• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಕ್ಷಿಣ ಆಫ್ರಿಕಾದ ಚೆಲುವೆಗೆ ಒಲಿದ ವಿಶ್ವ ಸುಂದರಿ ಪಟ್ಟ

|

ಲಂಡನ್, ಡಿ. 15: ದಕ್ಷಿಣ ಆಫ್ರಿಕಾದ ಚೆಲುವೆ ರೋಲೆನ್ ಸ್ಟ್ರಾಸ್ ಅವರು ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದಾರೆ. ಲಂಡನ್‌ನಲ್ಲಿ ಭಾನುವಾರ ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಸುಂದರಿ ಕಿರೀಟ ಮುಡಿಗೇರಿಸಿಕೊಂಡಳು.

ರನ್ನರ್ ಅಪ್ ಪ್ರಶಸ್ತಿಯು ಹಂಗೇರಿಯ ಎಡಿನಾ ಕುಲ್ಸಾರ್ ಅವರ ಪಾಲಾಗಿದೆ. ಅಮೆರಿಕದ ಎಲಿಜಬೆತ್ ಸಫ್ರಿತ್ ಮೂರನೇ ಸುಂದರಿಯಾದರು. ಸ್ಪರ್ಧೆಯಲ್ಲೊ ಒಟ್ಟು 121 ದೇಶಗಳ ಸುಂದರಿಯರು ಪಾಲ್ಗೊಂಡಿದ್ದರು.[ತವರಿನ ಸುಂದರಿಗೆ ಭದ್ರಾವತಿಯಲ್ಲಿ ಭರ್ಜರಿ ಸ್ವಾಗತ]

ಮಾಜಿ ವಿಶ್ವಸುಂದರಿ, ಬಾಲಿವುಡ್ ತಾರೆ ಐಶ್ವರ್ಯಾ ರೈ ಪತಿ ಅಭೀಷೇಕ್ ಬಚ್ಚನ್ ಮತ್ತು ಪುತ್ರಿ ಆರಾಧ್ಯಾ ಜತೆ ಕಾಣಿಸಿಕೊಂಡರು. ಮಿಸ್ ಇಂಡಿಯಾ ಕೊಯಲ್ ರಾಣಾ ನೃತ್ಯ ಕಾರ್ಯಕ್ರಮ ನೀಡಿದರು. ಕೊನೆಯ ಸುತ್ತಿನಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಇಂಗೆಂಡ್, ಬ್ರೆಜಿಲ್, ಹಂಗೇರಿ, ಕೀನ್ಯಾ, ಅಮೆರಿಕ, ಮೆಕ್ಸಿಕೋ , ಆಸ್ಟ್ರೇಲಿಯಾದ ಸುಂದರಿಯರು ಸ್ಪರ್ಧೆಯೊಡ್ಡಿದ್ದರು.[ಭದ್ರಾವತಿಯ ಆಶಾ ಭಟ್ ಜಗಮೆಚ್ಚಿದ ಸುಂದರಿ]

ವಿಶ್ವ ಸುಂದರಿಯರ ಕೆಲ ಚಿತ್ರಗಳು....(ಪಿಟಿಐ ಚಿತ್ರಗಳು)

ಸುಂದರಿ ಸಂಭ್ರಮ

ಸುಂದರಿ ಸಂಭ್ರಮ

ಲಂಡನ್ ನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾದ ಚೆಲುವೆ ರೋಲೆನ್ ಸ್ಟ್ರಾಸ್.

ಐಶ್ವರ್ಯಾ ಹಾಜರಿ

ಐಶ್ವರ್ಯಾ ಹಾಜರಿ

ಮಾಜಿ ವಿಶ್ವಸುಂದರಿ, ಬಾಲಿವುಡ್ ತಾರೆ ಐಶ್ವರ್ಯಾ ರೈ, ಪತಿ ಅಭೀಷೇಕ್ ಬಚ್ಚನ್ ಮತ್ತು ಪುತ್ರಿ ಆರಾಧ್ಯಾ ಜತೆ ಕಾಣಿಸಿಕೊಂಡು ಪ್ರಶಸ್ತಿ ವಿತರಿಸಿದರು.

ಮಿಸ್ ಇಂಡಿಯಾ ನೃತ್ಯ

ಮಿಸ್ ಇಂಡಿಯಾ ನೃತ್ಯ

ಟಾಪ್ 10 ನಲ್ಲಿ ಸ್ಥಾನ ಪಡೆದ ಮಿಸ್ ಇಂಡಿಯಾ ಕೊಯಲ್ ರಾಣಾ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು

ಜಗಮೆಚ್ಚಿದ ಸುಂದರಿ

ಜಗಮೆಚ್ಚಿದ ಸುಂದರಿ

ಅಂತಿಮ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾದ ಸುಂದರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
South African beauty Rolene Strauss was today crowned Miss World 2014 at a glittering ceremony in London as India's Koyal Rana lost out, finishing in the top 10. Miss Hungary, Edina Kulcsar, was the runner-up in the contest and Miss United States, Elizabeth Safrit, came in third
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more