ಇರ್ಮಾ ಚಂಡಮಾರುತ: ಭಾರತೀಯರ ಸುರಕ್ಷತೆಗೆ ವಿದೇಶಾಂಗ ಇಲಾಖೆ ಸಜ್ಜು

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 9: ಅಮೆರಿಕ ಸೇರಿದಂತೆ ನಾಲ್ಕು ರಾಷ್ಟ್ರಗಳಲ್ಲಿ ತಾಂಡವವಾಡುತ್ತಿರುವ ಇರ್ಮಾ ಚಂಡಮಾರುತದ ಕೆಟ್ಟ ಪರಿಣಾಮ ಅನುಭವಿಸುತ್ತಿರುವ ಪ್ರದೇಶಗಳಲ್ಲಿನ ಎಲ್ಲಾ ಭಾರತೀಯರ ಜತೆ ತಾನು ಸಂಪರ್ಕದಲ್ಲಿರುವುದಾಗಿ ಕೇಂದ್ರ ವಿದೇಶಾಂಗ ಇಲಾಖೆ ತಿಳಿಸಿದೆ.

ಹರಿಕೇನ್ ಹೆಸರಿನಿಂದಲೂ ಕರೆಯಲ್ಪಡುವ ಇರ್ಮಾದ ಪ್ರಭಾವದಿಂದಾಗಿ, ವೆಜೆಜುವೆಲಾ, ಫ್ರಾನ್ಸ್ ಹಾಗೂ ಹಾಲೆಂಡ್ ದೇಶದ ಹಲವಾರು ಭಾಗಗಳು ತೊಂದರೆಗೊಳಗಾಗಿವೆ.

MEA says in touch with Indians hit by Hurricane Irma

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ವಿದೇಶಾಂಗ ಇಲಾಖೆಯ ವಕ್ತಾರರಾದ ರವೀಶ್ ಕುಮಾರ್ ಅವರು, ''ಇರ್ಮಾ ಚಂಡಮಾರುತದಿಂದ ಹಾನಿಗೊಳಗಾಗಿರುವ ನಾಲ್ಕೂ ರಾಷ್ಟ್ರಗಳಲ್ಲಿರುವ ಭಾರತೀಯ ಪ್ರಜೆಗಳ ಯೋಗಕ್ಷೇಮಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ, ಆ ರಾಷ್ಟ್ರಗಳಲ್ಲಿರುವ ಭಾರತೀಯ ಧೂತಾವಾಸ ಕಚೇರಿಗಳ ಮೂಲಕ ನಾವು ಭಾರತೀಯರ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ'' ಎಂದು ಅವರು ತಿಳಿಸಿದರು.

ಅಮೆರಿಕದಿಂದ ಬಂದ ಮಾಹಿತಿ: ಗಂಟೆಗೆ ಸುಮಾರು 260 ಕಿ.ಮೀ.ವೇಗದಲ್ಲಿ ಸಾಗುತ್ತಿರುವ ಇರ್ಮಾ ಚಂಡ ಮಾರುತವು, ಕ್ಯೂಬಾದ ಕ್ಯಾಮಾಗ್ವೆ ಆರ್ಚಿಪೆಲಾಗೊದಲ್ಲಿ ಭೂ ಕುಸಿತ ಉಂಟು ಮಾಡಿ, ಇದೀಗ ಅಮೆರಿಕದ ಫ್ಲೋರಿಡಾವನ್ನು ತಲುಪಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The external affairs ministry said on Saturday that it was monitoring the situation and communicating with the Indian diaspora in the US, Venezuela, France and the Netherlands in the wake of deadly Hurricane Irma.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ