• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಲಿಬಾನ್ ಆಕ್ರಮಿತ ಅಫ್ಘನ್‌ನಲ್ಲಿ ತಿಂಗಳ ನಂತರ ಎದುರಾಗಿದೆ ಆರ್ಥಿಕ ಬಿಕ್ಕಟ್ಟು

|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 15: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡ ತಿಂಗಳ ನಂತರ ಇದೀಗ ಒಂದೊಂದೇ ಸಮಸ್ಯೆಗಳು ಎದುರಾಗುತ್ತಿವೆ. ತಮ್ಮ ಮಿಲಿಟರಿ ವಿಜಯವನ್ನು ಶಾಂತಿಯುತ ಸರ್ಕಾರವಾಗಿ ಪರಿವರ್ತಿಸುವ ಭರವಸೆಯನ್ನು ತಾಲಿಬಾನ್ ನೀಡಿದೆ. ಆದರೆ ಇದೀಗ ದೇಶದಲ್ಲಿ ಹಲವು ಭಯಾನಕ ಸಮಸ್ಯೆಗಳು ಎದುರಾಗುವ ಸೂಚನೆ ದೊರೆತಿದೆ.

ನಾಲ್ಕು ದಶಕಗಳ ಯುದ್ಧ ಹಾಗೂ ಸುಮಾರು ಹತ್ತು ಸಾವಿರ ಜನರ ಸಾವಿನ ನಂತರ ದೇಶದಲ್ಲಿ ಭದ್ರತೆ ಸಾಕಷ್ಟು ಸುಧಾರಿಸಿದೆ. ಆದರೆ ಕಳೆದ 20 ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ನೂರಾರು ಶತಕೋಟಿ ಡಾಲರ್ ವೆಚ್ಚ ಮಾಡಿದ್ದು, ಸದ್ಯಕ್ಕೆ ಅಫ್ಘಾನಿಸ್ತಾನದ ಆರ್ಥಿಕತೆ ಕುಸಿಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.

 'ಅಫ್ಘಾನ್‌ ಸ್ಥಿತಿ ದುರ್ಬಲ, ಸರ್ಕಾರದಲ್ಲಿ ಸರ್ವರಿಗೂ ಪ್ರಾತಿನಿಧ್ಯ ಅಗತ್ಯ': ಭಾರತ 'ಅಫ್ಘಾನ್‌ ಸ್ಥಿತಿ ದುರ್ಬಲ, ಸರ್ಕಾರದಲ್ಲಿ ಸರ್ವರಿಗೂ ಪ್ರಾತಿನಿಧ್ಯ ಅಗತ್ಯ': ಭಾರತ

ಬರ ಹಾಗೂ ಕ್ಷಾಮದಿಂದಾಗಿ ದೇಶದಿಂದ ಸಾವಿರಾರು ಮಂದಿ ಸ್ಥಳಾಂತರಗೊಳ್ಳುತ್ತಿದ್ದಾರೆ ಮತ್ತು ಈ ತಿಂಗಳ ಅಂತ್ಯದ ವೇಳೆಗೆ ಆಹಾರ ಕೊರತೆ ಭಯಾನಕ ರೂಪ ತಾಳಬಹುದು ಎಂದು ಅಂದಾಜಿಸಲಾಗಿದೆ. ಈ ಸಮಯದಲ್ಲಿ 14 ಮಿಲಿಯನ್ ಜನರನ್ನು ಹಸಿವಿನ ಅಂಚಿಗೆ ತಳ್ಳುತ್ತದೆ ಎಂದು ವಿಶ್ವ ಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ತಿಳಿಸಿದೆ.

ತನ್ನ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟುಗಳಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡದೇ ಎಚ್ಚೆತ್ತುಕೊಳ್ಳದೇ ಇದ್ದರೆ ದೇಶ ಬಡತನ ರೇಖೆಗಿಂತ ಕೆಳಗೆ ಇಳಿಯುವ ಅಪಾಯದಲ್ಲಿದೆ ಎಂದು ಯುಎನ್‌ಡಿಪಿ ಎಚ್ಚರಿಕೆ ನೀಡಿದೆ.

2022ರ ವೇಳೆಗೆ ಅಫ್ಘನ್‌ನ 97% ಜನರು ಬಡತನದ ಅಂಚಿನಲ್ಲಿರುತ್ತಾರೆ; UNDP2022ರ ವೇಳೆಗೆ ಅಫ್ಘನ್‌ನ 97% ಜನರು ಬಡತನದ ಅಂಚಿನಲ್ಲಿರುತ್ತಾರೆ; UNDP

ಅಫ್ಘಾನಿಸ್ತಾನದ ನೈಜ ಜಿಡಿಪಿ 13.2%ನಷ್ಟು ಸಂಕುಚಿತಗೊಳ್ಳಬಹುದು ಎಂದು ಸಂಸ್ಥೆ ಅಂದಾಜಿಸಿದ್ದು, ಇದು ಬಡತನ ದರದಲ್ಲಿ 25% ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದೆ. 'ಮಾನವೀಯ ಹಾಗೂ ಆರ್ಥಿಕ ಬಿಕ್ಕಟ್ಟಿನ ಮೇಲೆ ಸಂಪೂರ್ಣ ಅಭಿವೃದ್ಧಿ ಕುಸಿತವನ್ನು ಕಾಣಬಹುದು' ಎಂದು ಯುಎನ್ ಸಹಾಯಕ ಪ್ರಧಾನ ಕಾರ್ಯದರ್ಶಿ ಹಾಗೂ ಯುಎನ್‌ಡಿಪಿ ಏಷ್ಯಾ ಹಾಗೂ ಪೆಸಿಫಿಕ್ ಪ್ರಾದೇಶಕ ಬ್ಯೂರೋ ನಿರ್ದೇಶಕ ಕನ್ನಿ ವಿಘ್ನರಾಜ ಹೇಳಿದ್ದಾರೆ.

Month After Taliban Seizing Economic Crisis Started In Afghanistan

ಇದರೊಂದಿಗೆ, ಹೊಸ ತಾಲಿಬಾನ್ ಸರ್ಕಾರ ನೀಡಿರುವ ಮಹಿಳಾ ಹಕ್ಕುಗಳ ರಕ್ಷಣೆ ಭರವಸೆಯನ್ನು ಉಳಿಸಿಕೊಳ್ಳುತ್ತದೆಯೇ ಅಥವಾ ಅಲ್‌ಖೈದಾದಂಥ ಉಗ್ರಗಾಮಿ ಸಂಘಟನೆಗಳಿಗೆ ಆಶ್ರಯ ನೀಡುತ್ತದೆಯೇ ಎಂಬ ವಿಷಯದ ಮೇಲೆ ಗಮನ ಕೇಂದ್ರೀಕೃತವಾಗಿದೆ. ಅನೇಕ ಅಫ್ಘಾನಿಸ್ತಾನಿಗಳಿಗೆ ಸದ್ಯ ಸರಳವಾಗಿ ಬದುಕುಳಿಯುವುದೇ ಮುಖ್ಯ ಆದ್ಯತೆಯಾಗಿದೆ.

ಅಫ್ಘಾನಿಸ್ತಾನ ಈಗಾಗಲೇ ಹಸಿವಿನ ಸಮಸ್ಯೆ ಎದುರಿಸುತ್ತಿದೆ ಎಂದು ಕಾಬೂಲ್ ನಿವಾಸಿ ಅಬ್ದುಲ್ಲಾ ಹೇಳುತ್ತಾರೆ. ಬ್ಯಾಂಕುಗಳ ಹೊರಗೆ ಇನ್ನೂ ಉದ್ದವಾದ ಸಾಲುಗಳು ರೂಪುಗೊಳ್ಳುತ್ತಿವೆ. ಖರೀದಿದಾರರ ಕೊರತೆಯಿದ್ದರೂ ಜನರು ಗೃಹೋಪಯೋಗಿ ವಸ್ತುಗಳನ್ನು ನಗದಾಗಿ ಮಾರಾಟ ಮಾಡುತ್ತಿರುವ ಮಾರುಕಟ್ಟೆಗಳು ಕಾಬೂಲ್‌ನಲ್ಲಿ ಹುಟ್ಟಿಕೊಂಡಿವೆ ಎಂದು ಅಲ್ಲಿನ ಚಿತ್ರಣವನ್ನು ತೆರೆದಿಟ್ಟಿದ್ದಾರೆ.

ಶತಕೋಟಿ ಡಾಲರ್ ವಿದೇಶಿ ನೆರವು ಅಫ್ಘಾನಿಸ್ತಾನಕ್ಕೆ ಹರಿದುಬಂದಿದ್ದರೂ ಅಫ್ಘಾನಿಸ್ತಾನದ ಆರ್ಥಿಕತೆ ಹೆಣಗುತ್ತಿದೆ. ಜನಸಂಖ್ಯೆ ಏರಿಕೆಗೆ ಅನುಗುಣವಾಗಿ ಬೆಳವಣಿಗೆ ಅಸಾಧ್ಯವೆನಿಸುತ್ತಿದೆ. ಉದ್ಯೋಗ ಕಳೆದುಕೊಂಡವರು ಒಂದೆಡೆಯಿದ್ದರೆ, ಅನೇಕ ಸರ್ಕಾರಿ ಉದ್ಯೋಗಿಗಳಿಗೆ ಕನಿಷ್ಠ ಜುಲೈ ತಿಂಗಳಿನಿಂದಲೂ ಸಂಬಳ ನೀಡಿಲ್ಲದಿರುವುದು ಆರ್ಥಿಕ ಬಿಕ್ಕಟ್ಟಿಗೆ ಒಂದು ಉದಾಹರಣೆಯಾಗಿದೆ.

'ದೇಶದಲ್ಲಿ ಭದ್ರತೆ ಉತ್ತಮವಾಗಿದೆ ಆದರೆ ನಾವು ಏನನ್ನೂ ಗಳಿಸುತ್ತಿಲ್ಲ' ಎಂದು ಕಾಬೂಲ್‌ನ ಬೀಬಿ ಮಹ್ರೊ ಪ್ರದೇಶದ ನಿವಾಸಿಯೊಬ್ಬರು ದುಃಖದಿಂದ ಹೇಳುತ್ತಾರೆ. ಪ್ರತಿ ದಿನ ಪರಿಸ್ಥಿತಿ ಕೆಟ್ಟದಾಗುತ್ತಿವೆ. ಇನ್ನಷ್ಟು ಕಹಿಯೆನಿಸುತ್ತಿವೆ. ಇದು ನಿಜವಾಗಿಯೂ ಅತಿ ಕೆಟ್ಟ ಪರಿಸ್ಥಿತಿ ಎಂದು ವಿವರಿಸುತ್ತಾರೆ.

ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯಾ ಗುಟೆರಸ್ ಇಡೀ ದೇಶದ ಕುಸಿತದ ಎಚ್ಚರಿಕೆ ನೀಡಿದ ನಂತರ ಅಂತರರಾಷ್ಟ್ರೀಯ ದಾನಿಗಳು ಒಂದು ಬಿಲಿಯನ್‌ಗಿಂತಲೂ ಹೆಚ್ಚಿನ ಆರ್ಥಿಕ ನೆರವು ನೀಡುವ ವಾಗ್ದಾನ ಮಾಡಿದ್ದಾರೆ. ಇದಾಗ್ಯೂ ಅಫ್ಘಾನಿಸ್ತಾನ ಪುನಶ್ಚೇತನ ಅತಿ ಕಷ್ಟಕರವೆನಿಸಿದೆ.

ತಾಲಿಬಾನ್ ಕಳೆದ ತಿಂಗಳು ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನ ಅತಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಆಗಸ್ಟ್‌ 15ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದೆ. ಎರಡು ದಶಕಗಳ ನಂತರ ಅಫ್ಘಾನ್‌ನಿಂದ ಅಮೆರಿಕ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಮಾಡಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ. ಆಗಸ್ಟ್‌ 31ರಂದು ಅಮೆರಿಕ ಪಡೆ ಅಫ್ಘಾನ್ ತೊರೆಯುತ್ತಿದ್ದಂತೆ ಸ್ವಾತಂತ್ರ್ಯ ಘೋಷಿಸಿಕೊಂಡಿರುವ ತಾಲಿಬಾನ್, ಹೊಸ ಸರ್ಕಾರ ರಚಿಸಿದೆ. ಇದೀಗ ನೆರೆ ರಾಷ್ಟ್ರಗಳೊಂದಿಗೆ ಸ್ನೇಹ ಸಾಧಿಸಿ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಿಕೊಳ್ಳಲು ಮಾರ್ಗೋಪಾಯ ಹುಡುಕಿಕೊಳ್ಳುವುದು ದೊಡ್ಡ ಸವಾಲಾಗಿದೆ.

English summary
One month after fall of Kabul, economic crisis stalks Taliban facing many problems,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X