ಪೋರ್ಟೋರಿಕಾದ ಸ್ಟೆಫಾನೀಸ್ ಡೆಲ್ ವಾಲೆ ಮಿಸ್ ವರ್ಲ್ಡ್ 2016

Posted By:
Subscribe to Oneindia Kannada

ಪೋರ್ಟೋರಿಕಾದ ಸ್ಟೆಫಾನೀಸ್ ಡೆಲ್ ವಾಲೆ 2016ರ ಮಿಸ್ ವರ್ಲ್ಡ್ ಕಿರೀಟ ಧರಿಸಿದ್ದಾಳೆ. ಕುತೂಹಲದಿಂದ ಕೂಡಿದ್ದ ಸ್ಪರ್ಧೆಯಲ್ಲಿ ಡೊಮಿನಿಕ್ ರಿಪಬ್ಲಿಕ್ ಮತ್ತು ಇಂಡೋನೇಷ್ಯಾದ ಸುಂದರಿಯರು ಪ್ರಮುಖ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಅರವತ್ತಾರನೇ ಅವತರಿಣಿಕೆಯ ಈ ಮಿಸ್ ವರ್ಲ್ಡ್ ಸ್ಪರ್ಧೆ ಅಮೆರಿಕಾದಲ್ಲಿ ನಡೆಯಿತು.

ಹತ್ತೊಂಬತ್ತು ವರ್ಷದ ಡೆಲ್ ವಾಲೆ ಇನ್ನೂ ವಿದ್ಯಾರ್ಥಿನಿ. ಆಕೆ ಸ್ಪ್ಯಾನಿಷ್, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳನ್ನು ಮಾತನಾಡುತ್ತಾಳೆ. ಆಕೆ ಮುಂದೆ ಮನರಂಜನಾ ಕ್ಷೇತ್ರದಲ್ಲಿ ವೃತ್ತಿ ಆರಂಭಿಸುವ ಸಾಧ್ಯತೆಗಳಿವೆ. ವಾಲೆಗೆ ಮಿಸ್ ವರ್ಲ್ಡ್ ಕಿರೀಟ ತೊಡಿಸಿದ್ದು ಕಳೆದ ಸಾಲಿನ ವಿಜೇತೆ ಸ್ಪೇನ್ ನ ಮಿರಿಯಾ ಲಲಗುನಾ. "ಇದು ದೊಡ್ಡ ಗೌರವ ಮತ್ತು ಜವಾಬ್ದಾರಿ" ಎಂದಿದ್ದಾಳೆ ಡೆಲ್ ವಾಲೆ.[ದಕ್ಷಿಣ ಆಫ್ರಿಕಾದ ಚೆಲುವೆಗೆ ಒಲಿದ ವಿಶ್ವ ಸುಂದರಿ ಪಟ್ಟ]

ಪೋರ್ಟೋರಿಕಾದ ವಿಲ್ನಿಲಿಯಾ ಮರ್ಸಿಡ್ 1975ರಲ್ಲಿ ಮಿಸ್ ವರ್ಲ್ಡ್ ಕಿರೀಟ ಧರಿಸಿದ್ದರು. ಇದೀಗ ಆ ದೇಶಕ್ಕೆ ಎರಡನೇ ಬಾರಿಗೆ ಈ ಶ್ರೇಯ ದೊರಕಿದೆ. ಈ ಸೌಂದರ್ಯ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ದೇಶಗಳ ಸುಂದರಿಯರು ಪಾಲ್ಗೊಂಡಿದ್ದರು. ಯುನೈಟೆಡ್ ಕಿಂಗ್ ಡಂ(5), ಭಾರತ (5), ಯುಎಸ್ (3), ಜಮೈಕಾ (3), ಐಸ್ ಲ್ಯಾಂಡ್ (3), ಜರ್ಮನಿ (2), ಆಸ್ಟ್ರೇಲಿಯಾ (2) ಸ್ಪರ್ಧಿಗಳು ಭಾಗವಹಿಸಿದ್ದರು.

ಮಿಸ್ ವರ್ಲ್ಡ್

ಮಿಸ್ ವರ್ಲ್ಡ್

ಈ ಬಾರಿಯ ವಿಶ್ವಸುಂದರಿ ಪೋರ್ಟೋರಿಕಾದ ಸ್ಟೆಫಾನಿಸ್ ಡೆಲ್ ವಾಲೆ ಎಂದು ಘೋಷಣೆಯಾದ ಕ್ಷಣದಲ್ಲಿ ಸುಂದರಿ ಪ್ರತಿಕ್ರಿಯಿಸಿದ್ದು ಹೀಗೆ

ಶಕ್ತಿ ಪ್ರದರ್ಶನ

ಶಕ್ತಿ ಪ್ರದರ್ಶನ

ಸುಂದರಿಯರೆಲ್ಲ ಸೇರಿ ಒಟ್ಟಾಗಿ ಶಕ್ತಿ ಪ್ರದರ್ಶಿಸುತ್ತಿರುವಂತಿದೆ.

ಮಿಸ್ ಚೀನಾ

ಮಿಸ್ ಚೀನಾ

ಮುಂದಿನ ಸಾಲಿನಲ್ಲಿ ಮುಗುಳುನಗೆ ಬೀರುತ್ತಾ ನಿಂತಿರುವುದು ಮಿಸ್ ಚೀನಾ (ಜಿಂಗ್ ಕಾಂಗ್)

ಭಾರತದ ಸುಂದರಿ

ಭಾರತದ ಸುಂದರಿ

ಮಿಸ್ ಇಂಡಿಯಾ ಪ್ರಿಯದರ್ಶನಿ ಚಟರ್ಜಿ ಸ್ಪರ್ಧೆ ವೇಳೆ ಕಾಣಿಸಿಕೊಂಡಿದ್ದು ಹೀಗೆ.

ಅಭಿನಂದನೆ

ಅಭಿನಂದನೆ

ಬ್ಯೂಟಿ ವಿಥ್ ಎ ಪರ್ಪಸ್ ಎಂಬ ಬಹುಮಾನ ಗೆದ್ದ ಮಿಸ್ ಇಂಡೋನೇಷ್ಯಾ ನತಾಶಾ ಮ್ಯಾನುಯೆಲಾ (ಎಡದಲ್ಲಿ) ಳನ್ನು ಮಿಸ್ ಇಂಡಿಯಾ ಪ್ರಿಯದರ್ಶನಿ ಚಟರ್ಜಿ ಅಭಿನಂದಿಸಿದ ಕ್ಷಣ

ಮಿಂಚು ಸುಂದರಿ

ಮಿಂಚು ಸುಂದರಿ

ಈ ಬಾರಿಯ ವಿಶ್ವಸುಂದರಿ ಪೋರ್ಟೋರಿಕಾದ ಸ್ಟೆಫಾನಿಸ್ ಡೆಲ್ ವಾಲೆ ಸ್ಪರ್ಧೆ ವೇಳೆ ಮಿಂಚು ಹರಿಸಿದಳು

ಹೂ ನಗೆ

ಹೂ ನಗೆ

ಮಿಸ್ ಡೊಮಿನಿಕನ್ ರಿಪಬ್ಲಿಕನ್ ನ ಯಾರ್ತಿಜ್ ಮಿಗುಲಿನಾ ರೇಯಾಸ್ ರಮಿರೆಜ್ ವಿಶ್ವಸುಂದರಿ ಸ್ಪರ್ಧೆಯಲ್ಲಿ ಚೆಂದದ ನಗೆ ಬೀರಿ ವೇದಿಕೆಯಲ್ಲಿ ಕಾಣಿಸಿಕೊಂಡ ಬಗೆ ಇದು

ಮೂವರು ಸುಂದರಿಯರು

ಮೂವರು ಸುಂದರಿಯರು

ಮಿಸ್ ಡೊಮಿನಿಕನ್ ರಿಪಬ್ಲಿಕನ್ ನ ಯಾರ್ತಿಜ್ ಮಿಗುಲಿನಾ ರೇಯಾಸ್ ರಮಿರೆಜ್ (ಎಡಭಾಗ), ವಿಶ್ವಸುಂದರಿ ಪೋರ್ಟೋರಿಕಾದ ಸ್ಟೆಫಾನಿಸ್ ಡೆಲ್ ವಾಲೆ (ಮಧ್ಯದಲ್ಲಿ) ಮತ್ತು ಬ್ಯೂಟಿ ವಿಥ್ ಎ ಪರ್ಪಸ್ ಎಂಬ ಬಹುಮಾನ ಗೆದ್ದ ಮಿಸ್ ಇಂಡೋನೇಷ್ಯಾ ನತಾಶಾ ಮ್ಯಾನುಯೆಲಾ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Stephanie Del Valle of Puerto Rico was crowned Miss World 2016 on Sunday, edging out runners-up from the Dominican Republic and Indonesia winning the top prize in the 66th edition of the pageant held this year in the United States.
Please Wait while comments are loading...