Earthquake: 632 ಜನರನ್ನು ಬಲಿಪಡೆದ ಭೀಕರ ಭೂಕಂಪ
ರಬಾತ್: ಭೀಕರ ಭೂಕಂಪದ ನಂತರ ಸಂಕಷ್ಟಕ್ಕೆ ಸಿಲುಕಿರುವ ಮೊರಾಕ್ಕೊ ದೇಶದ ಜನ ಬೀದಿಗೆ ಬಿದ್ದು ನರಳುವಂತಾಗಿದೆ. ಹಾಗೆ ಸಾವಿನ ಸಂಖ್ಯೆ ಕೂಡ ದಿಢೀರ್ ಏರಿಕೆಯಾಗಿದ್ದು 632 ಜನರು ಈವರೆಗೂ ಈ ದುರಂತಕ್ಕೆ ಬಲಿಯಾಗಿದ್ದಾರೆ. ನೂರಾರು ಕಟ್ಟಡಗಳು ಉರುಳಿ ಬಿದ್ದ ಹಿನ್ನೆಲೆ, ಅವಶೇಷದ ಅಡಿಯಲ್ಲಿ ಸಾಕಷ್ಟು ಜನ ಸಿಲುಕಿದ್ದಾರೆ. ಹೀಗಾಗಿ ಕಟ್ಟಡಗಳ ಕೆಳಗೆ ಸಿಲುಕಿದವರಲ್ಲಿ ಹೆಚ್ಚಿನ ಜನರು ಮೃತಪಟ್ಟಿರುವ ಆತಂಕ ಮನೆಮಾಡಿದೆ.
ನಿನ್ನೆ ರಾತ್ರಿ ಮೊರಾಕ್ಕೊದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಈ ವೇಳೆಗೆ ನೂರಾರು ಕಟ್ಟಡಗಳು ಕುಸಿದು ಬಿದ್ದಿದ್ದವು. ಮರ್ರಾಕೆಚ್ ನೈಋತ್ಯಕ್ಕೆ 71 ಕಿಲೋ ಮೀಟರ್ ದೂರದಲ್ಲಿ ಕಂಪನ ಕೇಂದ್ರ ಬಿಂದು ದಾಖಲಾಗಿದೆ. ಪ್ರವಾಸಿ ನಗರ ಎಂದೇ ಖ್ಯಾತಿ ಪಡೆದ ಮರ್ರಾಕೆಚ್ ಪ್ರದೇಶದಲ್ಲಿ ನೂರಾರು ಜನ ಬಲಿಯಾಗಿದ್ದಾರೆ. ಇದರ ಜೊತೆಗೆ ಔರ್ಜಾಜೆಟ್ ಪ್ರಾಂತ್ಯದಲ್ಲೂ ಹೆಚ್ಚು ನಷ್ಟ ಸಂಭವಿಸಿದೆ. ಇದೀಗ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದ್ದು, ಕಟ್ಟಡಗಳ ಅವಶೇಷದ ಅಡಿ ಸಿಲುಕಿದವರ ರಕ್ಷಣೆಗೆ ಪ್ರಯತ್ನಿಸಲಾಗುತ್ತಿದೆ. ಈಗ ಸಿಗುತ್ತಿರುವ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 296ರಿಂದ ದಿಢೀರ್ 632ಕ್ಕೆ ಏರಿಕೆಯಾಗಿದೆ.

Prayers for Morocco 🇲🇦 May Allah help and protect those who are effected and have mercy on everyone 🤲 pic.twitter.com/wpFyI3C9kE
— Allah Islam Quran (@AllahGreatQuran) September 9, 2023
2004ರಲ್ಲೂ ಇಂತಹದ್ದೇ ಭೀಕರ ಘಟನೆ
ಮನೆ, ಕಟ್ಟಡಗಳ ಅವಶೇಷಗಳ ಅಡಿ ಲೆಕ್ಕವಿಲ್ಲದಷ್ಟು ಜನರು ಸಿಲುಕಿ ಕೊಂಡಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಹೀಗಾಗಿ ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿಗೆ ಎಂದು ಮೊರಾಕ್ಕೊ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಕಡೆ ಭೂಕಂಪನದ ವೇಳೆ ಸೆರೆ ಸಿಕ್ಕ ವಿಡಿಯೋ ಹಾಗೂ ಸಿಸಿ ಕ್ಯಾಮೆರಾ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮರ್ರಾಕೆಚ್‌ನ ನೈಋತ್ಯ ಭಾಗ ಪದೇ ಪದೆ ಭೂಕಂಪನಕ್ಕೆ ತುತ್ತಾಗಿ ನಿತ್ಯವೂ ಪರದಾಡ್ತಿದೆ. 2004ರಲ್ಲಿ ಈಶಾನ್ಯ ಮೊರಾಕ್ಕೊದಲ್ಲಿ ಸಂಭವಿಸಿದ್ದ ಭೂಕಂಪದಲ್ಲೂ 600ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
Prayers🙏 for Morocco
— Suhan Raza (@SuhanRaza4) September 9, 2023
Powerful earthquake with M 6. 8 hit Morocco resulting in deaths of at least 296 people. #Morocco #earthquake #moroccoearthquake #deprem #morocco #maroc #earthquakes #abhisha #G20India2023 #DollarRate pic.twitter.com/dPSsOCPeDY
ಒಟ್ನಲ್ಲಿ ಪ್ರಾಕೃತಿಕ ವಿಕೋಪಗಳಿಂದ ಮಾನವ ತಪ್ಪಿಸಿಕೊಳ್ಳಲು ಆಗಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಇದೀಗ ಕೂಡ ಅಷ್ಟೇ ಮೊರಾಕ್ಕೊದಲ್ಲಿ ಸಂಭವಿಸಿದ 6.8 ತೀವ್ರತೆಯ ಪ್ರಬಲ ಭೂಕಂಪಕ್ಕೆ 632 ಜನ ಬಲಿಯಾಗಿದ್ದು, ಸಾವಿರಾರು ಮಂದಿ ಆಸ್ಪತ್ರೆಗೆ ಸೇರಿದ್ದಾರೆ. ನಿನ್ನೆ ರಾತ್ರಿಯ ತನಕ ತಣ್ಣಗೆ ಇದ್ದ ಮೊರಾಕ್ಕೊ ಬೆಳಗಾಗುವ ವೇಳೆಗೆ ಅಕ್ಷರಶಃ ನರಕವಾಗಿ ಬದಲಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಸಾವಿರದ ಗಡಿ ದಾಟುವ ಆತಂಕ ಇದೆ. ಎಲ್ಲೆಲ್ಲೂ ಜನರ ಕೂಗು ಕೇಳಿಸುತ್ತಿದ್ದು, ಸರ್ಕಾರ ಕೂಡ ರಕ್ಷಣಾ ಕಾರ್ಯಾಚರಣೆಗೆ ಪರಿತಪಿಸುತ್ತಿದೆ.
At least 632 people died due to devastating earthquake in Morocco.#Morocco #زلزال_المغرب pic.twitter.com/ojoDdIf5lU
— Md Asif Khan (@imMAK02) September 9, 2023
ಮೊರಾಕ್ಕೊ ಉತ್ತರ ಆಫ್ರಿಕಾದ ದೇಶವಾಗಿದ್ದು, ಇಲ್ಲಿಗೆ ಅತಿಹೆಚ್ಚು ಪ್ರಮಾಣದಲ್ಲಿ ಪ್ರವಾಸಿ ಪಡೆ ಬರುತ್ತದೆ. ಹಾಗೇ ಮೊರಾಕ್ಕೊ ದೇಶಕ್ಕೆ ಪ್ರವಾಸೋದ್ಯಮ ಸಾಕಷ್ಟು ಆದಾಯ ಕೂಡ ತಂದುಕೊಡತ್ತದೆ. ಹೀಗೆ ನಿನ್ನೆ ರಾತ್ರಿ ಪ್ರವಾಸಿಗರು ಆರಾಮವಾಗಿ ಓಡಾಡಿಕೊಂಡು ಇದ್ರು. ಇದ್ದಕ್ಕಿದ್ದಂತೆ ಭೂಮಿ ನಡುಗಲು ಶುರುವಾಗಿದ್ದು, ಪ್ರವಾಸಿಗರು ಓಡಿ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಕಟ್ಟಡಗಳು ಕೂಡ ಕುಸಿದಿವೆ. ಜನರಿಗೆ ಎಲ್ಲಿ ಹೋಗೋದು ದೇವರೆ ಅಂತಾ ಚಿಂತೆ ಶುರುವಾಗಿದೆ. ನೋಡ ನೋಡುತ್ತಲೇ ಮೊರಾಕ್ಕೊ ಸ್ಮಶಾನವಾಗಿ ಬದಲಾಗಿತ್ತು. ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳು ಮೊರಾಕ್ಕೊ ನೋವಿಗೆ ಸ್ಪಂದಿಸಿವೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications