• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಅಧ್ಯಕ್ಷರ ಮನೆ ಮುಂದೆ ಭೀಕರ ಸ್ಫೋಟ, ಉಗ್ರರ ಕೃತ್ಯ ಶಂಕೆ..?

|
Google Oneindia Kannada News

ಪ್ರವಾಸಿಗರ ಸ್ವರ್ಗ, ಹನಿಮೂನ್ ಸ್ಪಾಟ್ ಮಾಲ್ಡೀವ್ಸ್‌ ಭೀಕರ ಬಾಂಬ್ ಸ್ಫೋಟದ ಸದ್ದು ಕೇಳಿ ಬೆಚ್ಚಿಬಿದ್ದಿದೆ. ಮಾಲ್ಡೀವ್ಸ್‌ ರಾಜಧಾನಿ ಮಾಲೆಯಲ್ಲಿ ವಾಸವಿರುವ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ನಿವಾಸದ ಬಳಿ ಭೀಕರ ಬಾಂಬ್ ಸ್ಫೋಟಗೊಂಡಿದೆ. ದುರಂತದಲ್ಲಿ ನಶೀದ್‌ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.

ಕೊರೊನಾ ವಕ್ಕರಿಸಿದ ಬಳಿಕ ಇಡೀ ಜಗತ್ತು ನರಳಿದೆ. ಇದೇ ರೀತಿ ಪ್ರವಾಸಿಗರಿಗೆ ಸ್ವರ್ಗದಂತೆ ಭಾಸವಾಗುತ್ತಿದ್ದ ತಿಳಿ ನೀರಿನ ಸಾಮ್ರಾಜ್ಯ ಮಾಲ್ಡೀವ್ಸ್‌ ಕೂಡ ಆರ್ಥಿಕವಾಗಿ ತತ್ತರಿಸಿದೆ. ಒಂದ್ಕಡೆ ಕೊರೊನಾ ಅಬ್ಬರಿಸುತ್ತಿರುವಾಗಲೇ ಬಾಂಬ್ ಸ್ಫೋಟದ ಸದ್ದು ಪ್ರವಾಸಿಗರನ್ನ ಮತ್ತಷ್ಟು ಬೆಚ್ಚಿಬೀಳಿಸಿದೆ.

ಆದರೆ ಈವರೆಗೂ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಮಾಜಿ ಅಧ್ಯಕ್ಷರ ಮನೆ ಸಮೀಪವೇ ಇಂತಹ ಘಟನೆ ನಡೆದಿರುವುದು ಸಹಜವಾಗಿ ಮಾಲ್ಡೀವ್ಸ್‌ ಜನರನ್ನು ಆತಂಕಕ್ಕೆ ದೂಡಿದೆ.

ಹೀಗಾಗಿ ಸ್ಫೋಟದ ರೂವಾರಿಗಳ ಹೆಡೆಮುರಿ ಕಟ್ಟಲು ಮಾಲ್ಡೀವ್ಸ್‌ ಭದ್ರತಾ ಪಡೆಗಳು ಮುಂದಾಗಿವೆ. ಹಾಗೇ ಬಾಂಬ್ ಸ್ಫೋಟದ ತೀವ್ರತೆಗೆ ಸಾಕ್ಷಿ ಎಂಬಂತೆ, ಸ್ಫೋಟ ಸಂಭವಿಸಿದ್ದ ಸ್ಥಳದಲ್ಲಿದ್ದ ಬೈಕ್‌ ಒಂದು ಛಿದ್ರ ಛಿದ್ರವಾಗಿ ಬಿದ್ದಿದೆ.

 ಮಾಜಿ ಅಧ್ಯಕ್ಷರ ಹತ್ಯೆಗೆ ಯತ್ನ..?

ಮಾಜಿ ಅಧ್ಯಕ್ಷರ ಹತ್ಯೆಗೆ ಯತ್ನ..?

ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ನಿವಾಸವನ್ನೇ ದಿಢೀರ್ ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದು ಹಲವು ಅನುಮಾನ ಮೂಡಿಸಿದೆ. ಇದು ಮೊಹಮ್ಮದ್‌ ನಶೀದ್‌ ಹತ್ಯೆಗೆ ನಡೆದಿರುವ ಸಂಚು ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಆದರೆ ಇದನ್ನೆಲ್ಲಾ ಮಾಲ್ಡೀವ್ಸ್ ಪೊಲೀಸರು ಅಲ್ಲಗಳೆದಿದ್ದು, ತನಿಖೆಯ ನಂತರವಷ್ಟೇ ಎಲ್ಲವೂ ಸ್ಪಷ್ಟವಾಗಲಿದೆ ಎಂದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಚಾರ ಸುದ್ದಿಯಾಗುತ್ತಿದ್ದಂತೆ ಮಾಲ್ಡೀವ್ಸ್ ಸರ್ಕಾರ ಎಚ್ಚೆತ್ತು ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ಶಂಕಿತರ ಬೆನ್ನುಬಿದ್ದಿದೆ. ಭದ್ರತಾ ಪಡೆಯ ಸಿಬ್ಬಂದಿ ಶೋಧ ಆರಂಭಿಸಿದ್ದಾರೆ.

ನಶೀದ್ ಸಾವು ಬದುಕಿನ ನಡುವೆ ಹೋರಾಟ

ನಶೀದ್ ಸಾವು ಬದುಕಿನ ನಡುವೆ ಹೋರಾಟ

ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ 2008ರಿಂದ 2012ರ ವರೆಗೆ ಅಧ್ಯಕ್ಷರಾಗಿ ಆಡಳಿತವನ್ನ ನಡೆಸಿದ್ದರು. ಇದೀಗ ಮಾಲ್ಡೀವ್ಸ್ ಸಂಸತ್‌ನ ಸ್ಪೀಕರ್ ಹುದ್ದೆ ಅಲಂಕರಿಸಿರುವ ಮೊಹಮ್ಮದ್‌ ನಶೀದ್‌ ಸಾವು ಬದುಕಿನ ನಡುವೆ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ.

ನಶೀದ್‌ಗೆ ಗಾಯ

ನಶೀದ್‌ಗೆ ಗಾಯ

ಬಾಂಬ್ ಸ್ಫೋಟದಲ್ಲಿ ಗಾಯಬಾಂಬ್ ಸ್ಫೋಟದ ಬಳಿಕ ನಶೀದ್‌ ಎದೆ ಹಾಗೂ ತಲೆಗೆ ಗಂಭೀರ ಗಾಯಗಳಾಗಿವೆ. ಶಸ್ತ್ರಚಿಕಿತ್ಸೆ ಮುಗಿದಿದ್ದು ನಶೀದ್‌ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಇನ್ನೂ ಕೆಲ ಗಂಟೆಗಳ ಕಾಲ ಯಾವುದನ್ನೂ ಸ್ಪಷ್ಟಪಡಿಸಲು ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗೆ ಸೂಕ್ತ ಭದ್ರತೆ ಒದಗಿಸಲಾಗಿದೆ.

ಪ್ರವಾಸೋದ್ಯಮವೇ ಮುಖ್ಯ ಆದಾಯ

ಪ್ರವಾಸೋದ್ಯಮವೇ ಮುಖ್ಯ ಆದಾಯ

ಎಲ್ಲಿ ನೋಡಿದರೂ ಸಮುದ್ರ, ಅಲ್ಲಿಲ್ಲಿ ಭೂಮಿ, ಎತ್ತ ತಿರುಗಿದರೂ ಕಾಣುವುದು ತಿಳಿ ನೀರು ಮಾತ್ರ. ಇನ್ನೂ ರಾತ್ರಿ ತಲೆ ಎತ್ತಿ ಆಕಾಶ ನೋಡಿದರೆ ನಕ್ಷತ್ರಗಳ ರಾಶಿ. ಹೌದು, ಪ್ರಕೃತಿ ಸೌಂದರ್ಯ ಸವಿಯಲು ಮಾಲ್ಡೀವ್ಸ್‌ ಎಂಬ ಪುಟಾಣಿ ದ್ವೀಪಕ್ಕೆ ಹೋಗಬೇಕು. ಅದರಲ್ಲೂ ಅಲ್ಲಿನ ಬೀಚ್‌ಗಳ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಷ್ಟುದಿನ ನೆಮ್ಮದಿಯಾಗಿದ್ದ ಮಾಲ್ಡೀವ್ಸ್ ಜನರಿಗೆ ಕೊರೊನಾ ವೈರಸ್ ಶಾಕ್ ನೀಡಿತ್ತು. ಆದರೆ ಇದೀಗ ಅನಿರೀಕ್ಷಿತ ಬೆಳವಣಿಗೆಯಲ್ಲಿ ಮಾಜಿ ಅಧ್ಯಕ್ಷರ ಮನೆ ಸಮೀಪವೇ ಪ್ರಬಲ ಬಾಂಬ್ ಸ್ಫೋಟಗೊಂಡು ಸ್ಥಳೀಯರನ್ನ ಬೆಚ್ಚಿಬೀಳಿಸಿದೆ. ಪ್ರವಾಸಿಗರು ಕೊರೊನಾ ಜೊತೆಗೆ ಬಾಂಬ್‌ಗೂ ಹೆದರುವ ಸ್ಥಿತಿ ಎದುರಾಗಿದೆ.

English summary
Maldives ex-president Mohamed Nasheed’s situation still critical after deadly bomb blast near his residency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X