ಚೀನಾ-ಭಾರತ ಮಾತುಕತೆ ಫಲಪ್ರದ, ಮೋದಿ ಆಹ್ವಾನ ಸ್ವೀಕಾರ

ಬಿಷ್ಕೆಕ್‌, ಜೂನ್ 13: ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಶೃಂಗ ಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷ ಕೀ ಜಿಂಪಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು.

ವಿವಿಧ ಅಧಿಕಾರಿಗಳೊಂದಿಗೆ ಮುಖಾ-ಮುಖಿ ಮಾತುಕತೆ ನಡೆಸಿದ ಮೋದಿ ಅವರು, ಆರ್ಥಿಕ-ಸಾಂಸ್ಕೃತಿಕ ಸಂಬಂಧಗಳ ಸುಧಾರಣೆಯ ಪ್ರಸ್ತಾಪವನ್ನು ಮೋದಿ ಇರಿಸಿದ್ದು, ಮಾತುಕತೆ ಸಫಲವಾಗಿದೆ ಎಂದು ಅಧಿಕಾರಿಗಳು ಸಭೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೋದಿ ಅವರು ಚೀನಾ ಅಧ್ಯಕ್ಷ ಕ್ಸೀ-ಜಿಂಪಿಂಗ್ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದು, ಜಿಂಪಿಂಗ್ ಅವರು ಭಾರತಕ್ಕೆ ಬರಲು ಒಪ್ಪಿದ್ದಾರೆ. ಮಾತುಕತೆ ನಂತರ ಇಬ್ಬರೂ ನಾಯಕರು ಪರಸ್ಪರ ಟ್ವಿಟ್ಟರ್‌ ನಲ್ಲಿಯೂ ಅಭಿನಂದಿಸಿಕೊಂಡಿದ್ದಾರೆ.

Modi- China president Chinping had successfull meeting

ಈ ಮುಖಾ-ಮುಖಿ ಸಭೆಗೆ 20 ನಿಮಿಷಗಳ ಕಾಲಾವಧಿ ನಿಗದಿ ಮಾಡಲಾಗಿತ್ತು, ಆದರೆ ಸಭೆಯು ಹೆಚ್ಚಿನ ಹೊತ್ತು ನಡೆದಿದ್ದು, ಹಲವು ವಿಷಯಗಳ ಚರ್ಚೆ ಇಬ್ಬರೂ ನಾಯಕರ ಮಧ್ಯೆ ನಡೆದಿದೆ.

ಮೋದಿ ಅವರು ಎರಡನೇಯ ಬಾರಿಗೆ ಪ್ರಧಾನಿ ಆಗಿ ಆಯ್ಕೆ ಆಗಿದ್ದಕ್ಕೆ ಚೀನಾ ಅಧ್ಯಕ್ಷರು ಶುಭಾಶಯಗಳನ್ನು ಕೋರಿದರು. ಅಂತೆಯೇ ಮೋದಿ ಅವರು ಸಹ ಜೂನ್ 15 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಜಿಂಪಿಂಗ್ ಅವರಿಗೆ ಶುಭಾಶಯ ತಿಳಿಸಿದರು.

Modi- China president Chinping had successfull meeting

ಇಬ್ಬರೂ ನಾಯಕರ ಮಾತುಕತೆ ಫಲಪ್ರದವಾಗಿದ್ದಕ್ಕೆ ಮೋದಿ ಅವರು ಚೈನಾದ ಮಾಂಡರಿನ್ ಭಾಷೆಯಲ್ಲಿ ಟ್ವಿಟ್ಟರ್‌ನಲ್ಲಿ ಸಂದೇಶ ಪ್ರಕಟಿಸಿರುವುದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+