ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊಬರ್ ಎಂದು ಕಾರು ಹತ್ತಿ ಕೊಲೆಯಾಗಿ ಹೋದ ಅಮೆರಿಕದ ಕಾಲೇಜು ಯುವತಿ

|
Google Oneindia Kannada News

ದಕ್ಷಿಣ ಕೆರೊಲಿನಾ, ಏ.1: ಊಬರ್ ಕ್ಯಾಬ್ ಎಂದು ಯಾವುದೋ ಕಾರನ್ನು ಹತ್ತಿ ಕಾಲೇಜು ಯುವತಿಯೊಬ್ಬಳು ಬರ್ಬರವಾಗಿ ಕೊಲೆಯಾದ ಘಟನೆ ಅಮೆರಿಕಾದ ದಕ್ಷಿಣ ಕೆರೊಲಿನಾದಲ್ಲಿ ನಡೆದಿದೆ.

ರಾತ್ರಿ ಬಾರಿನಿಂದ ಮನೆಗೆ ಹೊರಟಿದ್ದಳು, ಊಬರ್ ಕ್ಯಾಬ್ ಬುಕ್ ಮಾಡಿದ್ದಳು, ಅದೇ ಮಾದರಿಯ ಕ್ಯಾಬ್ ಬಂದು ಬಾಗಿಲು ತೆರೆದ ಕಾರಣ ತನ್ನ ಕ್ಯಾಬ್ ಎಂದುಕೊಂಡು ಹತ್ತಿಯೇ ಬಿಟ್ಟಳು.ಆದರೆ ತಾನು ಹತ್ತಿದ್ದು ಊಬರ್ ಕ್ಯಾಬ್ ಅಲ್ಲ ಎಂದು ಆಕೆಗೆ ತಿಳಿಯುವಷ್ಟರಲ್ಲಿ ಹೆಣವಾಗಿದ್ದಳು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸಮಂತಾ ಜೋಸೆಫ್(21) ಕೊಲೆಯಾದ ಯುವತಿ, ಅಷ್ಟರ ಬಳಿಕ ಆಕೆ ಯಾರ ಕಣ್ಣಿಗೂ ಕಾಣಿಸಲೇ ಇಲ್ಲ ಅನುಮಾನಗೊಂಡ ಸ್ನೇಹಿತರು ಆಕೆ ಕಾಣೆಯಾಗಿ 12 ತಾಸುಗಳ ಬಳಿಕ ಪೊಲೀಸರಿಗೆ ದೂರು ನೀಡಿದ್ದರು.

Murdered US College Student May Have Thought Car Was Uber Ride

ಆಕೆ ಯಾವಾಗಲೂ ಹೋಗುವ ಹಾಗೆ ಊಬರ್‌ನಲ್ಲಿಯೇ ಹೋಗುತ್ತಿದ್ದಾಳೆ ಎಂದು ನಾವು ಅಂದುಕೊಂಡಿದ್ದೆವು. ಆಕೆ ಬಳಿ ಕಾರು ಬಂದು ನಿಂತಾಗ ಆಕೆ ಡೋರ್ ಓಪನ್ ಮಾಡಿ ಹತ್ತಿಕೊಂಡಳು ನಾವು ವಿಚಾರಿಸಲಿಲ್ಲ ಎಂದು ಸ್ನೇಹಿತರು ಹೇಳಿದ್ದಾರೆ.

ಯಾವುದೋ ಪಾಳು ಬಿದ್ದಿರುವ ಹಾಳಾದ ರಸ್ತೆಯ ಬದಿಯಲ್ಲಿ ಆಕೆಯ ದೇಹವನ್ನು ಎಸೆದು ದುರುಳರು ಪರಾರಿಯಾಗಿದ್ದರು. ಆಕೆಯ ತಂದೆ ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ''ನನ್ನ ಬೇಬಿ ಗರ್ಲ್‌ನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ'' ಎಂದು ಬರೆದು ಕಣ್ಣೀರಿಟ್ಟಿದ್ದಾರೆ.

ಮರುದಿನ ಬೆಳಗ್ಗೆ ಆಕೆಯ ಸ್ನೇಹಿತರು ವಿವರಿಸಿದಂತೆಯೇ ಇದ್ದ ಕಾರನ್ನು ಜಪ್ತಿ ಮಾಡಿರುವ ಪೊಲೀಸರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ನಥೇನಿಯಲ್ ರೋಲ್ಯಾಂಡ್‌ನನ್ನು ಬಂಧಿಸಿದ್ದಾರೆ.

ಅಷ್ಟೇ ಅಲ್ಲದೆ ಕಾರಿನಲ್ಲಿ ರಕ್ತದ ಕಲೆಯೂ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಊಬರ್ ಟೆಕ್ನಾಲಜಿ 2017ರಲ್ಲಿ ಒಂದು ಅಭಿಯಾನವನ್ನು ನಡೆಸಿತ್ತು. ಅದರಲ್ಲಿ ಊಬರ್ ಸ್ಕ್ಯಾಮ್ ಬಗ್ಗೆ ಮಾಹಿತಿ ನೀಡಲಾಗಿತ್ತು. ಕಾರು ಹತ್ತುವ ಮುನ್ನ ಅದೇ ಕಾರು ಹೌದೋ ಅಲ್ಲವೋ ಎಂದು ಪರೀಕ್ಷಿಸುವುದು ಹೇಗೆ ಇದೆಲ್ಲದರ ಬಗ್ಗೆಯೂ ಮಾಹಿತಿ ನೀಡಲಾಗಿತ್ತು.

English summary
A South Carolina man has been charged in the murder of a University of South Carolina student who may have gotten into her killer's car mistakenly believing that it was her Uber ride, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X