ನಾಪತ್ತೆಯಾಗಿದ್ದ ಪಾಕ್ ಪತ್ರಕರ್ತ ಸಾಜಿದ್ ಸ್ವೀಡನ್‌ನಲ್ಲಿ ಶವವಾಗಿ ಪತ್ತೆ
ಇಸ್ಲಾಮಾಬಾದ್, ಮೇ 2: ಮಾರ್ಚ್‌ನಿಂದ ಕಾಣೆಯಾಗಿದ್ದ ಪಾಕಿಸ್ತಾನದ ಪತ್ರಕರ್ತ ಶವವಾಗಿ ಪತ್ತೆಯಾಗಿದ್ದಾರೆ.
ಪಾಕಿಸ್ತಾನದ ಪತ್ರಕರ್ತ ಸಾಜಿದ್ ಹುಸೇನ್ ಸ್ವೀಡನ್‌ನಲ್ಲಿ ನೆಲೆಸಿದ್ದರು. ಮಾರ್ಚ್‌ನಿಂದ ಅವರು ಕಾಣೆಯಾಗಿದ್ದರು. ಶವ ಉಪ್ಸಲದ ಫೈರಿಸ್ ನದಿಯ ಬಳಿ ಏಪ್ರಿಲ್ 23 ರಂದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸಾಜಿದ್ ಮೂಲತಹ ಬಲೂಚಿಸ್ತಾನದವರು, ಅವರು ಉಪ್ಸಾಲದಲ್ಲಿ ಪಾರ್ಟ್ ಟೈಮ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಮಾರ್ಚ್ 2 ರಂದು ನಾಪತ್ತೆಯಾಗಿದ್ದರು.

ಅವರ ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಅದು ಅಪಘಾತವೇ ಅಥವಾ ಆತ್ಮಹತ್ಯೆಯೇ ಎಂದು ತಿಳಿಯುವುದು ಕಷ್ಟವಾಗಿದೆ. ಈ ಕೊಲೆಯ ಹಿಂದೆ ಅವರ ವೃತ್ತಿಯೇ ಕಾರಣವೇ ಎಂಬುದರ ಬಗ್ಗೆ ತನಿಖೆಯಾಗುತ್ತಿದೆ. ಹುಸೇನ್ ಅವರು ಉಪ್ಸಾಲಾದಿಂದ ಸ್ಟಾಕ್‌ಹೋಮ್ಸ್‌ಗೆ ಹೋಗುವಾಗ ರೈಲಿನಲ್ಲಿ ಕೊನೆಯ ಬಾರಿಗೆ ನೋಡಿರುವುದಾಗಿ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.
ಬಲೂಚಿಸ್ತಾನ ಟೈಮ್ಸ್‌ನ ಚೀಫ್ ಎಡಿಟರ್ ಕೂಡ ಆಗಿದ್ದಾರೆ. ಅವರು ಆನ್‌ಲೈನ್ ಮ್ಯಾಗ್ಜಿನ್‌ನಲ್ಲಿ ಡ್ರಗ್ ಟ್ರಾಫಿಕಿಂಗ್, ಲಾಂಗ್ ರನ್ನಿಂಗ್ ಇನ್‌ಸರ್ಜರಿ ಕುರಿತು ಬರಹಗಳನ್ನು ಪ್ರಕಟಿಸುತ್ತಿದ್ದರು.
ಹುಸೇನ್ ಅವರ ಸಾವು ಅಪಘಾತದಿಂದ ಸಂಭವಿಸಿರುವುದಾ ಅಥವಾ ಆತ್ಮಹತ್ಯೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹುಸೇನ್ 2017ರಲ್ಲಿ ಸ್ವೀಡನ್‌ಗೆ ಬಂದಿದ್ದರು.












Click it and Unblock the Notifications