Russia & Ukraine: ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಹತ್ವದ ಮಾತುಕತೆ

ರಷ್ಯಾ & ಭಾರತದ ನಡುವೆ ಭಾರಿ ಗಟ್ಟಿಯಾದ ಸಂಬಂಧ ಇದ್ದು, ರಷ್ಯಾ & ಉಕ್ರೇನ್ ದೇಶಗಳ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಸಮಯದಲ್ಲಿ ಮತ್ತೆ ಮತ್ತೆ ಇದು ಪ್ರೂವ್ ಆಗಿದೆ. ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ವಿರೋಧ ಕಟ್ಟಿಕೊಂಡು ರಷ್ಯಾ ಒದ್ದಾಡುವಾಗ ಭಾರತವೇ ರಷ್ಯಾ ಬೆನ್ನಿಗೆ ನಿಂತಿದೆ. ಇಂತಿಪ್ಪ ರಷ್ಯಾದ ನೆಲಕ್ಕೆ ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಮಹತ್ವದ ಭೇಟಿ ನೀಡಿದ್ದಾರೆ. ಹಾಗಾದ್ರೆ, ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಮಾತನಾಡಿದ್ದು ಏನು?

ರಷ್ಯಾ & ಭಾರತ ನಡುವೆ ಹಲವು ರೀತಿಯ ವಾಣಿಜ್ಯ ಚಟುವಟಿಕೆ ನಡೆಯುತ್ತಾ ಬಂದಿದ್ದು, ಪ್ರಮುಖವಾಗಿ ರಕ್ಷಣಾ ಕ್ಷೇತ್ರದಲ್ಲಿ ಭಾರತ & ರಷ್ಯಾ ನಡುವೆ ದೊಡ್ಡ ಮಟ್ಟಿಗಿನ ವ್ಯವಹಾರ ನಡೆಯುತ್ತಿದೆ. ಹೀಗಿದ್ದಾಗ ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ನೇರ, ರಷ್ಯಾ ರಾಜಧಾನಿ ಮಾಸ್ಕೋಗೆ ಭೇಟಿ ನೀಡಿ ರಷ್ಯಾ ಅಧ್ಯಕ್ಷರಾದ ಪುಟಿನ್ ಅವರನ್ನ ಮೀಟ್ ಮಾಡಿದ್ದಾರೆ. ಅಲ್ಲದೆ ಇದೇ ವೇಳೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಕೂಡ ಚರ್ಚೆಯನ್ನು ನಡೆಸಲಾಗಿದೆ. ಹಾಗಾದ್ರೆ ಪುಟಿನ್ ಭೇಟಿ ಬಳಿಕ ರಾಜನಾಥ್ ಸಿಂಗ್ ಅವರು ಹೇಳಿದ್ದೇನು?

Minister of Defence of India Meets Russian President Putin

ಭಾರತದ ಮಿತ್ರ ರಷ್ಯಾಗೆ ಖುಷಿ!

ಹೌದು, ಭಾರತ ಇದೀಗ ನೀಡುತ್ತಿರುವ ಬೆಂಬಲ ರಷ್ಯಾಗೆ ಕೂಡ ಸಿಕ್ಕಾಪಟ್ಟೆ ಖುಷಿ ನೀಡ್ತಿದೆ. ಯಾಕಂದ್ರೆ ಇದೀಗ ರಷ್ಯಾ ಇರುವ ಪರಿಸ್ಥಿತಿಯಲ್ಲಿ ಭಾರತವೇ ಬೆಂಬಲಕ್ಕೆ ನಿಲ್ಲುತ್ತಿದ್ದು, ಈ ಹಿನ್ನೆಲೆಯಲ್ಲಿ ತನ್ನ ಕಷ್ಟಕ್ಕೆ ಬೆಂಬಲ ನೀಡುತ್ತಿರುವ ಭಾರತದ ಬಗ್ಗೆ ರಷ್ಯಾಗೆ ಖುಷಿ ಇದ್ದು ಮತ್ತಷ್ಟು ಒಪ್ಪಂದಗಳಿಗೆ ಮುಂದಾಗಿದೆ. ಆದರೆ ಇದು ಪಾಶ್ಚಿಮಾತ್ಯ ದೇಶಗಳ ಕಣ್ಣು ಕೆಂಪು ಮಾಡುತ್ತಿದೆ. ಹೀಗಿದ್ದರೂ ಇದ್ಯಾವುದಕ್ಕೂ ಭಾರತ & ರಷ್ಯಾ ನಾಯಕರು ಕೇರ್ ಮಾಡಿಲ್ಲ.

ಭಾರತಕ್ಕೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ...

ರಷ್ಯಾ ಜೊತೆಗೆ ಭಾರತ ಪ್ರಮುಖವಾದ ಹಲವು ಒಪ್ಪಂದಗಳನ್ನ ಮಾಡಿಕೊಂಡಿದೆ. ಆದರೆ ಈ ಒಪ್ಪಂದ ವಿಚಾರವಾಗಿ ಪಾಶ್ಚಿಮಾತ್ಯ ದೇಶಗಳು ಕೂಡ ಭಾರತದ ಜೊತೆಗೆ ಕಿರಿಕ್ ಮಾಡಿವೆ. ಭಾರತ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ, ಹೀಗಿದ್ದಾಗ ಭಾರತ & ರಷ್ಯಾ ಸಂಬಂಧ ಅತ್ಯಂತ ಎತ್ತರಕ್ಕೆ ತಲುಪಿದೆ ಎಂದಿದ್ದಾರೆ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು.

ಹಾಗೇ ಮತ್ತೊಂದು ಕಡೆ ಭಾರತಕ್ಕೆ ರಷ್ಯಾ ಕಡೆಯಿಂದ ಪೂರೈಕೆ ಆಗಬೇಕಿರುವ, ಇನ್ನುಳಿದ ಕ್ಷಿಪಣಿ ರಕ್ಷಣಾ ಘಟಕಗಳನ್ನು, ಆದಷ್ಟು ಬೇಗ ಪೂರೈಕೆ ಮಾಡಲು ಈಗ ರಕ್ಷಣಾ ಸಚಿವರು ಒತ್ತಾಯ ಮಾಡಿದ್ದಾರೆ. ಇಷ್ಟೆಲ್ಲದರ ನಡುವೆ ರಷ್ಯಾ & ಭಾರತದ ವ್ಯಾಪಾರ ವಹಿವಾಟನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+