ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನಿನ ಈ ವ್ಯಕ್ತಿ ದಿನಕ್ಕೆ 30 ನಿಮಿಷವಷ್ಟೇ ನಿದ್ರಿಸುವುದಂತೆ!

|
Google Oneindia Kannada News

ಜಪಾನಿನ ಈ ವ್ಯಕ್ತಿ ದಿನಕ್ಕೆ 30 ನಿಮಿಷವಷ್ಟೇ ಮಲಗುತ್ತಾರಂತೆ, ಹೌದು, ಆಶ್ಚರ್ಯವೆನಿಸಿದರೂ ಇದು ಸತ್ಯ.

ಡೈಸುಕೆ ಹೊರಿ 36 ವರ್ಷದ ವ್ಯಕ್ತಿ ಕಳೆದ 12 ವರ್ಷಗಳಿಂದ ದಿನಕ್ಕೆ ಅರ್ಧಗಂಟೆ ಮಾತ್ರ ನಿದ್ರಿಸುತ್ತಿದ್ದಾರೆ, ಆದರೆ ಇದುವರೆಗೆ ನಿದ್ದೆಗೆಡುವುದರಿಂದ ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬಂದಿಲ್ಲ ಎಂದು ಅವರು ಖುದ್ದಾಗಿ ಹೇಳಿಕೊಂಡಿದ್ದಾರೆ.

ಅವರು 8 ಗಂಟೆಯ ನಿದ್ದೆಯನ್ನು ಕಡಿಮೆ ಮಾಡುತ್ತಾ ಇದೀಗ ಅರ್ಧಗಂಟೆಗೆ ಬಂದು ನಿಂತಿದ್ದಾರೆ. ಅವರು ಕಡಿಮೆ ನಿದ್ದೆ ಮಾಡುವ ಸಂಘದ ಅಧ್ಯಕ್ಷರೂ ಕೂಡ ಆಗಿದ್ದಾರೆ. ಅವರು ತಮ್ಮ ನಿತ್ಯದ ಜೀವನಶೈಲಿಯಿಂದ ಬೇಸತ್ತಿದ್ದರು ಹೀಗಾಗಿ ಈ ನೂತನ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಅವರು ಜನರಿಗೆ ಕಡಿಮೆ ನಿದ್ರೆ ಮಾಡುವ ತಂತ್ರವನ್ನು ಕಲಿಸುತ್ತಾರೆ.

Man Says He Has Slept 30 Minutes A Day For Last 12 Years

ತಾನು ದಿನದಲ್ಲಿ ಅಂದುಕೊಂಡಿರುವ ಕೆಲಸವನ್ನು ಪೂರ್ತಿ ಮಾಡಲು 16 ತಾಸುಗಳು ಸಾಕಾಗುವುದಿಲ್ಲ ಎಂದು ಭಾವಿಸಿ ನಿದ್ರೆಯ ವೇಳಾಪಟ್ಟಿಯನ್ನು 8 ತಾಸಿನಿಂದ 30 ನಿಮಿಷಗಳಿಗೆ ತಗ್ಗಿಸುವ ವಿಧಾನವನ್ನು ಪ್ರಯೋಗಿಸಲು ಆರಂಭಿಸಿದೆ ಎನ್ನುತ್ತಾರೆ.

ನಾನು ಆರೋಗ್ಯವಾಗಿದ್ದೇನೆ ಹಾಗೂ ಶಕ್ತಿಯುತವಾಗಿದ್ದೇನೆ ಎನ್ನುತ್ತಾರೆ ಹೊರಿ, ಮೂರು ದಿನಗಳ ಕಾಲ ಈ ಕುರಿತು ಮಾಹಿತಿ ಪಡೆಯಲು ಜಪಾನ್‌ನ ಮಾಧ್ಯಮಗಳು ಹೊರಿ ಹಿಂದೆ ಬಿದ್ದಿದ್ದವು.

ಅವರು ಬೆಳಗ್ಗೆ 8 ಗಂಟೆಗೆ ಜಿಮ್‌ಗೆ ತೆರಳಿದರು, ಬಳಿಕ ಓದಿದರು ಬರೆದರು, ಬೆಳಗಿನ ಜಾವ 2 ಗಂಟೆಗೆ ಮಲಗಿ ಯಾವುದೇ ಅಲಾರಂ ಇಲ್ಲದೆ ಕೇವಲ 26 ನಿಮಿಷಕ್ಕೆ ಎದ್ದರು.
ಎಚ್ಚರವಾದ ಬಳಿಕ ಜಿಮ್‌ಗೆ ತೆರಳುವ ಮುನ್ನ ಸ್ನೇಹಿತರೊಂದಿಗೆ ಮಾತುಕತೆ ನಡೆಸಿದರು.

ಅವರು ವಿಡಿಯೋ ಗೇಮ್‌ಗಳು, ಸರ್ಫಿಂಗ್, ಹಾಗೂ ಕಡಿಮೆ ನಿದ್ದೆ ಮಾಡುವ ಸ್ನೇಹಿತರ ಜತೆ ಸುತ್ತಾಟ ಮಾಡುವುದರಲ್ಲಿ ರಾತ್ರಿ ಕಳೆಯುತ್ತಾರೆ. ಒಂದೇ ಬಾರಿಗೆ ನಿದ್ರೆ ಕಡಿಮೆ ಮಾಡಿಲ್ಲ, ಹಲವು ವರ್ಷಗಳಿಂದ ಅಷ್ಟಷ್ಟಾಗಿ ನಿದ್ರೆ ಕಡಿಮೆ ಮಾಡಿದ್ದೇನೆ ಎಂದು ಹೊರಿ ಹೇಳಿದ್ದಾರೆ.

12 ವರ್ಷಗಳಿಂದ ದಿನಕ್ಕೆ ಕೇವಲ 30 ನಿಮಿಷಗಳ ಕಾಲ ಮಲಗುತ್ತಾರೆ ಎಂಬುದನ್ನು ಒಪ್ಪಿಕೊಳ್ಳುವುದು ಜನರಿಗೆ ಸ್ವಲ್ಪ ಕಷ್ಟ ಆದರೂ ಇದು ಸತ್ಯ. ಯಾವುದೇ ಅಭ್ಯಾಸವನ್ನು ರೂಢಿಸಿಕೊಂಡರೆ ಅದು ಸಾಧ್ಯ ಎನ್ನುತ್ತಾರೆ ವೈದ್ಯರು.

English summary
A man claims that he has slept for just 30 minutes a day for the last 12 years to stay healthy. Daisuke Hori, 36, from Japan, said that he hardly gets tired after lowering his daily sleep schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X