10,000 ಸೈನಿಕರನ್ನು ನಿಯೋಜಿಸಿದ ಸರ್ಕಾರ, ಮೆಕ್ಸಿಕೋ ಪರಿಸ್ಥಿತಿ ಮತ್ತಷ್ಟು ಭೀಕರ | Mexico Situation
ಮೆಕ್ಸಿಕೋ ಆಂತರಿಕ ಹಿಂಸೆಯ ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದು, ಪರಿಸ್ಥಿತಿ ನಿಭಾಯಿಸಲು ಇದೀಗ ಒದ್ದಾಡುತ್ತಿದ್ದಾರೆ ಮೆಕ್ಸಿಕೋ ನಾಯಕರು. ನೋಡ ನೋಡುತ್ತಲೇ ಇಡೀ ಮೆಕ್ಸಿಕೋ ದೇಶಕ್ಕೆ ಅಲ್ಲಿನ ಮಾದಕ ವಸ್ತುಗಳ ಜಾಲದ ಸದಸ್ಯರು ಬೆಂಕಿ ಹಚ್ಚಿ, ಹಿಂಸಾಚಾರ ನಡೆಸುತ್ತಾ ಶಾಂತಿ ಕದಡುತ್ತಿರುವ ಆರೋಪ ಕೇಳಿಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ದಿಢೀರ್ 10,000 ಪಡೆಗಳನ್ನ ನಿಯೋಜನೆ ಮಾಡಿದ ಮೆಕ್ಸಿಕೋ, ಹಿಂಸಾಚಾರ ನಿಭಾಯಿಸಲು ಹರಸಾಹಸ ಪಡುತ್ತಿದೆ. ಹಲವು ನಗರಗಳು ಈಗಾಗಲೇ ಬಂದ್ ಆಗಿದ್ದು, ಮೆಕ್ಸಿಕೋ ಪ್ರಜೆಗಳು ಹೊರಗೆ ಬರಲು ಯೋಚನೆ ಮಾಡುತ್ತಿದ್ದಾರೆ.
ಅಷ್ಟಕ್ಕೂ ಮಾದಕ ವಸ್ತುಗಳ ಜಾಲದ ಡಾನ್ ಹತ್ಯೆ ನಂತರ ಮೆಕ್ಸಿಕೋ ಈ ರೀತಿಯಾಗಿ ಹಿಂಸೆ ಕೂಪಕ್ಕೆ ಬಿದ್ದಿದ್ದು, ಅತ್ಯಂತ ಪ್ರಭಾವಶಾಲಿ ವ್ಯಕ್ತಿಯ ಸಾವಿನ ನಂತರ ಇಡೀ ದೇಶ ಧಗಧಗ ಅಂತಿದೆ. ಈಗಾಗಲೇ ಸುಮಾರು 30,000 ಮಾದಕ ವಸ್ತು ಜಾಲದ ಸದಸ್ಯರು ಗಲಾಟೆ ಶುರು ಮಾಡಿದ್ದು, ಹಿಂಸಾಚಾರ ತೀವ್ರ ಮಾಡಿದ್ದಾರೆ ಎಂಬ ಆರೋಪ ಇದೆ. ಇದೀಗ ಶುರುವಾಗಿರುವ ಹಿಂಸಾಚಾರದಲ್ಲಿ 27 ಭದ್ರತಾ ಸಿಬ್ಬಂದಿ ಹಾಗೂ 46 ಶಂಕಿತರು ಸೇರಿ ಒಬ್ಬ ಸಾಮಾನ್ಯ ನಾಗರಿಕ ಮೃತಪಟ್ಟಿರುವ ಅರೋಪವು ಈಗ ಕೇಳಿ ಬಂದಿದೆ. ಮತ್ತೊಂದು ಕಡೆ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಅದು ಇಡೀ ದೇಶವನ್ನೇ ಸುಟ್ಟು ಹಾಕುವ ಭಯ ಕೂಡ ಎದುರಾಗಿದೆ.

ಜನರಲ್ಲಿ ಧೈರ್ಯ ತುಂಬುವ ಪ್ರಯತ್ನ
ಮೆಕ್ಸಿಕೋ ಸರ್ಕಾರ ಜನರಲ್ಲಿ ಈಗ ಭಯ ಹೋಗಲಾಡಿಸಿ ಪ್ರಕ್ಷುಬ್ಧತೆ ನಿರ್ವಹಿಸುವ ಮೂಲಕ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದೆ. ಹೀಗಿದ್ದರೂ ವಾತಾವರಣ ಮಾತ್ರ ಕ್ಷಣಕ್ಷಣಕ್ಕೂ ಕೈಮೀರಿ ಹೋಗ್ತಾ ಇದ್ದು, ಜಗತ್ತಿನ ಶ್ರೀಮಂತ ದೇಶ ಅಮೆರಿಕದ ನೆರೆಯ ದೇಶದಲ್ಲೇ ಇಂತಹ ವಾತಾವರಣ ನಿರ್ಮಾಣ ಆಗಿರುವುದು ಗಡಿಯಲ್ಲಿ ಸಹಜವಾಗಿ ಉದ್ವಿಗ್ನತೆ ಹೆಚ್ಚು ಮಾಡಿದೆ. ಅಲ್ಲದೆ ಅಮೆರಿಕ ಸೇನೆ ಕೂಡ ಈ ಪರಿಸ್ಥಿತಿ ನಿಭಾಯಿಸಲು ಗಡಿಯಲ್ಲಿ ಮತ್ತಷ್ಟು ಪಡೆಗಳನ್ನು ನಿಯೋಜಿಸಿದೆ.












Click it and Unblock the Notifications