ಮಿಯಾ ಖಲೀಫಾ VS ಇಸ್ರೇಲಿ ಮಹಿಳೆ! ಅಸಲಿಗೆ ಆಗಿದ್ದೇನು ಗೊತ್ತೆ?
ಇಸ್ರೇಲ್ & ಹಮಾಸ್ ನಡುವಿನ ಕಿತ್ತಾಟ ಬರೋಬ್ಬರಿ 3 ತಿಂಗಳು ಮುಗಿಸಿದೆ. ಹೀಗೆ ಇಬ್ಬರ ನಡುವಿನ ಯುದ್ಧ ಜಾಗತಿಕ ಮಟ್ಟದಲ್ಲೂ ದೊಡ್ಡ ತಲೆನೋವು ತರಿಸಿದೆ. ಕೆಲವರು ಇಸ್ರೇಲ್ ಪರ ಮಾತನಾಡುತ್ತಿದ್ದರೆ, ಇನ್ನ ಕೆಲವರು ಪ್ಯಾಲೆಸ್ತೀನ್ ಪರ ನಿಂತಿದ್ದಾರೆ. ಅದೇ ರೀತಿಯೇ ಪಡ್ಡೆ ಹುಡುಗರ ಪಾಲಿನ ಫೆವರಿಟ್ ಮಿಯಾ ಖಲೀಫಾ ಅವರು ಪ್ಯಾಲೆಸ್ತೀನ್ ಪರ ಇದ್ದಾರೆ. ಈ ನಟಿ ಇದೇ ವಿಚಾರವಾಗಿ ಇಸ್ರೇಲ್ ಮಹಿಳೆ ಜೊತೆ ಫೈಟ್ ಕೂಡ ಮಾಡಿದ್ದಾರೆ!
ಹೌದು, ಮಿಯಾ ಖಲೀಫಾ ಅವರು ಏರ್ಪೋರ್ಟ್ ಅಲ್ಲಿ ಈ ರೀತಿಯ ಘಟನೆ ಎದುರಿಸಿದ್ದಾರೆ. ಈ ಬಗ್ಗೆ ಮಿಯಾ ಖಲೀಫಾ ಅವರು ವಿಡಿಯೋ ಒಂದನ್ನ ಪೋಸ್ಟ್ ಮಾಡಿದ್ದಾರೆ. ವಿಡಿಯೋ ತೋರಿಸುವಂತೆ, ಮಿಯಾ ಖಲೀಫಾ ಮತ್ತು ಇಸ್ರೇಲ್ ಮೂಲದ ಮಹಿಳೆ ಜೊತೆಗೆ ಕಿತ್ತಾಟವು ಜೋರಾಗಿ ನಡೆದಿದೆ. ತಮ್ಮ ಕತ್ತಿನಲ್ಲಿ ಇರುವ ಡಾಲರ್ ತೋರಿಸಿ ಮಹಿಳೆ ತಾನು ಇಸ್ರೇಲ್ ಅವಳು ಎನ್ನುತ್ತಾ ಜೋರಾಗಿ ಕಿರುಚಾಡಿದ್ದಾರೆ. ಇದೇ ವೇಳೆ ಮಿಯಾ ಖಲೀಫಾ ಕೂಡ, ಆ ಮಹಿಳೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅದೇ ವಿಡಿಯೋ ಇಲ್ಲಿದೆ ಮುಂದೆ ನೋಡಿ.

ಏನಕ್ಕೆ ಶುರುವಾಯ್ತು ಕಿತ್ತಾಟ?
ಮಿಯಾ ಖಲೀಫಾ ಮೊದಲಿನಿಂದ ಪ್ಯಾಲೆಸ್ತೀನ್ ಪರವಾಗಿ ಮಾತನಾಡುತ್ತಿದ್ದಾರೆ. ಹೀಗಾಗಿಯೇ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಹಾಗೇ ಇನ್ನೊಂದು ಕಡೆ ಮಿಯಾ ಖಲೀಫಾ ಅವರಿಗೂ ಬೆಂಬಲ ವ್ಯಕ್ತವಾಗುತ್ತಿದೆ. ಹೀಗೆ ಪರ & ವಿರೋಧದ ನಡುವೆ ಇದೀಗ ಏರ್ಪೋಟ್ ಒಂದರಲ್ಲಿ ಇಸ್ರೇಲಿ ಮಹಿಳೆ ಹಾಗೂ ಮಿಯಾ ಖಲೀಫಾ ನಡುವೆ ಫೈಟಿಂಗ್ ಆಗಿದೆ. ಇನ್ನು ವಿಡಿಯೋಗೆ ಸಿಕ್ಕಾಪಟ್ಟೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪರ & ವಿರೋಧದ ಚರ್ಚೆ ಕೂಡ ಜೋರಾಗಿದೆ.
The Zionists are losing the plot. She followed me through the lobby calling me slurs and didn’t stop the entire time she was waiting for her UberPool at the Antique Jewelry Fair. She’s a vendor- something she made abundantly clear so I guess this is what her business stands for: pic.twitter.com/8Bvw5yYEYJ
— Mia K. (@miakhalifa) January 15, 2024
ಯುದ್ಧ ಶುರುವಾಗಿದ್ದು ಯಾವ ಕಾರಣಕ್ಕೆ?
ಹಮಾಸ್ ಎಸಗಿದ ಕೃತ್ಯಕ್ಕೆ ಗಾಜಾಪಟ್ಟಿ ಸಾಮಾನ್ಯ ಜನ ನಲುಗಿದ್ದು ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್ ವಿರುದ್ಧ 5000 ರಾಕೆಟ್ ಉಡಾಯಿಸಿದ್ದರು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್ ಹಿಡಿದು ಇಸ್ರೇಲ್ ಒಳಗಡೆ ನುಗ್ಗಿ ಬಿಟ್ಟರು. ರೊಚ್ಚಿಗೆದ್ದ ಇಸ್ರೇಲ್, ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಘಟನೆ ನಡೆದು ಭರ್ಜರಿ 2 ತಿಂಗಳು ಕಳೆದಿದೆ. ಹೀಗೆ 2 ತಿಂಗಳ ಅವಧಿಯಲ್ಲಿ, ತನ್ನ ಶತ್ರುಗಳನ್ನ ನಾಶ ಮಾಡಲು ಇಸ್ರೇಲ್ ಬಳಸಿದ್ದು ಸಾವಿರಾರು ಟನ್ ಬಾಂಬ್ ಎಂಬ ಆತಂಕಕಾರಿ ಮಾಹಿತಿ ಭಯ ಹುಟ್ಟಿಸುತ್ತಿದೆ. ಇದೆ ಸಮಯದಲ್ಲಿ ಜಗತ್ತಿನಾದ್ಯಂತ ಕಿತ್ತಾಟ ಜೋರಾಗಿದೆ.
23 ಲಕ್ಷ ಜನರು ಬೀದಿಪಾಲು?
ರಷ್ಯಾ & ಉಕ್ರೇನ್ ಯುದ್ಧದ ರೀತಿ ಹಮಾಸ್, ಇಸ್ರೇಲ್ ವಾರ್ ಕೂಡ ನಿಲ್ಲುವಂತೆ ಕಾಣುತ್ತಿಲ್ಲ. ಇಷ್ಟೆಲ್ಲಾ ಸಾಲದು ಅಂತಾ, ಫೈಟಿಂಗ್ ಮತ್ತಷ್ಟು ಜೋರಾಗುತ್ತಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಇನ್ನಷ್ಟು ಭೀಕರವಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಅಪಾಯ ಕೂಡ ಇದೆ. ಈವರೆಗೆ ಗಾಜಾದ ಸುಮಾರು 23 ಸಾವಿರ ನಾಗರಿಕರು ಯುದ್ಧಕ್ಕೆ ಬಲಿಯಾಗಿದ್ರೆ, ಗಾಜಾದಿಂದ ಸುಮಾರು 23 ಲಕ್ಷ ಜನರು ಬೇರೆ ಬೇರೆ ಜಾಗಗಳಿಗೆ ಜೀವ ಉಳಿಸಿಕೊಳ್ಳಲು ಹೋಗಿದ್ದಾರೆಂದು ಆರೋಪ ಮಾಡಲಾಗಿದೆ.












Click it and Unblock the Notifications