ್ತದೆ.

ಟರ್ಕಿ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವರು ಈಚೆಗೆ ಫೋನ್‌ನಲ್ಲಿ ಮಾತನಾಡಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಈ ಬೆಳವಣಿಗೆ ಆಗಿದೆ. ಇತ್ತ ಚೀನಾ ಸಹ ಪಾಕಿಸ್ತಾನದೊಂದಿಗೆ ಇರುವುದಾಗಿ ಹೇಳಿದೆ. ಭಾರತ ಹಾಗೂ ಪಾಕ್ ಎರಡೂ ದೇಶಗಳು ಸೌರ್ಹಾದವಾಗಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಚೀನಾ ಹೇಳಿದರೂ. ತನ್ನ ಸಂಪೂರ್ಣ ಬೆಂಬಲ ಪಾಕಿಸ್ತಾನಕ್ಕೆ ಇರಲಿದೆ ಎಂದು ಹೇಳಿದೆ. ಇನ್ನು ಬಾಂಗ್ಲದೇಶವು ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ - ಚೀನಾದೊಂದಿಗೆ ಕೈಜೋಡಿಸಿದೆ. ಶ್ರೀಲಂಕಾ ದೇಶದೊಂದಿಗೂ ಚೀನಾ ಉತ್ತಮ ಸಂಬಂಧವನ್ನೇ ಹೊಂದಿದೆ. ಆರ್ಥಿಕ ಸಹಾಯದ ಕಾರಣಕ್ಕೆ ಶ್ರೀಲಂಕಾ ಚೀನಾ ದೇಶದೊಂದಿಗೆ ಆತ್ಮೀಯವಾಗಿದೆ.
ಯುದ್ಧ ಪರಿಸ್ಥಿಯಲ್ಲಿ ಇದೀಗ ಟರ್ಕಿ ಹಾಗೂ ಚೀನಾದ ಆಟ ಬಯಲಾಗುತ್ತಿದ್ದು. ಒಂದೊಮ್ಮೆ ಯುದ್ಧ ಪ್ರಾರಂಭವಾದರೆ ಭಾರತಕ್ಕೆ ಇದು ಸವಾಲಿನ ಪರಿಸ್ಥಿತಿ ಆಗಿರಲಿದೆ ಎಂದೇ ಹೇಳಲಾಗುತ್ತಿದೆ. ಇನ್ನು ಇದೀಗ ಪಾಕಿಸ್ತಾನಕ್ಕೆ ಮಿಲಿಟರಿ ಸಹಾಯ ಮಾಡುತ್ತಿರುವ ಟರ್ಕಿಯಿಂದ ಪಾಕಿಸ್ತಾನದ ಕರಾಚಿ ಹಾಗೂ ಇಸ್ಲಾಮಾಬಾದ್‌ನ ಮಿಲಿಟರಿ ನೆಲೆಗಳಿಗೆ ಯುದ್ಧ ವಿಮಾನಗಳು ಬಂದಿಳಿದಿವೆ ಎಂದು ವರದಿಯಾಗಿದೆ. ಪಾಕಿಸ್ತಾನ ಹಾಗೂ ಟರ್ಕಿಯ ಸಂಬಂಧ ಮೊದಲಿನಿಂದಲೂ ಉತ್ತಮವಾಗಿದೆ.

ಇದೀಗ ಭಾರತ ಹಾಗೂ ಪಾಕಿಸ್ತಾನದ ನಡುವೆ ಪರಿಸ್ಥಿತಿ ಬಿಗಡಾಯಿಸಿರುವಾಗಲೇ ಪಾಕ್ ಬೆಂಬಲಕ್ಕೆ ಟರ್ಕಿ ಬಂದಿದೆ. ಟರ್ಕಿ ಹಾಗೂ ಪಾಕಿಸ್ತಾನದ ನಡುವೆ ಮಿಲಿಟರಿ ಸರಕು ವರ್ಗಾವಣೆ ವರದಿಯಾಗಿದೆ. ಪಾಕಿಸ್ತಾನಕ್ಕೆ ಟರ್ಕಿಯ ಮಿಲಿಟರಿ ನೆರವು ಕೊಡುತ್ತಿದ್ದರೆ, ಚೀನಾದಿಂದ ರಕ್ಷಣಾತ್ಮಕ ಸಾಮರ್ಥ್ಯಗಳನ್ನು ಹೆಚ್ಚಿಸುವ ಡ್ರೋನ್‌ಗಳ ಪೂರೈಕೆಯೂ ನಡೆದಿದೆ ಎಂದು ಹೇಳಲಾಗಿದೆ.
ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಗಡಿ ಭಾಗದಲ್ಲಿ ಕಟ್ಟೆಚ್ಚರಿಕೆ ವಹಿಸಿವೆ. ಎರಡೂ ರಾಷ್ಟ್ರಗಳ ನಡುವೆ ಯುದ್ಧ ಎದುರಾಗಬಹುದು ಎನ್ನುವ ವಾತಾವರಣ ನಿರ್ಮಾಣವಾಗಿದೆ. ಭಾರತವು ಅತ್ಯಂತ ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ಇಷ್ಟು ದಿನ ಈ ವಿಚಾರದಲ್ಲಿ ತಟಸ್ಥವಾಗಿದ್ದ ಅಮೆರಿಕ ಇದೀಗ ಪರೋಕ್ಷವಾಗಿ ಭಾರತಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿದೆ.












Click it and Unblock the Notifications