ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿಸುದ್ದಿ: ಬಾಯಿ ಮುಕ್ಕಳಿಸಿದರೆ ನಾಶವಾಗುತ್ತೆ ಕೊರೊನಾವೈರಸ್!

|
Google Oneindia Kannada News

ನವದೆಹಲಿ, ನವೆಂಬರ್.18: ಕೊರೊನಾವೈರಸ್ ಸೋಂಕಿನ ಲಸಿಕೆ ಯಾವಾಗ ಸಿಗುತ್ತದೆ ಎಂದು ಇಡೀ ಜಗತ್ತು ಎದುರು ನೋಡುತ್ತಿದೆ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ರಕ್ಷಿಸಿಕೊಳ್ಳುವುದಕ್ಕೆ ಸಾಕಷ್ಟು ಸಂಶೋಧನೆ ಮತ್ತು ಲಸಿಕೆ ಮೇಲೆ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ.

ಕರ್ನಾಟಕ; 1,157 ಹೊಸ ಕೋವಿಡ್ ಪ್ರಕರಣ ದಾಖಲು ಕರ್ನಾಟಕ; 1,157 ಹೊಸ ಕೋವಿಡ್ ಪ್ರಕರಣ ದಾಖಲು

ಕೊರೊನಾವೈರಸ್ ಲಸಿಕೆ ಮತ್ತು ವೈದ್ಯಕೀಯ ಸಂಶೋಧನೆಗಳು ಒಂದು ಕಡೆಯಲ್ಲಿ ನಡೆಯುತ್ತಿದೆ. ಇದರ ಮಧ್ಯೆ ಕೇವಲ ಬಾಯಿ ಮುಕ್ಕಳಿಸುವುದರಿಂದ ಕೇವಲ 30 ಸೆಕೆಂಡ್ ನಲ್ಲಿ ಕೊವಿಡ್-19 ರೋಗಾಣು ನಾಶವಾಗುತ್ತವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

Mouthwash Can Kill Coronavirus In Just 30 Seconds: Says Study

ಕನಿಷ್ಠ ಶೇ.0.07ರಷ್ಟು ಸಿಟಿಲ್ ಪಿರಿಡಿನಿಯಂ ಕ್ಲೋರೈಡ್(ಸಿಪಿಸಿ) ಅಂಶವುಳ್ಳ ಮೌತ್ ವಾಶ್ ನ್ನು ಬಳಸಿ ಬಾಯಿ ಮುಕ್ಕಳಿಸುವುದರಿಂದ ರೋಗಾಣು ಹರಡುವಿಕೆ ಪ್ರಮಾಣ ತೀರಾ ಕಡಿಮೆಯಾಗುತ್ತದೆ ಎಂದು ಕಾರ್ಡಿಫ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ.

ಮೌತ್ ವಾಶ್ ನಿಂದ ರೋಗಾಣು ಮಾಯ!

ಮೌತ್ ವಾಶ್ ನಿಂದ ರೋಗಾಣು ಮಾಯ!

ಕಳೆದ ವಾರ ಕಾರ್ಡಿಫ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬಿಡುಗಡೆಗೊಳಿಸಿದ ಪ್ರಾಥಮಿಕ ವರದಿಯಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ. ಸಿಪಿಸಿ ಅಂಶವಿರುವ ಮೌತ್ ವಾಶ್ ಬಳಸಿ ಬಾಯಿ ತೊಳೆದುಕೊಳ್ಳುವುದರಿಂದ ಕೊರೊನಾವೈರಸ್ ಸೋಂಕಿತ ವ್ಯಕ್ತಿಯಿಂದಲೂ ಕೂಡಾ ಸೋಂಕು ಹರಡುವಿಕೆ ಪ್ರಮಾಣ ತಗ್ಗುತ್ತದೆ ಎಂದು ಹೇಳಿದ್ದಾರೆ. ಕಾರ್ಡಿಫ್ ವಿಶ್ವವಿದ್ಯಾಲಯದ ಹಾಸ್ಪಿಟಲ್ ಆಫ್ ವಾಲ್ಸ್ ನಲ್ಲಿರುವ ಸಾಲಿವಾದ ಕೊವಿಡ್-19 ಸೋಂಕಿತರ ಮೇಲೆ ಈ ಮೌತ್ ವಾಶ್ ಬಳಕೆಯ ಪ್ರಯೋಗವನ್ನು ನಡೆಸಿದಾಗ ಸಕಾರಾತ್ಮಕ ಫಲಿತಾಂಶವು ಹೊರ ಬಂದಿದೆ ಎಂದು ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೌತ್ ವಾಶ್ ವೈದ್ಯಕೀಯ ಪ್ರಯೋಗದ ಬಗ್ಗೆ ಉಲ್ಲೇಖ

ಮೌತ್ ವಾಶ್ ವೈದ್ಯಕೀಯ ಪ್ರಯೋಗದ ಬಗ್ಗೆ ಉಲ್ಲೇಖ

ಕಾರ್ಡಿಫ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡೇವಿಡ್ ಥಾಮಸ್ ಅವರು ನಡೆಸಿದ ವೈದ್ಯಕೀಯ ಪ್ರಯೋಗದಲ್ಲಿ ಬ್ರ್ಯಾಂಡೆಡ್ ಮೌತ್ ವಾಶ್ ಆಗಿರುವ ಡೆಂಟಿಲ್ ಅನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ವೈದ್ಯಕೀಯ ಪ್ರಯೋಗದಿಂದ ಸಕಾರಾತ್ಮಕ ಮತ್ತು ಉತ್ತೇಜನಕಾರಿ ಫಲಿತಾಂಶವು ಹೊರ ಬಂದಿರುವ ಹಿನ್ನೆಲೆ ಹೆಚ್ಚಿನ ವೈದ್ಯಕೀಯ ಪ್ರಯೋಗಗಳನ್ನು ಇದರ ಮೇಲೆ ನಡೆಸಬೇಕಾದ ಅಗತ್ಯತೆಯಿದೆ ಎಂದು ಪ್ರಾಧ್ಯಾಪಕರಾದ ಡೇವಿಡ್ ಥಾಮಸ್ ಅವರು ಹೇಳಿದ್ದಾರೆ.

ಜನವರಿ ವೇಳೆಗೆ ವೈದ್ಯಕೀಯ ಪ್ರಯೋಗಗಳು ಪೂರ್ಣ

ಜನವರಿ ವೇಳೆಗೆ ವೈದ್ಯಕೀಯ ಪ್ರಯೋಗಗಳು ಪೂರ್ಣ

ಕೊರೊನಾವೈರಸ್ ಸೋಂಕಿತರಲ್ಲಿ ಮೌತ್ ವಾಶ್ ನಿಂದಾಗಿ ರೋಗಾಣುಗಳ ಪ್ರಮಾಣ ಕಡಿಮೆಯಾಗುತ್ತಿದೆ. ವೈದ್ಯಕೀಯ ಪ್ರಯೋಗದಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆಯೇ ಎನ್ನುವುದನ್ನು ಮೊದಲು ಖಾತ್ರಿಪಡಿಸಿಕೊಳ್ಳಬೇಕಿದೆ. 2021ರ ವೇಳೆಗೆ ಕೊವಿಡ್-19 ಸೋಂಕಿತರಲ್ಲಿನ ರೋಗಾಣು ಕೊಲ್ಲುವುದಕ್ಕೆ ಮೌತ್ ವಾಶ್ ಬಳಕೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ವೈದ್ಯಕೀಯ ಪ್ರಯೋಗಳನ್ನು ನಾವು ಪೂರ್ಣಗೊಳಿಸಬೇಕಿದೆ ಎಂದು ಡೇವಿಡ್ ಥಾಮಸ್ ತಿಳಿಸಿದ್ದಾರೆ.

ಮಾಸ್ಕ್, ಸಾಮಾಜಿಕ ಅಂತರದ ಜೊತೆಗೆ ಮೌತ್ ವಾಶ್

ಮಾಸ್ಕ್, ಸಾಮಾಜಿಕ ಅಂತರದ ಜೊತೆಗೆ ಮೌತ್ ವಾಶ್

ಕೊವಿಡ್-19 ಸೋಂಕಿನ ವಿರುದ್ಧ ಹೋರಾಡುವುದಕ್ಕೆ ಮಾಸ್ಕ್ ಧರಿಸುವುದು, ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮೌತ್ ವಾಶ್ ಮಾಡಿಕೊಳ್ಳುವುದು ಕೂಡಾ ಬಲುಮುಖ್ಯವಾಗುತ್ತದೆ. ಸದ್ಯದ ಪರಿಸ್ಥಿತಿ ಮತ್ತು ಭವಿಷ್ಯದಲ್ಲಿ ಮೌತ್ ವಾಶ್ ಕೊರೊನಾವೈರಸ್ ರೋಗಾಣುಗಳನ್ನು ಕೊಲ್ಲುವುದಕ್ಕೆ ಪರಿಣಾಮಕಾರಿ ಎನಿಸಲಿದೆ ಎಂದು ಆವರ್ತಕಶಾಸ್ತ್ರಜ್ಞ ಡಾ. ನಿಕ್ ಕ್ಲೈಡಾನ್ ಅಭಿಪ್ರಾಯಪಟ್ಟಿದ್ದಾರೆ.

English summary
Mouthwash Can Kill Coronavirus In Just 30 Seconds: Says Study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X