• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಮತಾ ಕುಲಕರ್ಣಿ ಬಂಧನದ ಹಿಂದೆ 'ಡಿ' ಕರಿನೆರಳು

By Mahesh
|

ನೈರೋಬಿ, ನ.16: ಒಮ್ಮೆ ಭೂಗತ ಜಗತ್ತಿನ ಸಖ್ಯ ಬೆಳೆಸಿಕೊಂಡರೆ ಮತ್ತೆ ಹಿಂತಿರುಗಲು ಸಾಧ್ಯವಿಲ್ಲ ಎಂಬ ಅಲಿಖಿತ ಘೋಷಿತ ವಾಕ್ಯ ಕೇಳಿರುತ್ತೀರಿ. ಭೂಗತ ಜಗತ್ತಿನ ಸಹವಾಸ ಮಾಡಿದ ಮಾಜಿ 'ಮಾದಕ' ನಟಿ ಮಮತಾ ಕುಲಕರ್ಣಿ ಸಾಧ್ವಿಮಣಿಯಂತೆ ಬದುಕಲು ಯತ್ನಿಸಿದರೂ ಭೂಗತ ಜಗತ್ತಿನ ಕರಾಳ ಛಾಯೆ ಆಕೆಯನ್ನು ಹಿಂಬಾಲಿಸುತ್ತಿರುವ ವಿಷಯ ಹೊರಬಿದ್ದಿದೆ.

90ರ ದಶಕದಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದ ಮಮತಾ ಕುಲಕರ್ಣಿ ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಇತ್ತೀಚೆಗೆ ಪತಿ ವಿಕ್ಕಿ ಗೋಸ್ವಾಮಿ ಜೊತೆ ಬಂಧನವಾದ ಸುದ್ದಿ ಈಗಾಗಲೇ ಜಗತ್ತಿಗೆ ತಿಳಿದಿದೆ. ದುಬೈ ಜೈಲಿನಲ್ಲಿ ಸುಮಾರು 15 ವರ್ಷಗಳ ಕಾಲ ವಿಕ್ಕಿ ಗೋಸ್ವಾಮಿ ಕಾಲದೂಡಿದ್ದರೂ ಬುದ್ಧಿ ಕಲಿಯದೆ ಮತ್ತೆ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿದ್ದ.

ದಾವೂದ್ ಸೇಡು: ಮತ್ತೆ ದಂಧೆಗಿಳಿದ ವಿಕ್ಕಿಗೆ ಸಾಥ್ ನೀಡಿದ್ದ ಭೂಗತ ಪಾತಕಿ ಛೋಟಾ ರಾಜನ್. ಕೀನ್ಯಾದ ಡ್ರಗ್ ಮಾಫಿಯಾ ಕಿಂಗ್ ಬರಾಕತ್ ಅಕ್ಷಾ ಹಾಗೂ ಪಾಕಿಸ್ತಾನದ ಡ್ರಗ್ ಡೀಲರ್ ಗುಲಾಂ ಹುಸೇನ್ ಇತ್ತೀಚೆಗೆ ಭಾರಿ ಡೀಲ್ ಕುದುರಿಸಲು ಒಂದೆಡೆ ಸೇರುತ್ತಿದ್ದರು. ಈ ಸುದ್ದಿ ಡಿ ಕಂಪನಿಗೆ ತಿಳಿದಿದೆ.

ಬದ್ಧ ವೈರಿ ಛೋಟಾ ರಾಜನ್ ಮಟ್ಟ ಹಾಕಲು ಹವಣಿಸುತ್ತಿದ್ದ ದಾವೂದ್ ಇಬ್ರಾಹಿಂ, ಕೀನ್ಯಾ ಪೊಲೀಸರಿಗೆ ಡ್ರಗ್ಸ್ ಡೀಲಿಂಗ್ ಮಾಹಿತಿ ನೀಡಿದ್ದಾನೆ. ಇದಕ್ಕಾಗಿ ಹುಸೇನ್ ಹಾಗೂ ಅಕ್ಷಾ ಅವರ ವಿರೋಧಿ ಗುಂಪು ಮಹಮ್ಮದ್ ಬಷೀರ್ ಸುಲೇಮಾನ್(ಎಂಬಿಎಸ್) ನೆರವು ಪಡೆದುಕೊಂಡಿದ್ದ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. [ಮೋದಿ ಭೀತಿ: ದಾವೂದ್ ಇಬ್ರಾಹಿಂ ಪಲಾಯನ]

ಕೀನ್ಯಾ ಪೊಲೀಸರು ತಮಗೆ ಸಿಕ್ಕ ಮಾಹಿತಿಯನ್ನು ಯುಎಸ್ ಡ್ರಗ್ ನಿಗ್ರಹ ಪಡೆಗೆ ರವಾನಿಸಿದ್ದಾರೆ. ವಿಕ್ಕಿ ಬಂಧನದ ಮೂಲಕ ರಾಜನ್ ಹಾಗೂ ಮಮತಾ ಮೇಲೆ ದಾವೂದ್ ಸೇಡು ತೀರಿಸಿಕೊಂಡಿದ್ದಾನೆ.

ಭೂಗತ ಜಗತ್ತಿನ ಕೊಂಡಿ: ಕನ್ನಡದಲ್ಲಿ ವಿಷ್ಣು ವಿಜಯ ಚಿತ್ರದಲ್ಲಿ ನಟಿಸಿದ್ದ ಮಮತಾ ಅವರು ಹಿಂದಿಯಲ್ಲಿ ಅನೇಕ ಜನಪ್ರಿಯ ನಟರ ಜೊತೆ ನಟಿಸಿದ್ದರೂ ನಟನೆಗಿಂತ ಮಾದಕತೆಯಿಂದಲೇ ಎಲ್ಲರ ಗಮನ ಸೆಳೆದಿದ್ದಳು. ಬಾಲಿವುಡ್ ಬೆಡಗಿಯರ ಭೂಗತ ಜಗತ್ತಿನ ನಂಟು ತುಂಬಾ ಹಳೆಯ ಇತಿಹಾಸ. ಹಾಜಿ ಮಸ್ತಾನ್ ನಿಂದ ಹಿಡಿದು ಅಬು ಸಲೇಂ ತನಕ ಕಥೆ ಮುಂದುವರೆಯುತ್ತಲೇ ಇದೆ. [ಮಮತಾ ಕುಲಕರ್ಣಿ ಫ್ಲ್ಯಾಶ್ ಬ್ಯಾಕ್]

ಹಿಂದಿ ಚಿತ್ರರಂಗದಿಂದ ದೂರಾಗಿದ್ದ ಮಮತಾ ಕುಲಕರ್ಣಿ ತನ್ನ ಪತಿ ವಿಕ್ಕಿ ಗೋಸ್ವಾಮಿ ಜೈಲು ಸೇರಿದಾಗ ಮುಂಬೈನ ರಿಯಲ್ ಎಸ್ಟೇಟ್ ದಂಧೆಯಲ್ಲಿ ಕೈಯಾಡಿಸಿದ್ದಳು. ಇಬ್ಬರು ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಸುದ್ದಿ ಬಂದಿತ್ತು. ಎಷ್ಟೋ ವರ್ಷಗಳ ನಂತರ ಮಮತಾ ಕುಲಕರ್ಣಿ ಮತ್ತೊಮ್ಮೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ಈಗ ಸನ್ಮಾರ್ಗದಲ್ಲಿ ನಡೆಯುತ್ತಿದ್ದೇನೆ ಎಂದಿದ್ದರು. ಈಗಲೂ ಕೂಡಾ ಮಾದಕ ವಸ್ತು ಕಳ್ಳ ಸಾಗಣೆ ಪ್ರಕರಣದಲ್ಲಿ ಮಮತಾ ಕುಲಕರ್ಣಿ ಅವರನ್ನು ಪೊಲೀಸರು ಬಂಧಿಸಿಲ್ಲ, ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಕಳಿಸಿದ್ದಾರೆ. ವಿಕ್ಕಿ ಮಾತ್ರ ಬಂಧನಕ್ಕೊಳಪಟ್ಟಿದ್ದಾನೆ ಎಂಬ ಸುದ್ದಿಯಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mamta Kulkarni who has been reportedly arrested in Kenya along with her husband Vicky Goswami is still in the custody and it seems like the story behind her arrest is more complicated than it seems. The report suggests that the information to the Police was provided by Dawood Ibrahim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more