ಭಾರತ - ಬಾಂಗ್ಲಾದೇಶದ ನಡುವೆ ಸಂಬಂಧ ಹಾಳಾಗುವುದಕ್ಕೆ ಇದೇ ಕಾರಣ: ಮುಹಮ್ಮದ್ ಯೂನಸ್
ಭಾರತ ಹಾಗೂ ಬಾಂಗ್ಲಾದೇಶದ ನಡುವೆ ರಾಜತಾಂತ್ರಿಕ ಸಂಬಂಧ ಹಳೆಯ ರೀತಿಯಲ್ಲಿ ಇಲ್ಲ. ಬಾಂಗ್ಲಾದೇಶದ ನಿರ್ಮಾಣಕ್ಕೆ ಭಾರತವೇ ಕಾರಣವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಸಂಬಂಧವು ಹಾಳಾಗಿದ್ದು. ಬಾಂಗ್ಲಾದೇಶವು - ಚೀನಾ ಮತ್ತು ಪಾಕಿಸ್ತಾನದೊಂದಿಗೆ ಕೈಜೋಡಿಸಿದೆ. ಈಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದ ಸಂದರ್ಭದಲ್ಲೂ ಬಾಂಗ್ಲಾದೇಶವು ಪಾಕಿಸ್ತಾನದ ಪರವಾಗಿ ಬ್ಯಾಟಿಂಗ್ ಮಾಡಿತ್ತು. ಇದೀಗ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಇದೇ ಎರಡೂ ದೇಶಗಳ ನಡುವೆ ವೈಮನಸ್ಸು ಮೂಡುವುದಕ್ಕೆ ಹಾಗೂ ಸಂಬಂಧ ಹಾಳಾಗುವುದಕ್ಕೆ ಕಾರಣವಾಗಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಹತ್ತಿರವಾಗುವುದಕ್ಕೆ ಬಾಂಗ್ಲಾದೇಶವು ಭಾರತದ ವಿರುದ್ಧ ಹೇಳಿಕೆಯನ್ನು ಕೊಡುತ್ತಿದೆ. ಮುಹಮ್ಮದ್ ಯೂನಸ್ ಭಾರತದ ಬಗ್ಗೆ ಮಾತನಾಡಿರುವ ವಿಚಾರಗಳು ಇದೀಗ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಯು ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಿಗೆ ಕಾರಣವಾಗಿತ್ತು. ಈ ಪ್ರತಿಭಟನೆಗಳು ಭಾರತಕ್ಕೆ ಇಷ್ಟವಾಗದ ಕಾರಣ ನವದೆಹಲಿಯೊಂದಿಗಿನ ಢಾಕಾದ ಸಂಬಂಧಗಳು (ಭಾರತ ಮತ್ತು ಬಾಂಗ್ಲಾದೇಶದ) ಹದಗೆಟ್ಟಿವೆ ಎಂದು ಅವರು ದೂರಿದ್ದಾರೆ.

ಬಾಂಗ್ಲಾದ ಮಾಜಿ ಪ್ರಧಾನಿ ಹಸೀನಾ ಅವರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಇದು ಭಾರತ ಮತ್ತು ಬಾಂಗ್ಲಾದೇಶದ ನಡುವೆ ವೈಮನಸ್ಸು ಹಾಗೂ ರಾಜತಾಂತ್ರಿಕ ಸಂಬಂಧ ಹಾಳಾಗುವುದಕ್ಕೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಯನ್ನು ಭಾರತವು ಇಷ್ಟಪಡದ ಕಾರಣ ನಮಗೆ ಭಾರತದೊಂದಿಗೆ ಈಗ ಸಮಸ್ಯೆಗಳು ಅಥವಾ ವೈಮನಸ್ಸು ಇದೆ ಎಂದು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA)ಲ್ಲಿ ಅವರು ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಭಾರತದಲ್ಲಿನ ಕೆಲವು ಮಾಧ್ಯಮಗಳ ಸುಳ್ಳು ವರದಿಗಳು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ಹದಗೆಡಿಸಿವೆ ಎಂದು ಯೂನಸ್ ಅವರು ಇದೇ ಸಂದರ್ಭದಲ್ಲಿ ದೂರಿದ್ದಾರೆ. ಭಾರತದಿಂದ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿವೆ. ಇದು ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಹಾಳಾಗುವುದಕ್ಕೆ ಕಾರಣವಾಗಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ದೂರಿದ್ದಾರೆ.
ಗಡೀಪಾರು ಪ್ರತಿಕ್ರಿಯೆ ನೀಡದ ಭಾರತ: ಇನ್ನು 2024ರಲ್ಲಿ ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಪಲಾಯನ ಮಾಡಿದ ನಂತರ, ಅಲ್ಲಿನ ಮಾಜಿ ಪ್ರಧಾನಿ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದ್ದು. ಹೌದು ಇವರ ಆಶ್ರಯವೂ ಸಹ ಬಾಂಗ್ಲಾದೇಶದಲ್ಲಿ ಆಕ್ಷೇಪಣೆಗೆ ಕಾರಣವಾಗಿದೆ. ಅಲ್ಲಿನ ತಾತ್ಕಾಲಿಕ ಸರ್ಕಾರವು ಹಸೀನಾ ಅವರನ್ನು ಭಾರತದಿಂದ ಗಡೀಪಾರು ಮಾಡುವಂತೆ ಬಾಂಗ್ಲಾದೇಶ ಮಾಡಿದ ಮನವಿಗೆ ಭಾರತ ಇನ್ನೂ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ ಎಂದು ಹೇಳಲಾಗಿದೆ.
ಯೂನಸ್ ನೇತೃತ್ವದ ಮಧ್ಯಂತರ ವ್ಯವಸ್ಥೆಯು ಅಧಿಕಾರ ವಹಿಸಿಕೊಂಡ ನಂತರ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ಇದಕ್ಕೆ ಯೂನಸ್ ಅವರು ಭಾರತದ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಗಳೂ ಕಾರಣ ಎಂದು ಹೇಳಲಾಗುತ್ತಿದೆ.












Click it and Unblock the Notifications