ಇಡೀ ಪ್ಯಾರಿಸ್‌ನ್ನು ಒಮ್ಮೆ ಬೆಚ್ಚಿ ಬೀಳಿಸಿತು ನಿಗೂಢ ಶಬ್ದ
ಪ್ಯಾರಿಸ್, ಸೆಪ್ಟೆಂಬರ್ 30: ನಿಗೂಢ ಭಯಂಕರ ಶಬ್ದ ಇಡೀ ಪ್ಯಾರಿಸನ್ನೇ ಇಂದು ಬೆಚ್ಚಿಬೀಳಿಸಿದೆ. ಕೆಲವರು ಕಟ್ಟಡ ಬಿದ್ದಿರುವುದರಿಂದ ಬಂದಿರುವ ಶಬ್ದ ಅದು ಎಂದು ಹೇಳಿದ್ದರೂ ಕೂಡ ಯಾವುದೇ ಹೊಗೆ, ಬೆಂಕಿ ಏನೂ ಕಾಣಿಸಿಲ್ಲ. ಹಾಗೆಯೇ ಹತ್ತಿರದ ಉಪನಗರಗಳ ಜನರು ಕೂಡ ಶಬ್ದವನ್ನು ಕೇಳಿದ್ದಾರೆ.
ವಿಮಾನವು ಕಟ್ಟಡಕ್ಕೆ ಬಂದು ಅಪ್ಪಳಿಸಿದಾಗ ಆಗುವ ಶಬ್ದದಂತೆ ಅದು ಇತ್ತು ಎಂದು ಕೆಲವರು ವಿವರಿಸಿದ್ದಾರೆ. ಆ ಶಬ್ದ ಬಂದಾಕ್ಷಣ ಕಟ್ಟಡವೇ ಒಮ್ಮೆ ಅಲುಗಾಡಿತ್ತು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಅದು ಸೋನಿಕ್ ಬೂಮ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಸೋನಿಕ್ ಬೂಮ್ ಎಂದರೆ ಗಾಳಿಯ ವೇಗಕ್ಕಿಂತಲೂ ಹೊರಡುವ ಯಾವುದೋ ಒಂದು ದ್ವನಿ ಅಥವಾ ಶಬ್ದದ ಕಂಪನ. ಗಾಳಿಯ ವೇಗವನ್ನೂ ಮೀರಿ ಹೊರ ಹೊಮ್ಮುವ ದ್ವನಿ ಕಂಪನಕ್ಕೆ ಸೋನಿಕ್ ಬೂಮ್ ಎನ್ನಲಾಗುತ್ತದೆ.

ಎಲ್ಲಿ ಬಳಕೆಯಾಗುತ್ತದೆ? ಸೋನಿಕ್ ಬೂಮ್ ಸೂಪರ್ ಸಾನಿಕ್ ವಿಮಾನಗಳು ಅಂದರೆ ಯುದ್ಧ ವಿಮಾನಗಳಲ್ಲಿ ಬಳಕೆಯಾಗುತ್ತದೆ. ಈ ಸೂಪರ್‌ಸಾನಿಕ್ ವಿಮಾನಗಳು ಕೆಲ ಸಂದರ್ಭಗಳಲ್ಲಿ ಹಾರಾಡುವ ವೇಗ ಸೋನಿಕ್ ಬೂಮ್ ಆಗಿ ಹೊರ ಹೊಮ್ಮುತ್ತದೆ. ಈ ದ್ವನಿ ಕಂಪನ ಅಪಾರವಾಗಿರುತ್ತದೆ.
ಒಂದು ರೀತಿ ಭೂಕಂಪನದ ಅನುಭವವನ್ನು ತೆರದಿಡುತ್ತದೆ. ಕೇಳಲು ಅತ್ಯಂತ ಭಯಾನಕವಾಗಿರುತ್ತದೆ.












Click it and Unblock the Notifications