ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧ ಸಂಕ್ರಮಣ ಪ್ರಪಂಚ ಅಂತ್ಯದ ಸೂಚನೆಯೇ?

|
Google Oneindia Kannada News

ಬೆಂಗಳೂರು, ಮೇ 09: ಬುಧ ಸಂಕ್ರಮಣಕ್ಕೆ ಪ್ರಪಂಚವೇ ಸಿದ್ಧವಾಗಿರುವ ಹೊತ್ತಲ್ಲಿ ಆಘಾತಕಾರಿ ಮಾಹಿತಿಯೂ ಹೊರಬಿದ್ದಿದೆ. ಪ್ರಪಂಚದ ಅಂತ್ಯ ಇಂದು ಅಂದರೆ ಸೂರ್ಯನ ಎದುರು ಬುಧ ಗ್ರಹ ಬಂದಾಗಿನಿಂದ ಆರಂಭವಾಗುತ್ತಿದೆ!

ಹೌದು,,, ಬೈಬಲ್ ನ ಅಧ್ಯಯನವೊಂದ ಇದೇ ಮಾತನ್ನು ಹೇಳುತ್ತದೆ. ಅಲ್ಲದೇ ಅದಕ್ಕೆ ಕೆಲ ಆಧಾರ ಮತ್ತು ದಾಖಲೆಗಳನ್ನು ನೀಡಿದೆ. ಮೇ 6 ರಂದು ಹೊಸ ಚಂದ್ರಮಾನ ಆರಂಭವಾಗಿದೆ. ಚಂದ್ರ ಇದೇ ವೇಳೆ ಭೂಮಿಗೆ ಅತಿ ಹತ್ತಿರಕ್ಕೆ ಬಂದಿದ್ದ.[ಕಣ್ಣು ಕಾಣದ ಅಜ್ಜಿ ಹೇಳಿದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ]

sun

ಇದಾಗಿ ಮೂರು ದಿನದ ಅವಧಿಯಲ್ಲಿ ಬುಧ ಸಂಕ್ರಮಣ ಜರಗುತ್ತಿದೆ. ಚಂದ್ರ ಸಹ ಕುಡುಗೋಲಿನ ಆಕಾರದಲ್ಲಿ ಕಾಣಿಸಿಕೊಂಡಿದ್ದ. ದಿನಗಳ ಅವಧಿಯ ಲೆಕ್ಕವನ್ನು ಮೂರು ಎಂದು ಪರಿಗಣಿಸಲಾಗಿದೆ. ಬೈಬಲ್ ಪ್ರಕಾರ ಮೂರು ಅನಿಷ್ಟ ಸಂಖ್ಯೆ ಎಂದು ಪರಿಗಣಿಸ್ಪಟ್ಟಿದ್ದು ಪಾಪಗಳನ್ನು ಪ್ರತಿಫಲನ ಮಾಡುತ್ತದೆ,

ಯಾರಾದರೂ ಕ್ರಿಶ್ಚಿಯನ್ ಧರ್ಮದ ಜನ್ಮಸ್ಥಾನವಾದ ಜೇರುಸಲೆಂನಲ್ಲಿ ನಿಂತು ಚಂದ್ರನನ್ನು ನೋಡಿದರೆ ಆಘಾತ ಆಗುವುದು ನಿಜ, ಒರಿಯನ್ ನಕ್ಷತ್ರಗಳ ಗುಂಪಿನಲ್ಲಿ ಚಂದ್ರ ನುಂಗಿ ಹೋಗುವಂತೆ ಕಂಡುಬರುತ್ತಾನೆ.[ಬುಧ ಸಂಕ್ರಮಣದ ಸಂಪೂರ್ಣ ಮಾಹಿತಿ, ಇತಿಹಾಸ]

ಒಂದೆಡೆ ಕುಡುಗೋಲಿನಂತೆ ಕಾಣುವ ಚಂದ್ರ, ಇನ್ನೊಂದು ಕಡೆ ರಾಜದಂಡದ ನಡುವೆ ಸಿಕ್ಕಿಹಾಕಿಕೊಂಡ ಚಂದ್ರ ಭೂಮಿಯ ಅಂತ್ಯದ ಮೂನ್ಸೂಚನೆ ಎಂದು ಭಾವಿಸಲಾಗಿದೆ.

ಗ್ರಹಗಳ ಚಲನೆಯನ್ನು ಇಲ್ಲಿ ಆಧಾರಕ್ಕೆ ತೆಗೆದುಕೊಳ್ಳಲಾಗಿದೆ. ಸಿಂಹದ ಆಕಾರ ಆಕಾಶಲ್ಲಿ ಮೂಡಲಿದ್ದು ಸಿಂಹದ ಮುಂದಿನ ಕಾಲಿನ ಪಂಜಿನ ಬಳಿ ಈ ಸಂಕ್ರಮಣ ಸಂಭವಿಸಲಿರುವುದು ಭೂಮಿಯ ಅಂತ್ಯದ ಸೂಚನೆ ಎಂದು ಭಾವಿಸಲಾಗಿದೆ. ಇಂಥ ಅಧ್ಯಯನಗಳು ಏನೇ ಹೇಳಿಕೊಳ್ಳಲಿ ನಮ್ಮ ಜೀವನ ಕೊನೆಯಾಗುವವರೆಗೂ ಭೂಮಿಗೆ ಯಾವ ಆತಂಕ ಇಲ್ಲ ಬಿಡಿ. ನಾವೇ ತಂದುಕೊಂಡರೆ ಏನು ಮಾಡಲಿಕ್ಕಾಗಲ್ಲ.

ಬುಧ ಸಂಕ್ರಮಣ ನೇರಪ್ರಸಾರ ವೀಕ್ಷಣೆಮಾಡಿ

English summary
The planet Mercury is set to pass in front of the Sun in line with Earth on May 9 in a natural phenomenon which occurs 13 times a century.The number three is significant here as according to BibleStudy.org it is related to sex sins in the Bible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X