ಲಿಫ್ಟ್‌ನಲ್ಲಿ ಸಿಲುಕಿದ್ದ ಅಮ್ಮ,ಮಗಳು 96 ಗಂಟೆ ಮೂತ್ರ ಕುಡಿದು ಬದುಕುಳಿದರು
ಬೀಜಿಂಗ್, ಜುಲೈ 21: ಲಿಫ್ಟ್‌ನಲ್ಲಿ ಸಿಲುಕಿದ್ದ ಅಮ್ಮ, ಮಗಳು 96 ಗಂಟೆಗಳ ಕಾಲ ಮೂತ್ರ ಕುಡಿದು ಬದುಕಿಳಿದಿರುವ ಘಟನೆ ಬೀಜಿಂಗ್‌ನಲ್ಲಿ ನಡೆದಿದೆ.
82 ವರ್ಷದ ತಾಯಿ ಹಾಗೂ 64 ವರ್ಷದ ಮಗಳು ಬದುಕುಳಿದವರು. ಚೀನಾದ ವಾಯುವ್ಯ ಪ್ರಾಂತ್ಯ ಶಾಂಕ್ಸಿ ನಿವಾಸಿಗಳಾದ ಇವರು ತಮ್ಮ ನಾಲ್ಕು ಅಂತಸ್ತಿನ ಕಟ್ಟಡದೊಳಗೆ ನಿರ್ಮಿಸಲಾದ ಲಿಫ್ಟ್‌ನಲ್ಲಿ ತಮ್ಮ ಎರಡನೇ ಮಹಡಿಗೆ ತೆರಳುವಾಗ ಲಿಫ್ಟ್ ಇದ್ದಕ್ಕಿಂದಂತೆ ಕೆಟ್ಟು ನಿಂತಿತ್ತು.
ಗಾಬರಿಗೊಳಗಾದ ಅಮ್ಮ-ಮಗಳು ಸಹಾಯಕ್ಕಾಗಿ ಕೂಗಾಡಿದರೂ ಯಾರೂ ಬರಲಿಲ್ಲ. ಯಾವುದೇ ವಸ್ತುವು ಸಹ ಇರಲಿಲ್ಲ. ಅಲ್ಲದೆ, ಫೋನ್ ಕೂಡ ತೆಗೆದುಕೊಂಡು ಹೋಗಿರಲಿಲ್ಲ.

ಇದರ ನಡುವೆ ಬಾಯಾರಿಕೆಯನ್ನು ನೀಗಿಸಿಕೊಂಡು ಪ್ರಾಣ ಉಳಿಸಿಕೊಳ್ಳಲು ಅಮ್ಮ-ಮಗಳಿಗೆ ಬೇರೆ ದಾರಿ ಕಾಣದೇ ಲಿಫ್ಟ್ ಒಳಗಡೆ ಬಿದ್ದಿದ್ದ ಲಿಕ್ವಿಡ್ ವೇಸ್ಟ್ ಅನ್ನು ಒಟ್ಟುಗೂಡಿಸಿ ಅದರ ಮೇಲೆ ಮೂತ್ರ ಮಾಡಿ ಪರಸ್ಪರ ಕುಡಿದು ದಣಿವು ನೀಗಿಸಿಕೊಂಡಿದ್ದಾರೆ.
ಇದರೊಂದಿಗೆ ಉಸಿರಾಟಕ್ಕಾಗಿ ಲಿಫ್ಟ್ ಒಳಗಡೆ ಇದ್ದ ಕಬ್ಬಿಣದ ತಂತಿಯ ಸಹಾಯದಿಂದ ಲಿಫ್ಟ್ ಬಾಗಿಲುಗಳನ್ನು ಸಡಿಲಗೊಳಿಸಿ ಸಣ್ಣ ರಂಧ್ರ ಮಾಡಿ ಅದರ ಮೂಲಕ ಉಸಿರಾಟ ನಡೆಸಿದ್ದಾರೆ. ಪರಸ್ಪರ ಮೂತ್ರ ಕುಡಿದು ಮೂರು ರಾತ್ರಿಗಳನ್ನು ಅಂದರೆ ಬರೋಬ್ಬರಿ 96 ಗಂಟೆಗಳನ್ನು ಲಿಫ್ಟ್ನಲ್ಲಿಯೇ ಕಳೆದಿದ್ದಾರೆ.
ನಾಲ್ಕನೇ ದಿನ ಸ್ಥಳೀಯರೊಬ್ಬರಿಗೆ ಇವರ ಕೂಗಾಟ ಕೇಳಿ ಬಳಿಕ ಲಿಫ್ಟ್ ಬಾಗಿಲು ತೆರೆಸಿದ್ದಾರೆ. ಈಗ ಅಮ್ಮ ಮಗಳು ಸುರಕ್ಷಿತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications