Get Updates
Get notified of breaking news, exclusive insights, and must-see stories!

ಗೆಳತಿಯನ್ನು ಅಪಹರಿಸಿ ಮುಖದ ಮೇಲೆ ತನ್ನ ಹೆಸರನ್ನು ಹಚ್ಚೆ ಹಾಕಿದ

ಬ್ರೆಸಿಲಿಯಾ, ಜೂನ್ 6: ಗೆಳೆಯನೊಬ್ಬ ತನ್ನ ಮಾಜಿ ಗೆಳತಿಯನ್ನು ಅಪಹರಿಸಿ ಆಕೆಯ ಮುಖದ ಮೇಲೆ ತನ್ನ ಹೆಸರನ್ನು ಹಚ್ಚೆ ಹಾಕಿದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.

ಬ್ರೆಜಿಲ್‌ನ ಸಾವೊ ಪಾಲೊ ರಾಜ್ಯದ 18 ವರ್ಷದ ತಯಾನೆ ಕಾಲ್ಡಾಸ್ ಕಳೆದ ಶುಕ್ರವಾರ ಶಾಲೆಗೆ ಹೋಗುತ್ತಿದ್ದಾಗ, ಆಕೆಯ ಮಾಜಿ ಗೆಳೆಯ ಗೇಬ್ರಿಯಲ್ ಕೊಯೆಲ್ಹೋ ತನ್ನ ಕಾರಿನೊಳಗೆ ಅಪಹರಿಸಿದ್ದಾನೆ. ಆತ ತಾನು ಹೇಳಿದಂತೆ ಪಾಲಿಸದಿದ್ದರೆ ಆಕೆಯ ಮೇಲೆ ಹಲ್ಲೆ ನಡೆಸಲಾಗುವುದು ಹೆದರಿಸಿದ್ದಾನೆ. ಯುವತಿಯನ್ನು ವಾಹನದಲ್ಲಿ ಹತ್ತಿಸಿಕೊಂಡು ತೌಬಟೆ ಪುರಸಭೆಯಲ್ಲಿರುವ ತನ್ನ ಹಳೆಯ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ, 20 ವರ್ಷದ ಕೊಯೆಲ್ಹೋ ತನ್ನ ಪೂರ್ಣ ಹೆಸರನ್ನು ಹುಡುಗಿಯ ಮುಖದ ಬಲಭಾಗದಲ್ಲಿ ಅವಳ ಕಿವಿಯಿಂದ ಅವಳ ಗಲ್ಲದವರೆಗೆ ಹಚ್ಚೆ ಹಾಕಿದ್ದಾನೆ.

ಮರುದಿನ ತಯಾನೆ ಅವರ ತಾಯಿ ಸ್ಥಳೀಯ ಪೊಲೀಸರಿಗೆ ಮಗಳು ಕಾಣೆಯಾದ ವ್ಯಕ್ತಿಯ ವರದಿಯನ್ನು ಸಲ್ಲಿಸಿದ್ದಾರೆ. ದೂರಿನ ಬಳಿಕ ಪೊಲೀಸರು ಕೊಯೆಲ್ಹೋ ನಿವಾಸವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಅವರು ತನ್ನ ಮಗಳನ್ನು ಮನೆಗೆ ಕರೆದೊಯ್ದಿದಾಗ ಮಗಳ ಮುಖದಲ್ಲಿ ಹಚ್ಚೆ ಕಂಡು ಬೆಚ್ಚಿಬಿದ್ದಿದ್ದಾರೆ. ಬಳಿಕ ಕೊಯೆಲ್ಹೋ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಗೇಬ್ರಿಯಲ್ ಕೊಯೆಲ್ಹೋ ಅವರನ್ನು ಶನಿವಾರ ಬಂಧಿಸಿದ್ದಾರೆ. ಗೇಬ್ರಿಯಲ್ ಕೊಯೆಲ್ಹೋ ತನ್ನ ಹೆಸರನ್ನು ಅವಳ ಮುಖದ ಮೇಲೆ ಹಚ್ಚೆ ಹಾಕಲು ಸಂತೋಷ ಪಟ್ಟಿದ್ದಾನೆ.

Man Allegedly Kidnaps Ex-Girlfriend, Forcefully Tattoos His Name on Her Face

ಈ ಅಗ್ನಿ ಪರೀಕ್ಷೆಯನ್ನು ತಯಾನೆ ಕಾಲ್ಡಾಸ್ ಹಂಚಿಕೊಂಡಿದ್ದಾರೆ. 'ಈ ದಿನಗಳಲ್ಲಿ ಕಾನೂನು ಹೇಗಿದೆ ಎನ್ನುವುದು ತಿಳಿದಿದೆ. ಅವನು ಹೆಚ್ಚು ಕಾಲ ಜೈಲಿನಲ್ಲಿ ಉಳಿಯುವುದಿಲ್ಲ. ನಾನು ಅವನಿಗೆ ಹೆದರುತ್ತೇನೆ' ಎಂದಿದ್ದಾರೆ.

ತಯಾನೆ ಕಾಲ್ಡಾಸ್ ಅವರ ವಕೀಲರು ಆನ್‌ಲೈನ್‌ನಲ್ಲಿ ಅವಳ ಭಯಾನಕ ಅಗ್ನಿಪರೀಕ್ಷೆಯನ್ನು ಹಂಚಿಕೊಂಡಿದ್ದಾರೆ. ಹಲವಾರು ಬ್ರೆಜಿಲಿಯನ್ ಪ್ರಭಾವಿಗಳು ಹಚ್ಚೆ ಹಾಕಲು ಅವನಿಗೆ ಸಹಾಯ ಮಾಡಿದ್ದಾರೆ. ಘಟನೆ ಬಳಿಕ ಹೆಸರು ತೆಗೆದು ಹಾಕು ಯುವತಿ ತಯಾನೆ ಪ್ರಯತ್ನಿಸಿದ್ದಾಳೆ.

ಇಬ್ಬರೂ 2019 ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಮೊದಲಿಗೆ ಎಲ್ಲವೂ ಸರಿಯಾಗಿ ಇತ್ತು. ಸಂಬಂಧವು ಪ್ರಾರಂಭವಾದ ಸುಮಾರು ಒಂದು ವರ್ಷದ ನಂತರ, ಹಚ್ಚೆ ಕಲಾವಿದ ಕೊಯೆಲ್ಹೋ ಯುವತಿಯ ಮೇಲೆ ಅಸೂಯೆ ಮತ್ತು ಆಕ್ರಮಣವನ್ನು ಪ್ರಾರಂಭಿಸಿದನು. ಆ ಸಮಯದಲ್ಲಿ ಅವಳ ತಾಯಿ ಅವನನ್ನು ತೊರೆಯುವಂತೆ ಮನವೊಲಿಸಿದಳು. ಎಂಟು ತಿಂಗಳ ಕಾಲ ಇಬ್ಬರೂ ಬೇರ್ಪಟ್ಟರು. ಆದರೆ ಅವನು ಇನ್ನು ಮುಂದೆ ಅವಳನ್ನು ಹೊಡೆಯುವುದಿಲ್ಲ ಎಂದು ಭರವಸೆ ನೀಡಿ ಮತ್ತೆ ಒಟ್ಟಿಗೆ ಸೇರಿದರು. ಆದರೆ ಕೊಟ್ಟ ಭರವಸೆಯಂತೆ ಕೊಯೆಲ್ಹೋ ನಡೆದುಕೊಳ್ಳಲಿಲ್ಲ. ಕೊಯೆಲ್ಹೋ ಅವರನ್ನು ಬೇರೆ ಪಡೆಸಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಬಳಿಕ ಅವನು ಈ ರೀತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+