ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಕ್ವೆಡಾರ್, ಪೆರು ಗಡಿಯಲ್ಲಿ 7.5 ಪ್ರಮಾಣದ ಭಾರೀ ಭೂಕಂಪ

|
Google Oneindia Kannada News

ಪೆರು, ಫೆಬ್ರವರಿ 22 : ದಕ್ಷಿಣ ಅಮೆರಿಕಾದ ನೈರುತ್ಯ ಭಾಗದಲ್ಲಿರುವ ಇಕ್ವೆಡಾರ್ ಮತ್ತು ಪೆರು ಗಡಿಯಲ್ಲಿ ಶುಕ್ರವಾರ 7.5 ಪ್ರಮಾಣದ ಭಾರೀ ಭೂಕಂಪ ಸಂಭವಿಸಿದೆ. ಎರಡೂ ರಾಷ್ಟ್ರಗಳಲ್ಲಿ ಭೂಕಂಪನದ ಅನುಭವವಾಗಿದೆ.

ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೇ ಪ್ರಕಾರ, ಇಕ್ವೆಡಾರ್ ನ ಅಂಬಾಟೋದಿಂದ 224 ಕಿ.ಮೀ. ದೂರದಲ್ಲಿ ಕೇಂದ್ರಿತವಾಗಿದ್ದು, ಇಕ್ವೆಡಾರ್, ಪೆರು, ಕೊಲಂಬಿಯಾ ಮುಂತಾದ ದಕ್ಷಿಣ ಅಮೆರಿಕಾದ ಹಲವಾರು ರಾಷ್ಟ್ರಗಳಲ್ಲಿ ಇದರ ಅನುಭವವಾಗಿದೆ.

ಸ್ಥಳೀಯ ಕಾಲಮಾನ 05:17:22ಕ್ಕೆ ಭೂಕಂಪ ಸಂಭವಿಸಿದ್ದು, 132.4 ಕಿ.ಮೀ. ಆಳದಲ್ಲಿ ಇದರ ಕೇಂದ್ರಬಿಂದುವಿದೆ. ಈ ಸ್ಥಳದಿಂದ 164 ಕಿ.ಮೀ. ದೂರದಲ್ಲಿ ಸಂಗಾಯ್ ಎಂಬಲ್ಲಿ ಅಗ್ನಿಪರ್ವತವಿದೆ.

Major earthquake strikes the border between Ecuador and Peru

ಹಲವಾರು ಜನರು ತಮಗೆ ಭೂಕಂಪನದ ಅನುಭವವಾಯಿತು ಎಂದು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ನನಗೆ ಬೆಳಿಗ್ಗೆ ಎಚ್ಚರವಾದಾಗ ಅಡುಗೆಮನೆಯ ಡ್ರಾಯರ್ ತೆರೆದಿತ್ತು, ಬಲ್ಬ್ ಗಳು ಓಲಾಡುತ್ತಿದ್ದವು, ಕಿಟಕಿಗಳು ಅಲುಗಾಡುತ್ತಿದ್ದವು ಎಂದು ಒಬ್ಬರು ಮಾಹಿತಿ ನೀಡಿದ್ದಾರೆ.

ಮತ್ತೊಬ್ಬರು, ಸುಮಾರು ಒಂದು ನಿಮಿಷದವರೆಗೆ ಸುದೀರ್ಘವಾಗಿ ಕಂಪಿಸಿದ ಅನುಭವವಾಯಿತು. ಗೋಡೆಯಲ್ಲಿ ಬಿರುಕುಬಿಟ್ಟ ಸದ್ದು ಕೇಳಿತು, ಅಷ್ಟರಲ್ಲಿ ನನ್ನ ಕಾರಿನ ಅಲಾರಾಮ್ ಕೂಡ ಧ್ವನಿ ಮಾಡಲು ಆರಂಭಿಸಿತು ಎಂದು ಕ್ವಿಟೋ ಎಂಬುವವರು ತಿಳಿಸಿದ್ದಾರೆ.

ಜಪಾನ್ ನಲ್ಲಿಯೂ ಭೂಕಂಪ : ಇದೇ ಸಮಯದಲ್ಲಿ ಜಪಾನ್ ನಲ್ಲಿ ಕೂಡ 5.7 ಪ್ರಮಾಣದ ಭೂಕಂಪ ಸಂಭವಿಸಿದೆ. ಆದರೆ, ಜಪಾನ್ ನಲ್ಲಿ ಸುನಾಮಿಯ ಎಚ್ಚರಿಕೆಯನ್ನು ಇಲ್ಲಿಯವರೆಗೆ ನೀಡಿಲ್ಲ.

English summary
Major earthquake of magnitude 7.5 strikes the border between Ecuador and Peru. According to United States Geological Survey, the earthquake happened around 224km (140 miles) east-southeast of Ambato, Ecuador, but ripples have been felt across South America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X