ಶಾರ್ಜಾದಲ್ಲಿ ಮದುವೆ ಬ್ರೇಕಪ್ ಮಾಡಿದ ನಕಲಿ ಮೇಕಪ್!

Posted By:
Subscribe to Oneindia Kannada

ದುಬೈ, ಅಕ್ಟೋಬರ್ 19 : ಹಣ ಬಚ್ಚಿಡಬಹುದು, ಹಗೆತನ ಮುಚ್ಚಿಡಬಹುದು, ಭಾವನೆಗಳನ್ನು ಮನಸ್ಸಿನಲ್ಲಿಯೇ ಹಿಡಿದಿಟ್ಟುಕೊಳ್ಳಬಹುದು... ಆದರೆ, ಕುರೂಪಿತನವನ್ನು ದಟ್ಟವಾದ ಮೇಕಪ್ಪಿನಿಂದ ಮುಚ್ಚಿಡಬಹುದೆ?

ಬ್ಯೂಟಿ ಈಸ್ ಇನ್ ದಿ ಐ ಆಫ್ ದಿ ಬಿಹೋಲ್ಡರ್ ಎಂಬ ಮಾತು ಚಾಲ್ತಿಯಲ್ಲಿದೆ. ಹೆಣ್ಣಿನ ಸಹಜ ಸೌಂದರ್ಯವನ್ನು ಆಂತರ್ಯದಿಂದ ಆಸ್ವಾದಿಸಬೇಕೇ ಹೊರತು ಬಾಹ್ಯವಾಗಿ ನೋಡಬಾರದು ಎಂಬ ಮಾತೂ ಇದೆ. ಆದರೆ, ಈ ಭೂಪನಿಗೆ ವೇದಾಂತವಾವುದೂ ಬೇಕಾಗಿಲ್ಲ.

ಅದೇ ತಾನೆ ಮದುವೆಯಾಗಿ ದಾಂಪತ್ಯದ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವ ಕನಸು ಕಾಣುತ್ತಿದ್ದ ಆ ವ್ಯಕ್ತಿ, ಲಗ್ನವಾದ ಹೊಸದರಲ್ಲಿಯೇ ಹೆಂಡತಿಗೆ ನೀಡಿದ್ದು 'ತಲಾಖ್ ತಲಾಖ್ ತಲಾಖ್!' ಕಾರಣವಿಷ್ಟೇ, ಆಕೆ ತನ್ನ ಮುಖದ ಸಹಜ 'ಸೌಂದರ್ಯ'ವನ್ನು ಮೇಕಪ್ ಹಿಂದೆ ಬಚ್ಚಿಟ್ಟುಕೊಂಡಿದ್ದಳು. [ನಿಯಮಿತ ಯೋಗ ಮಹಿಳೆಯ ಸೌಂದರ್ಯಕ್ಕೆ ರಾಮಬಾಣ]

Make up leads to break up : Man divorces wife in Dubai

ಆಗಿದ್ದಿಷ್ಟು : 34 ವರ್ಷದ ವ್ಯಕ್ತಿ 28 ವರ್ಷದ ತನ್ನ ನವನವೀನ ಹೆಂಡತಿಯೊಂದಿಗೆ ಶಾರ್ಜಾದ ಅಲ್ ಮಮ್ಜಾರ್ ಬೀಚಿಗೆ ಸ್ನಾನ ಮಾಡಲೆಂದು ಹೋಗಿದ್ದಾನೆ. ಹೆಂಡತಿ ನೀರಿನಲ್ಲಿ ಮುಳುಗಿ ಏಳುವಷ್ಟರಲ್ಲಿ ಹೆಂಡತಿಯ ಬಣ್ಣ ಬಯಲಾಗಿಬಿಟ್ಟಿದೆ. ಎಷ್ಟರ ಮಟ್ಟಿಗೆ ಆಕೆ ಬಣ್ಣಗೇಡಿಯಾಗಿದ್ದಳೆಂದರೆ, ಆತ ತನ್ನ ಹೆಂಡತಿಯನ್ನು ಗುರುತಿಸಲು ಕೂಡ ವಿಫಲನಾಗಿದ್ದಾನೆ.

ಮೊದಲ ರಾತ್ರಿಗೆ ಬಟ್ಟೆ ಕಳಚಿದಂತೆ ಆತನ ಭ್ರಮೆಯೂ ಕಳಚಿಬಿದ್ದಿದೆ. ಮದುವೆಯ ಸಮಯದಲ್ಲಿ ಇದ್ದಂತೆ ಆಕೆ ಸುಂದರಿಯಾಗಿ ಕಾಣಿಸುತ್ತಿಲ್ಲ ಎಂದು ತಗಾದೆ ತೆಗೆದಿದ್ದಾನೆ. ಗಾಢವಾದ ಪ್ರಸಾದನ ಮತ್ತು ನಕಲಿ ಕಣ್ಣಿನರೆಪ್ಪೆಯ ಕೂದಲನ್ನು ಧರಿಸಿ ಆಕೆ ತನಗೆ ಮೋಸ ಮಾಡಿದ್ದಾಳೆ ಎಂದು ಆತ ಆರೋಪಿಸಿದ್ದಾನೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. [ತಮ್ಮ ಮುಖಾರವಿಂದ ಇಷ್ಟ ಪಡುವ ಎಲ್ಲರಿಗಾಗಿ ಈ ಲೇಖನ]

ಗಂಡ ತಲಾಖ್ ತಲಾಖ್ ತಲಾಖ್ ಎನ್ನುತ್ತಿದ್ದಂತೆ ಹೆಂಡತಿಯ ಕಾಲಕೆಳಗಿನ ಭೂಮಿ ಕುಸಿದುಬಿದ್ದಿದೆ, ಖಿನ್ನತೆಗೆ ಜಾರಿದ್ದಾಳೆ. ಸುಂದರವಾಗಿ ಕಾಣಿಸಲು ಕಾಸ್ಮೆಟಿಕ್ ಸರ್ಜರಿಯನ್ನೂ ಭರ್ಜರಿಯಾಗಿ ಮಾಡಿಸಿಕೊಂಡಿದ್ದ ಹೆಂಡತಿ ಮನೋಶಾಸ್ತ್ರಜ್ಞರ ಸಹಾಯ ಪಡೆದರೂ ಮದುವೆಯನ್ನು ಉಳಿಸಿಕೊಳ್ಳಲು, ವಿಚ್ಛೇದನ ತಪ್ಪಿಸಲು ಸಾಧ್ಯವಾಗಿಲ್ಲ.

ಗಂಡನಿಗೆ ಇದೆಲ್ಲವನ್ನು ಹೇಳಬೇಕೆಂದು ಬಯಸಿದ್ದರೂ ಸಕಾಲದಲ್ಲಿ ಎಲ್ಲ ಸಂಗತಿಯನ್ನು ಗುಪ್ತವಾಗಿಟ್ಟುಕೊಂಡಿದ್ದಕ್ಕೆ ಆಕೆ ಭಾರೀ ಬೆಲೆ ತೆರಬೇಕಾಗಿದ್ದು ಮಾತ್ರ ದುರಂತ. ಆ ಮಹಿಳೆಗಾದರೂ ಕೃತಕ ಸೌಂದರ್ಯ ಯಾಕೆ ಬೇಕಿತ್ತು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A newly married man in Sharjah has divorced his wife after coming to know that his wife is not so beautiful. She had covered her face with thick make up and used artificial eyelashes. After she took bath in sea he could not recognize her. So, he divorced her. Make up has lead to break up.
Please Wait while comments are loading...