ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ಕೆನಡಾದಲ್ಲಿ ಮನೆ ಖರೀದಿಸಲು ವಿದೇಶಿಯರಿಗಿಲ್ಲ ಅವಕಾಶ: ಕಾರಣ ಏನು ಗೊತ್ತೇ?

|
Google Oneindia Kannada News

ಒಟ್ಟಾವಾ, ಡಿಸೆಂಬರ್ 6: ವಸತಿ ಸಮಸ್ಯೆ ಎದುರಿಸುತ್ತಿರುವ ಸ್ಥಳೀಯರಿಗೆ ಹೆಚ್ಚಿನ ಮನೆಗಳು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕೆನಡಾದಲ್ಲಿ ವಿದೇಶಿಗರು(ಭಾರತೀಯರು ಸೇರಿದಂತೆ) ವಸತಿ ಖರೀದಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಈ ನಿಷೇಧವು ಭಾನುವಾರದಿಂದ ಜಾರಿಗೆ ಬಂದಿದೆ.

ಕಾಯಿದೆಯಲ್ಲಿ ಹಲವು ವಿನಾಯಿತಿಗಳನ್ನೂ ನೀಡಲಾಗಿದೆ. ನಿರಾಶ್ರಿತರು ಮತ್ತು ನಾಗರಿಕರಲ್ಲದ ಖಾಯಂ ನಿವಾಸಿಗಳಂತಹ ವ್ಯಕ್ತಿಗಳಿಗೆ ಮನೆಗಳನ್ನು ಖರೀದಿಸಲು ಅವಕಾಶ ಇದೆ ಎಂದು ಸರ್ಕಾರ ಹೇಳಿದೆ.

ಈ ನಿಷೇಧವು ನಗರದ ವಾಸಸ್ಥಳಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಬೇಸಿಗೆ ಕಾಟೇಜ್‌ಗಳಂತಹ ಮನರಂಜನಾ ಆಸ್ತಿಗಳಿಗೆ ಅಲ್ಲ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ.

Most Foreigners In Canada Banned From Buying Houses For 2 Years

ತಾತ್ಕಾಲಿಕವಾಗಿ ಎರಡು ವರ್ಷಗಳ ಕ್ರಮವನ್ನು ತೆಗೆದುಕೊಳ್ಳಲಾಗಿದೆ. 2021 ರ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಅನೇಕ ಕೆನಡಿಯನ್ನರ ಆರ್ಥಿಕ ವ್ಯಾಪ್ತಿಯನ್ನು ಮೀರಿ ಮನೆಗಳ ಬೆಲೆಗಳು ಏರಿಕೆ ಕಂಡಿದ್ದವು. ಆದ್ದರಿಂದ, ಈ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

"ಲಾಭ ಮಾಡಲು ಬಯಸುವವರು, ಶ್ರೀಮಂತ ಜನರು ಹಾಗೂ ವಿದೇಶಿ ಹೂಡಿಕೆದಾರರನ್ನು ಕೆನಡಾದ ಮನೆಗಳು ಆಕರ್ಷಿಸುತ್ತವೆ' ಎಂದು ಜಸ್ಟಿನ್ ಟ್ರುಡೊ ಲಿಬರಲ್ ಪಕ್ಷವು ಆರೋಪಿಸಿತ್ತು.

ಇಲ್ಲಿ ಬಳಕೆಯಾಗದ ಹಾಗೂ ಖಾಲಿ ಇರುವ ವಸತಿಗಳ ಬೆಲೆಗಳು ಗಗನಕ್ಕೆ ಏರಿವೆ. ಮನೆಗಳು ಇರುವುದು ಜನರಿಗೆ ಹೊರತು ಹೂಡಿಕೆದಾರರಿಗೆ ಅಲ್ಲ ಎಂದು ಲಿಬರಲ್‌ ಪಕ್ಷವು ಪ್ರತಿಪಾದಿಸಿದೆ.

ಅವರ 2021 ರ ಚುನಾವಣಾ ವಿಜಯದ ನಂತರ, ವಿದೇಶಿಯರಿಗೆ ಮನೆಗಳನ್ನು ಖರೀದಿಸುವ ಅವಕಾಶ ನೀಡಬಾರದೆಂದು ಕೆನಡಾ ಜನರು ಒತ್ತಾಯ ಮಾಡಿದ್ದಾರೆ. ಹೀಗಾಗಿ, ಈ ಕಾನೂನನ್ನು ತರಲಾಗಿದೆ ಎಂದು ಸರ್ಕಾರ ತಿಳಿಸಿದೆ.

Most Foreigners In Canada Banned From Buying Houses For 2 Years

ವ್ಯಾಂಕೋವರ್ ಮತ್ತು ಟೊರೊಂಟೊದಂತಹ ಪ್ರಮುಖ ನಗರಗಳಲ್ಲಿ ಅನಿವಾಸಿಗಳು ಮತ್ತು ಖಾಲಿ ಮನೆಗಳ ಮೇಲೆ ತೆರಿಗೆಗಳನ್ನು ಹೇರಿವೆ.

ಇತ್ತೀಚಿನ ಹಣದುಬ್ಬರವನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಬ್ಯಾಂಕ್ ಆಫ್ ಕೆನಡಾದ ಆಕ್ರಮಣಕಾರಿ ನೀತಿಗಳು ಸಫಲವಾಗಿವೆ. ಹೀಗಾಗಿ, ದೇಶದ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಮಾರಾಟಗಾರರಿಗೆ ಹೆಚ್ಚು ಬೆಂಬಲವಾಗಿ ನಿಂತಿದೆ.

ಕೆನಡಾದ ರಿಯಲ್ ಎಸ್ಟೇಟ್ ಅಸೋಸಿಯೇಷನ್‌ನ ಪ್ರಕಾರ, 2022 ರ ಆರಂಭದಲ್ಲಿ ಕ್ಯಾನ್ $800,000 (590,000 US ಡಾಲರ್‌) ಗಿಂತ ಹೆಚ್ಚಿನ ಸರಾಸರಿ ಮನೆ ಬೆಲೆಗಳು ಇದ್ದವು. ಕಳೆದ ತಿಂಗಳು ಕೇವಲ Can$630,000 (US$465,000) ಕ್ಕೆ ಇಳಿದಿವೆ.

ರಾಷ್ಟ್ರೀಯ ಅಂಕಿಅಂಶಗಳ ಏಜೆನ್ಸಿಯ ಪ್ರಕಾರ, ಕೆನಡಾದಲ್ಲಿ ಐದು ಪ್ರತಿಶತಕ್ಕಿಂತ ಕಡಿಮೆ ಮನೆ ಮಾಲೀಕತ್ವವನ್ನು ವಿದೇಶಿ ಖರೀದಿದಾರರ ಹೊಂದಿದ್ದಾರೆ. ಹೀಗಾಗಿ, ಈ ಕಾನೂನು ಯಾವುದೇ ಪರಿಣಾಮವನ್ನು ಉಂಟು ಮಾಡುವುದಿಲ್ಲ ಎಂದು ಹೇಳಿದೆ.

ಬದಲಿಗೆ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ವಸತಿ ನಿರ್ಮಾಣದ ಅಗತ್ಯವನ್ನು ತಜ್ಞರು ಸೂಚಿಸಿದ್ದಾರೆ.

ಕೆನಡಾ ಮಾರ್ಟ್‌ಗೇಜ್ ಅಂಡ್ ಹೌಸಿಂಗ್ ಕಾರ್ಪೊರೇಷನ್ (ರಾಷ್ಟ್ರೀಯ ವಸತಿ ಸಂಸ್ಥೆ)- ಜೂನ್ ವರದಿಯಲ್ಲಿ 2030 ರ ವೇಳೆಗೆ 19 ಮಿಲಿಯನ್ ವಸತಿ ಘಟಕಗಳು ಬೇಕಾಗುತ್ತವೆ ಎಂದು ಹೇಳಿದೆ. ಅಂದರೆ 5.8 ಮಿಲಿಯನ್ ಹೊಸ ಮನೆಗಳನ್ನು ಕೆನಡಾದಲ್ಲಿ ನಿರ್ಮಿಸಬೇಕು.

English summary
A ban on foreigners buying residential property in Canada took effect on Sunday, aiming to make more homes available to locals facing a housing crunch. Several exceptions in the act allow individuals such as refugees and permanent residents who are not citizens to buy homes,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X