ಮಸೂದ್ ಅಜರ್ ಗೆ ತಕ್ಕ ಶಾಸ್ತಿ: ಭಾರತದ ಬೆನ್ನಿಗೆ ನಿಂತ ವಿಶ್ವ
ವಾಷಿಂಗ್ಟನ್, ಮೇ 02: ಮೋಸ್ಟ್ ವಾಂಟೆಡ್ ಭಯೋತ್ಪಾದಕ ಜೈಷ್ ಇ ಮೊಹಮ್ಮದ್ ಉಗ್ರ, ಮಸೂದ್ ಅಜರ್ ನನ್ನು 'ಜಾಗತಿಕ ಉಗ್ರ' ಎಂದು ಘೋಷಿಸಿರುವುದನ್ನು ಇಡೀ ಜಗತ್ತೂ ಸ್ವಾಗತಿಸುವ ಮೂಲಕ, ಭಾರತದ ಬೆನ್ನಿಗೆ ನಿಂತಿದೆ.
ಅಷ್ಟೇ ಅಲ್ಲ, ಭಯೋತ್ಪಾದನೆಯ ದಮನಕ್ಕೆ ಪಾಕಿಸ್ತಾನ ಬಿಗಿ ನಿರ್ಧಾರ ಕೈಗೊಳ್ಳಲೇಬೇಕು ಎಂಬ ಒತ್ತಡವೂ ವಿಶ್ವಸಂಸ್ಥೆಯಿಂದ ಆರಂಭವಾಗಿದೆ.
ಫೆಬ್ರವರಿ 14 ರಂದು ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಜೆಇಎಂ ಉಗ್ರ ಮಸೂದ್ ಅಜರ್ ನೇ ಈ ದಾಳಿಯ ಸಂಚುಕೋರ ಎಂಬುದು ಸಾಬೀತಾಗಿತ್ತು. ಆ ನಂತರ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ವಿಜಶ್ವಸಂಸ್ಥೆಗೆ ಭಾರತ ಒತ್ತಡ ಹೇರಿತ್ತು. ಭಾರತದೊಂದಿಗೆ ಅಮೆರಿಕ, ಫ್ರಾನ್ಸ್, ರಷ್ಯಾ ಮುಂತಾದ ದೇಶಗಳೂ ಈ ಕುರಿತು ವಿಶ್ವಸಂಸ್ಥೆಗೆ ಮನವಿ ಮಾಡಿದ್ದವು. ಆದರೆ ಚೀನಾ ಮಾತ್ರವೇ ಪಾಕಿಸ್ತಾನದ ಬೆಂಬಲಕ್ಕೆ ನಿಂತು ಅಜರ್ ನನ್ನು ರಕ್ಷಿಸಿತ್ತು.
ಈ ಬೆಳಣಿಗೆಯ ನಂತರ ಚೀನಾ ಸಹ ವಿಶ್ವಸಂಸ್ಥೆಯ ಇತರ ಸದಸ್ಯ ರಾಷ್ಟ್ರಗಳ ನಿಷ್ಠುರ ಕಟ್ಟಿಕೊಳ್ಳಬೇಕಾಯ್ತು. ಇದರಿಂದ ಆತಂಕಗೊಂಡ ಚೀನಾ ಇದೀಗ ತನ್ನ ಪಟ್ಟನ್ನು ಬದಲಿಸಿ, ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವುದಕ್ಕೆ ಇದ್ದ ತೊಡಕನ್ನು ನೊವಾರಿಸಿದೆ. ಬುಧವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಸೂದ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದೆ. ಇಡೀ ವಿಶ್ವವೂ ಈ ನಡೆಯನ್ನು ಸ್ವಾಗತಿಸಿದ್ದು, ಭಾರತದ ಬೆನ್ನಿಗೆ ನಿಂತಿವೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನಕ್ಕೂ ಇದು ಭಾರೀ ಮುಖಭಂಗ ಎನ್ನಿಸಿದೆ.
ಭಾರತ ವಿಶ್ವಸಂಸ್ಥೆಯ ಈ ನಡೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದೆ, ಸ್ವಾಗತಿಸಿದೆ.

ಸ್ವಾಗತಿಸಿದ ಅಮೆರಿಕ
"ಮಸೂದ್ ಅಝರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ ವಿಶ್ವಸಂಸ್ಥೆಯ ನಡೆ ಸ್ವಾಗತಾರ್ಹ. ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳೂ ಆತನಿಗೆ ಸಂಬಂಧಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ, ಆತನಿಗೆ ಎಲ್ಲಿಯೂ ಪ್ರವೇಶ ನೀಡದಿರುವ ಕೆಲಸವನ್ನು ಮಾಡಬೇಕಿದೆ"- ಅಮೆರಿಕ

ಧನಾತ್ಮಕ ಬೆಳವಣಿಗೆ ಎಂದ ಇಂಗ್ಲೆಂಡ್
ಇದು ದಕ್ಷಿಣ ಏಷ್ಯಾ ಭಾಗಗಳ ಮಟ್ಟಿಗೆ ಒಂದು ಧನಾತ್ಮಕ ಬೆಳವಣಿಗೆ. ವಿಶ್ವ ಸಂಸ್ಥೆಯ ಈ ನಡೆಗೆ ನನ್ನ ಸಂಪೂರ್ಣ ಸಹಮತವಿದೆ- ಇಂಗ್ಲೆಂಡ್

ಇದು ನಮ್ಮೆಲ್ಲರ ಗೆಲುವು
ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆಯೇ ಘೋಷಿಸಿದ್ದು, ನಮ್ಮೆಲ್ಲರ ಗೆಲುವು. ನಮ್ಮೆಲ್ಲರ ಪ್ರಯತ್ನದ ಹಿಂದಿದ್ದ ವಾಸ್ತವ ಸಂಗತಿಯನ್ನು ವಿಶ್ವಸಂಸ್ಥೆ ಅರ್ಥಮಾಡಿಕೊಂದಿದ್ದರ ಸೂಚನೆ ಇದು- ಫ್ರಾನ್ಸ್

ನನ್ನ ಅಡ್ಡಿ ಇಲ್ಲ ಎಂದ ಚೀನಾ
ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸದೆ ಇರುವ ಬಗ್ಗೆ ತಕರು ಎತ್ತಿದ್ದರಿಂದ ನಾನು ನನ್ನ ನಿಲುವನ್ನು ಬದಲಿಸಿ, ವಿಶ್ವಸಂಸ್ಥೆಯ ನಿಲುವಿಗೆ ನನ್ನ ಬೆಂಬಲ ಸೂಚಿಸುತ್ತಿದ್ದೇನೆ- ಚೀನಾ












Click it and Unblock the Notifications