ವಿಡಿಯೋಗಳಲ್ಲಿ ನೋಡಿ ಇಂಡೋನೇಷಿಯಾ ಭೂಕಂಪದ ಭೀಕರತೆ
ಇಂಡೋನೇಶಿಯಾ, ಆಗಸ್ಟ್ 07: ಭಾನುವಾರ ರಾತ್ರಿ ಇಂಡೋನೇಷ್ಯಾದಲ್ಲಿ ಸಂಭವಿಸಿದ ಭಾರಿ ಭೂಕಂಪ ನೂರಕ್ಕೂ ಹೆಚ್ಚು ಜನರ ಪ್ರಾಣ ತೆಗೆದಿದ್ದು, ಹಲವರು ಇನ್ನೂ ಕಣ್ಮರೆಯಾಗಿದ್ದಾರೆ.
ಭೂಕಂಪದ ತೀವ್ರತೆ 7.1 ರಿಕ್ಟರ್ ತೀವ್ರೆತೆಯ ಈ ವಿನಾಶಕಾರಿ ಭೂಕಂಪ ಕೋಟ್ಯಂತರ ರೂಪಾಯಿ ಹಾನಿಯನ್ನೂ ಮಾಡಿದೆ. ಬಾಲಿ ದ್ವೀಪವು ಭೂಕಂಪದ ಕೇಂದ್ರವೆಂದು ಗುರುತಿಸಲಾಗಿದ್ದು, ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿದೆ.
ಭೂಕಂಪದ ತೀವ್ರತೆಯನ್ನು ರಿಕ್ಟರ್‌ಗಳಲ್ಲಿ ಹೇಳಿದರೆ ಸಾಮಾನ್ಯರಿಗೆ ಅರ್ಥವಾಗುವುದು ಕಷ್ಟ ಅದೇ ಚಿತ್ರಗಳಲ್ಲಿ, ವಿಡಿಯೋಗಳಲ್ಲಿ ನೋಡಿದರೆಯೇ ಎಂತಹಾ ವಿನಾಶಕಾರಿ ಭೂಕಂಪ ಅದಾಗಿತ್ತು ಎಂಬುದು ಗೊತ್ತಾಗುವುದು.
ನಿನ್ನೆ ಇಂಡೋನೇಷಿಯಾದಲ್ಲಿ ನಡೆದ ಭೂಕಂಪದ ಕೆಲವು ವಿಡಿಯೋಗಳು ದೊರೆತಿದ್ದು, ವಿಡಿಯೋ ನೋಡಿದರೆ ಗೊತ್ತಾಗುತ್ತದೆ ಅದರ ತೀವ್ರತೆ ಎಷ್ಟಿತ್ತು ಎಂದು.
|
ಭೂಮಿಯೇ ಗಡ-ಗಡ
ಪ್ರಾರ್ಥನೆಗಾಗಿ ಸಾಲುಗಟ್ಟಿ ನಿಂತಿದ್ದ ಜನ ಭೂಮಿ ನಡುಗುತ್ತಲೇ ಅಲ್ಲಿಂದ ಓಡಿ ಹೊರಗೆ ಹೋಗುತ್ತಾರೆ, ಅರೆ ಸೆಕೆಂಡ್ ತಡ ಮಾಡಿದ್ದರೂ ಅವರ ಮೇಲೆ ಗೋಡೆಯೇ ಕುಸಿಯುತ್ತಿತ್ತು. ವಿಡಿಯೋ ನೋಡಿ ನೀವು ಅಲ್ಲಿದ್ದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು ಕಲ್ಪಿಸಿಕೊಳ್ಳಿ...
|
ತುಂಬಿದ ಆಸ್ಪತ್ರೆಗಳು
ಇಂಡೋನೇಷಿಯಾ ಭೂಕಂಪದ ನಂತರ ತುಂಬಿ ತುಳುಕುತ್ತಿರುವ ಆಸ್ಪತ್ರೆಗಳನ್ನು ನೋಡಿ. ಭೂಕಂಪದ ಸಮಯದಲ್ಲಿ ಜನರಲ್ಲಿ ಇರುವ ಆತಂಕವನ್ನು ನೋಡಿ...
|
ಪ್ರಾರ್ಥನೆ ಬಿಡದ ಜನ
ಭೂಕಂಪನ ಆಗುತ್ತಿದ್ದರೂ ಪ್ರಾರ್ಥನೆಯನ್ನು ನಿಲ್ಲಿಸದ ಇವರ ಭಕ್ತಿಯನ್ನು ಮೆಚ್ಚಲೇ ಬೇಕು. ತಾನು ನಿಂತ ನೆಲ ನಡುಗುತ್ತಿದ್ದರು, ಮೇಲಿನ ಛಾವಣಿ ಯಾವಾಗ ಬೇಕಾದರೂ ತನ್ನ ಮೇಲೆ ಬೀಳಬಹುದು ಎಂದು ಗೊತ್ತಿದ್ದರೂ ಇವರು ಪ್ರಾರ್ಥನೆಯನ್ನು ನಿಲ್ಲಿಸಲಿಲ್ಲ.
|
ಭಯಾನಕ ಚಿತ್ರಣ
ಭೂಕಂಪದಿಂದ ಆಗಿರುವ ಹಾನಿ, ಗಾಯಾಳುಗಳು, ಸೂರು ಕಳೆದುಕೊಂಡವರ ನೋವುಗಳನ್ನು ತೋರಿಸುವ ಈ ವಿಡಿಯೋ ಮನಕಲಕುತ್ತದೆ.

ಸೂರು ಕಳೆದುಕೊಂಡವರು
ಕೆಲ ಹೊತ್ತಿನ ಮುಂಚೆ ಇವರೆಲ್ಲಾ ನೆಮ್ಮದಿಯಾಗಿ ಮನೆಯಲ್ಲಿದ್ದರು ಆದರೆ ಪ್ರಕೃತಿಯ ಒಂದು ಸಣ್ಣ ವರ್ತನೆ ಇವರನ್ನೆಲ್ಲಾ ಸೂರಿಲ್ಲದವರನ್ನಾಗಿಸಿತು. ಸಾವಿರಾರು ಜನ ಭೂಕಂಪದಿಂದಾಗಿ ಮನೆಗಳನ್ನು ಕಳೆದುಕೊಂಡಿದ್ದಾರೆ.

ಅವಶೇಷಗಳ ಅಡಿ
ಇಂಡೋನೇಷ್ಯಾದಲ್ಲಿ ಈಗ ಎಲ್ಲಿ ನೋಡಿದರೂ ಧೂಳು. ಅವಶೇಷಗಳ ಅಡಿಗಳಲ್ಲಿ ಇನ್ನೂ ಉಸಿರಾಡುತ್ತಿರಬಹುದಾದ ಜೀವಗಳಿಗಾಗಿ ಅಗ್ನಿಶಾಮಕ ಸಿಬ್ಬಂದಿ, ವಿಪತ್ತು ರಕ್ಷಣೆ ಸಿಬ್ಬಂದಿ ಹುಡುಕಾಡುತ್ತಿದ್ದಾರೆ.












Click it and Unblock the Notifications