ಪಠಾಣ್ ಕೋಟ್ ದಾಳಿ : ಭಾರತವನ್ನು ಲೇವಡಿ ಮಾಡಿದ ಮಸೂದ್

Posted By:
Subscribe to Oneindia Kannada

ಬೆಂಗಳೂರು, ಜನವರಿ 09 : ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿರುವ ಜೈಷ್ ಇ ಮೊಹಮ್ಮದ್ ಸಂಘಟನೆ ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ವ್ಯಂಗ್ಯವಾಡಿದೆ. ಭಾರತ ನೀಡುವ ಸಾಕ್ಷಿಗಳನ್ನು ಪರಿಗಣಿಸಬಾರದು ಎಂದು ಉಗ್ರ ಸಂಘಟನೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಜೈಷ್ ಇ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ಬಗ್ಗೆ 13 ನಿಮಿಷ ಮಾತನಾಡಿದ್ದು, ತನ್ನ ವೆಬ್‌ಸೈಟ್‌ಗೆ ಅದನ್ನು ಅಪ್‌ಲೋಡ್ ಮಾಡಿದ್ದಾನೆ. ಜನವರಿ 2ರಂದು ವಾಯುನೆಲೆ ಮೇಲೆ ನಡೆದ ದಾಳಿಯ ಬಗ್ಗೆ ಹಲವಾರು ಅಂಶಗಳನ್ನು ಹೇಳಿದ್ದಾನೆ. [ಪಠಾಣ್ ಕೋಟ್ ನಲ್ಲಿ ಮೋದಿ: ಟ್ವಿಟ್ಟರ್ ನಲ್ಲಿ ಭಾರೀ ಲೇವಡಿ]

terrorism

13 ನಿಮಿಷಗಳ ಭಾಷಣದಲ್ಲಿ ವಾಯುನೆಲೆಗೆ ನುಗ್ಗಿದ ಉಗ್ರರನ್ನು ನಿಗ್ರಹಿಸಲು ಭಾರತೀಯ ಸೇನಾಪಡೆ ಮಾಡಿದ ಕಾರ್ಯಾಚರಣೆಯನ್ನು ಮಸೂದ್ ಲೇವಡಿ ಮಾಡಿದ್ದಾನೆ. ಭಾರತೀಯ ಟ್ಯಾಂಕರ್, ಸೇನೆಯ ವಾಹನ, ಹೆಲಿಕಾಪ್ಟರ್‌ಗಳ ಮೇಲೆ ದಾಳಿ ಮಾಡಿದ ಬಗ್ಗೆ ಮಾಹಿತಿ ನೀಡಿದ್ದಾನೆ. [ಜನವರಿ 1ರಂದೇ ಇಬ್ಬರು ಉಗ್ರರು ವಾಯುನೆಲೆಗೆ ನುಗ್ಗಿದ್ದರು]

ಮಸೂದ್ ಭಾಷಣವನ್ನು ಆತ ನಲೆಸಿರುವ ಬಹಲ್ವಾಪುರ್‍ದಲ್ಲಿರುವ ಉರ್ದು ಪತ್ರಿಕೆ ಲಿಪ್ಯಂತಿರಿಸಿ ಪ್ರಕಟಿಸಿದೆ. ಜಿಹಾದಿಗಳು ಎಂತಹ ಕಠಿಣ ವಾತಾವಾರಣದಲ್ಲಿಯೂ ನಿದ್ದೆ ಆಹಾರವಿಲ್ಲದೇ 48 ಗಂಟೆಗಳ ಕಾಲ ಹೋರಾಟ ಮಾಡಬಲ್ಲರು ಎಂದು ಹೊಗಳಿಕೊಂಡಿರುವ ಮಸೂದ್, 6 ಜಿಹಾದಿಗಳು ವಾಯುನೆಲೆಗೆ ನುಗ್ಗಿದ್ದರು ಎಂದು ಹೇಳಿದ್ದಾನೆ.[ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ಉಗ್ರರನ್ನು ನಿಗ್ರಹಿಸುವ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಮತ್ತು ಶೂಟರ್ ಫತೇರ್ ಸಿಂಗ್ ಅವರನ್ನು ಮಸೂದ್ ಲೇವಡಿ ಮಾಡಿದ್ದಾನೆ. ಎಷ್ಟು ಉಗ್ರರು ವಾಯುನೆಲೆಗೆ ನುಗ್ಗಿದ್ದರು? ಎಂದು ತಿಳಿಯಲು ಭಾರತಕ್ಕೆ ಎರಡು ದಿನ ಬೇಕಾಯಿತು ಎಂದು ಅಪಹಾಸ್ಯ ಮಾಡಿದ್ದಾನೆ.

ಪಠಾಣ್ ಕೋಟ್ ದಾಳಿಯ ಬಗ್ಗೆ ಭಾರತ ನೀಡಿರುವ ಯಾವುದೇ ಸಾಕ್ಷಿಗಳನ್ನು ಪರಿಗಣಿಸಬಾರದು ಎಂದು ಎಚ್ಚರಿಕೆ ನೀಡಿರುವ ಮಸೂದ್, ಭಾರತ ಮಾಡುತ್ತಿರುವ ಆರೋಪಗಳಿಗೆ ತಲೆ ಭಾಗಬಾರದು ಎಂದು ಪಾಕಿಸ್ತಾನ ಸರ್ಕಾರಕ್ಕೆ ಹೇಳಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a short audio message Pakistan-based terror outfit Jaish-e-Mohammad (JeM) chief Maulana Masood Azhar celebrated the deadly terror attack on the Indian Air Force station in Pathankot, Punjab.
Please Wait while comments are loading...