ಮಿಸ್ ಸೌತ್ ಆಫ್ರಿಕಾ ಮುಡಿಗೆ 2017ರ ಮಿಸ್ ಯೂನಿವರ್ಸ್ ಗರಿ

Posted By: Nayana
Subscribe to Oneindia Kannada

ಕೊಲಂಬೋ, ನವೆಂಬರ್ 27 : ಸೌತ್ ಆಫ್ರಿಕಾದ ಸುಂದರಿ ಡೆಮಿ-ಲೀ ನೆಲ್-ಪೀಟರ್ಸ್(22) ಅವರು 2017ನೇ ಸಾಲಿನ ಮಿಸ್ ಯೂನಿವರ್ಸ್ ಕಿರೀಟವನ್ನು ಭಾನುವಾರ (ನ.26) ರಂದು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಫ್ರಾನ್ಸ್ ಸುಂದರಿಗೆ ಒಲಿಯಿತು ಮಿಸ್ ಯೂನಿವರ್ಸ್ ಪಟ್ಟ

ಶ್ರೀಲಂಕಾದ ಕೊಲಂಬೋದಲ್ಲಿ ನಡೆಯುತ್ತಿರುವ 2017 ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ದಕ್ಷಿಣಾ ಆಫ್ರಿಕಾದ ಸುಂದರಿ ಸ್ಪರ್ಧೆಯಲ್ಲಿ ಜಯಗಳಿಸುವ ಮೂಲಕ ಈ ಕೀರ್ತಿಗೆ ಭಾಜನರಾಗಿದ್ದಾರೆ. ಇನ್ನು ಸ್ಪರ್ಧೆಯಲ್ಲಿ ಭಾರತದ ಶ್ರದ್ಧಾ ಶ್ರೀಧರ್ ಕಣದಲ್ಲಿದ್ದರಾದರೂ, ಟಾಪ್ 16 ರ ಪಟ್ಟಿಗೆ ಪ್ರವೇಶ ಪಡೆಯುವಲ್ಲಿ ವಿಫಲರಾದರು. ಆ ಮೂಲಕ ಮತ್ತೆ ಭಾರತದ ಮಿಸ್ ಯೂನಿವರ್ಸ್ ಕನಸು ಭಗ್ನಗೊಂಡಿದೆ.

Miss South Africa Demi-leigh Nel-Peters has been crowned Miss Universe 2017

ಇನ್ನು ಸ್ಪರ್ಧೆಯಲ್ಲಿ ಕೊಲಂಬಿಯಾ ಮೂಲದ ನಟಿ ಲಾರಾ ಗೊನ್ಸಾಲಿಸ್, ಮತ್ತು ಜಮೈಕಾದ ಢೆವಿನಾ ಬೆನೆಟ್ ಅವರು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರು. ಇನ್ನು ಮಿಸ್ ಯೂನಿವರ್ಸ್ ಆಗಿ ಡೆಮಿ ಲೀ ಪೀಟರ್ಸ್ ಆಯ್ಕೆಯಾದ ವಿಚಾರವನ್ನು ಮಿಸ್ ಯೂನಿವರ್ಸ್ ಸ್ಪರ್ಧೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. ಸ್ಪರ್ಧೆಯಲ್ಲಿ ಒಟ್ಟು92 ಭಾಗವಹಿಸಿದ್ದರು.

ಮಿಸ್ ವರ್ಲ್ಡ್ ಗೋಸ್ ಟು.. ಇಂಡಿಯಾ! ಪ್ರಶಸ್ತಿ ಗೆದ್ದ ಹರ್ಯಾಣದ ಚೆಲುವೆ

Miss South Africa Demi-leigh Nel-Peters has been crowned Miss Universe 2017

ಟಾಪ್ 13 ರಲ್ಲಿ ಥೈಲ್ಯಾಂಡ್, ಶ್ರೀಲಂಕಾ, ಸ್ಪೈನ್, ಕ್ರೋಟಿಯಾ, ಬಿಟನ್, ಯುಎಸ್ಎ, ಬ್ರೆಜಿಲ್, ಕೆನಡಾ, ಫಿಲಿಫೈನ್ಸ್, ವೆನೆಜುಲಾ ಹಾಗೂ ಚೀನಾದಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Miss South Africa Demi-leigh Nel-Peters has been crowned Miss Universe 2017, Nel-peters beat out first runner-up miss Colombia Laura Gonzalez and second runner up-Miss Jamaica Bennet for the crown sunday night.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ