ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಪಡೆದಿದ್ದ ವೈದ್ಯನ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

|
Google Oneindia Kannada News

ಮೆಕ್ಸಿಕೋ, ಜನವರಿ 03: ಕೊರೊನಾ ಲಸಿಕೆ ಪಡೆದ ಓರ್ವ ವೈದ್ಯರ ಆರೋಗ್ಯ ಸ್ಥಿತಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

ಇದೀಗ ವೈದ್ಯರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಜಗತ್ತಿನ ಕೋವಿಡ್ ಲಸಿಕೆಯ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫೈಜರ್ ಸಂಸ್ಥೆಯ ಲಸಿಕೆ ಪಡೆದ ಮೆಕ್ಸಿಕೊದ ವೈದ್ಯರ ಸ್ಥಿತಿ ಗಂಭೀರವಾಗಿದ್ದು. ಉಸಿರಾಟದ ತೊಂದರೆ ಮತ್ತು ಎನ್ಸೆಫಲೋಮೈಲಿಟಿಸ್ (ತೀವ್ರವಾದ ವೈರಸ್ ನಿಂದ ಮೆದುಳು ಮತ್ತು ಬೆನ್ನುಹುರಿಯ ಉರಿಯೂತ) ಬಳಲುತ್ತಿದ್ದಾರೆ.

4 ರೀತಿಯ ಕೊರೊನಾವೈರಸ್ ರೂಪಾಂತರ ಜಗತ್ತಿನಲ್ಲಿ ಹರಡುತ್ತಿದೆ: WHO ಎಚ್ಚರಿಕೆ4 ರೀತಿಯ ಕೊರೊನಾವೈರಸ್ ರೂಪಾಂತರ ಜಗತ್ತಿನಲ್ಲಿ ಹರಡುತ್ತಿದೆ: WHO ಎಚ್ಚರಿಕೆ

ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಅವರನ್ನು ತೀವ್ರ ನಿಗಾಘಟಕಕ್ಕೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಲಸಿಕೆ ಪಡೆದ ವೈದ್ಯರಿಗೆ ಔಷಧಿಗಳ ಅಲರ್ಜಿ ಇದ್ದು, ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ಔಷಧ ಅಲರ್ಜಿಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದರು ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.

Mexican Doctor Hospitalized After Receiving Covid-19 Vaccine

Recommended Video

ಭಾರತದ ವಿಜ್ಞಾನಿಗಳು ಇಡೀ ಪ್ರಪಂಚಕ್ಕೇ ಮಾದರಿ | Modi | Oneindia Kannada

ಫೈಜರ್ ಕೋವಿಡ್-19 ಲಸಿಕೆ ಪಡೆದ 32 ವರ್ಷದ ವೈದ್ಯರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಲಸಿಕೆ ಪಡೆದ ನಂತರ ಅರ್ಧಗಂಟೆಯೊಳಗೆ ವೈದ್ಯರಲ್ಲಿ ಚರ್ಮದ ದದ್ದುಗಳು, ಸ್ನಾಯು ಸೆಳೆತ, ಸ್ನಾಯು ದೌರ್ಬಲ್ಯ ಮತ್ತು ಉಸಿರಾಟದ ತೊಂದರೆಗಳು ಕಂಡುಬಂದಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.

English summary
Mexican authorities said they are studying the case of a 32-year-old female doctor who was hospitalized after receiving the Pfizer-BioNTech Covid-19 vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X