ಟೈಮ್ ಓದುಗರ ಸಮೀಕ್ಷೆಯಲ್ಲಿ ಮೋದಿ ವರ್ಷದ ವ್ಯಕ್ತಿ

Posted By:
Subscribe to Oneindia Kannada

ನ್ಯೂಯಾರ್ಕ್, ಡಿಸೆಂಬರ್, 5: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ 2016 ನೇ ಸಾಲಿನ ಟೈಮ್ ನಿಯತಕಾಲಿಕೆಯ ವರ್ಷದ ವ್ಯಕ್ತಿಯಾಗಿದ್ದಾರೆ. ಟೈಮ್ ನಡೆಸಿದ ಅಂತರ್ಜಾಲ ಸಮೀಕ್ಷೆಯಲ್ಲಿ ಮುನ್ನೆಡೆ ಕಾಯ್ದುಕೊಂಡಿದ್ದ ಮೋದಿ ಅಂತಿಮವಾಗಿ ಅತಿಹೆಚ್ಚು ಮತಗಳನ್ನು ಗಳಿಸಿ ವರ್ಷದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕಲ್ ಕಳೆದ ವರ್ಷ ಟೈಮ್ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಮೋದಿ ಟೈಮ್ ವರ್ಷದ ವ್ಯಕ್ತಿ ಸಮೀಕ್ಷೆಯಲ್ಲಿ ಸ್ಥಾನ ಪಡೆದಿದ್ದರು.ಸಮೀಕ್ಷೆ ಡಿಸೆಂಬರ್ 4 ರಂದು ಮುಗಿದಿದ್ದು, ಇನ್ನು ಡಿಸೆಂಬರ್ 7ಕ್ಕೆ ಟೈಮ್ಸ್ ಸಂಪಾದಕರು ವರ್ಷದ ವ್ಯಕ್ತಿ ವಿಜೇತರನ್ನು ಪ್ರಕಟಿಸಲಿದ್ದಾರೆ.[ಟೈಮ್ : ಮತ್ತೆ ಮೊದಲ ಸ್ಥಾನಕ್ಕೆ ಮೋದಿ ಜಿಗಿತ]

ಶೇ.18 ರಷ್ಟು ಮತಗಳಿಂದ ವಿಜಯ

ಶೇ.18 ರಷ್ಟು ಮತಗಳಿಂದ ವಿಜಯ

ಕಪ್ಪುಹಣವನ್ನು ನಿಯಂತ್ರಿಸಲು ರು 500, ರು 1೦೦೦ ಮುಖಬೆಲೆಯ ನೋಟನ್ನು ನಿಷೇಧಿಸುವ ಮೂಲಕ ಮೋದಿ ವಿಶ್ವದೆಲ್ಲೆಡೆ ಸುದ್ದಿಯಾಗಿದ್ದರು. ಜೊತೆಗೆ ಭಾರತ ನೇತೃತ್ವದಲ್ಲಿ ನಡೆದ ಪ್ಯಾರಿಸ್ ಹವಾಮಾನ ವೈಪರೀತ್ಯ ಒಪ್ಪಂದವನ್ನು ವಿಶ್ವ ಸಮುದಾಯ ಒಪ್ಪಿಗೆ ನೀಡಿದ್ದು ಮೋದಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಹೀಗಾಗಿ ಟೈಮ್ಸ್ ಸಮಿಕ್ಷೆಯಲ್ಲಿ ಶೇ.18 ರಷ್ಟು ಮತವನ್ನು ಪಡೆದು ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿದ್ದಾರೆ.

ಸರದಿಯಲ್ಲಿ ಟ್ರಂಪ್ ಸ್ಥಾನ

ಸರದಿಯಲ್ಲಿ ಟ್ರಂಪ್ ಸ್ಥಾನ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ವಿವಾದಿತ ಹೇಳಿಕೆಗಳನ್ನು ನೀಡಿ, ಮಹಿಳೆಯರಿಂದ ಅನೇಕ ಅರೋಪವನ್ನು ಕೇಳಿದ್ದರು. ಪ್ರಪಂಚದಾದ್ಯಂತ ಬಲು ಹೆಸರು ವಾಸಿಯಾಗಿದ್ದರು ಅವರು ಟೈಮ್ಸ್ ನಿಯತಕಾಲಿಕೆಯ ಅಂತರ್ಜಾಲ ಸ್ಪರ್ಧೆಯಲ್ಲಿ ಶೇ. 7 ರಷ್ಟು ಮತ ಪಡೆದಿದ್ದಾರೆ.

ಸ್ಪರ್ಧೆಯಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಒಬಾಮಾ

ಸ್ಪರ್ಧೆಯಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಒಬಾಮಾ

ಸುದೀರ್ಘವಾಗಿ ಅಮೆರಿಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಅಮೆರಿಕ ಜನರಿಂದ ಮಾನ್ಯತೆಯನ್ನು ಪಡೆದಿದ್ದ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮಾ ಅವರು ಸಹ ಟೈಮ್ಸ್ ಸಮೀಕ್ಷೆಯಲ್ಲಿದ್ದು ಶೇ.7 ರಷ್ಟು ಮತಗಳನ್ನು ಪಡೆದಿದ್ದಾರೆ.

ವಿಕಿಲೀಕ್ಸ್ ಸ್ಥಾಪಕನಿಗೂ ಹೆಚ್ಚು ಮತಗಳು

ವಿಕಿಲೀಕ್ಸ್ ಸ್ಥಾಪಕನಿಗೂ ಹೆಚ್ಚು ಮತಗಳು

ಹೆಚ್ಚು ವಿವಾದಕ್ಕೆ ಕಾರಣವಾಗಿದ್ದ ವಿಕಿಲೀಕ್ಸ್ ಜಾಲದ ಸ್ಥಾಪಕ ಜೂಲಿಯನ್ ಅಸಾಂಜ್ ಅವರು ವೈಯಕ್ತಿಕ ವಿಷಯಗಳು ಮತ್ತು ರಾಜತಾಂತ್ರಿಕತೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದರು ಅವರಿಗೂ ಸಮೀಕ್ಷೆಯಲ್ಲಿ ಜನರು ಶೇ.7 ರಷ್ಟು ಮತಗಳನ್ನು ನೀಡಿದ್ದಾರೆ.

ಹಿಲರಿ ಕ್ಲಂಟನ್ ಗೂ ಮತದ ಮನ್ನಣೆ

ಹಿಲರಿ ಕ್ಲಂಟನ್ ಗೂ ಮತದ ಮನ್ನಣೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸಕಾರಾತ್ಮಕವಾಗಿ ಹೆಚ್ಚು ಹೆಸರು ಮಾಡಿದರೂ ಚುನಾವಣೆಯಲ್ಲಿ ಹೆಚ್ಚು ಮತಗಳಿಸಲಾಗದೇ ಸೋಲನ್ನುಂಡ ಹಿಲಿರಿ ಕ್ಲಿಂಟನ್ ಅವರಿಗೆ ಟೈಮ್ಸ್ ಸಮೀಕ್ಷೆಯಲ್ಲಿ ಶೇ.4 ರಷ್ಟು ಮತವನ್ನು ನೀಡುವ ಮೂಲಕ ಜನರು ಹರಸಿದ್ದಾರೆ.

ಜುಕರ್ ಬರ್ಗ್ ಗೂ ಮತಗಳು

ಜುಕರ್ ಬರ್ಗ್ ಗೂ ಮತಗಳು

ಫೇಸ್ ಬುಕ್ ಸಂಸ್ಥಾಪಕ ಜುಕರ್ ಬರ್ಗ್ ಅವರು ಪ್ರತಿಭಾರಿಯೂ ಟೈಮ್ ಸಮೀಕ್ಷಯಲ್ಲಿ ಇರುವ ಜುಕರ್ ಬರ್ಗ್ ಈ ಬಾರಿಯೂ ಮತಗಳನ್ನು ಪಡೆದಿದ್ದಾರೆ. ಈ ಬಾರಿ ಶೇ. 2 ರಷ್ಟು ಮತಗಳನ್ನು ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian Prime Minister Narendra Modi has won the online reader’s poll for TIME Person of the Year, beating out other world leaders, artists and politicians as the most influential figure in 2016 among people who voted. The magazine’s editors decide the final Person of the Year, but poll results provide a look at how the world sees these figures.
Please Wait while comments are loading...