ಚೀನಾ - ತಜಕೀಸ್ತಾನ ಗಡಿಯಲ್ಲಿ ಪ್ರಬಲ ಭೂಕಂಪ! ರಿಕ್ಟರ್‌ ಮಾಪಕದಲ್ಲಿ 7.2 ತೀವ್ರತೆ ದಾಖಲು

ಮಧ್ಯ ಏಷ್ಯಾದಲ್ಲಿರುವ ತಜಕೀಸ್ತಾನದಲ್ಲಿ ನೈಸರ್ಗಿಕ ವಿಕೋಪಗಳು ಸಾಮಾನ್ಯವಾಗಿ ಬಿಟ್ಟಿವೆ. ಆಗಾಗ ಪ್ರವಾಹ, ಭೂಕಂಪ, ಭೂಕುಸಿತ, ಹಿಮಕುಸಿತ ಮತ್ತು ಹಿಮಪಾತದಂತಹ ನೈಸರ್ಗಿಕ ವಿಕೋಪಗಳು ಇಲ್ಲಿ ಸಂಭವಿಸುತ್ತಲೇ ಇರುತ್ತವೆ.

ಬೀಜಿಂಗ್‌,ಫೆಬ್ರವರಿ23: ಗುರುವಾರ ಬೆಳ್ಳಂಬೆಳಗ್ಗೆ ಚೀನಾ ಮತ್ತು ತಜಕೀಸ್ತಾನದ ಗಡಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಚೀನಾದ ಕ್ಸಿನ್‌ ಜಿಯಾಂಗ್‌ ಪ್ರದೇಶ ಹಾಗೂ ಪೂರ್ವ ತಜಕೀಸ್ತಾನ ಪ್ರದೇಶದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಚೀನಾದ ಮಾಧ್ಯಮಗಳು ತಿಳಿಸಿವೆ. ವಿರಳ ಜನಸಂಖ್ಯೆ ಇರುವ ಪರ್ವತ ಪ್ರದೇಶದಲ್ಲಿ ಭೂಕಂಪ ಸಂಭವಿಸಿರುವುದರಿಂದ ಹೆಚ್ಚಿನ ಹಾನಿ ಉಂಟಾಗಿಲ್ಲ ಎನ್ನಲಾಗಿದ್ದು, ಇನ್ನಷ್ಟೇ ವರದಿಗಳು ಬರಬೇಕಿದೆ.

ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 5.37ಕ್ಕೆ ಭೂಕಂಪ ಸಂಭವಿಸಿದ್ದು, 20.5 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಚೀನಾದ ಭೂಕಂಪನ ಜಾಲಗಳ ಕೇಂದ್ರದ ಪ್ರಕಾರ 7.2 ತೀವ್ರತೆಯ ಭೂಕಂಪ ಸಂಭವಿಸಿದೆ ಎನ್ನಲಾಗಿದ್ದು, 10 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಹೇಳಲಾಗಿದೆ. ಆದರೆ, ಯುಎಸ್‌ಜಿಸಿ ಸೇರಿ ಬೇರೆ ಬೇರೆ ಭೂಕಂಪನ ಅಧ್ಯಯನ ಸಂಸ್ಥೆಗಳ ವರದಿ ಪ್ರಕಾರ ಭೂಕಂಪನದ ತೀವ್ರತೆಯಲ್ಲಿ ವ್ಯತ್ಯಾಸ ದಾಖಲಾಗಿದೆ. ಯುಎಸ್‌ಜಿಸಿ ಪ್ರಕಾರ 6.8 ತೀವ್ರತೆಯ ಭೂಕಂಪ ದಾಖಲಾಗಿದೆ.

Magnitude 7.2 Earthquake Strikes Tajikistan Near Border With China

ಗೋರ್ನೋ ಬದಾಕ್ಷಾನ್‌ ಎಂಬ ಪ್ರದೇಶದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಅಪ್ಘಾನಿಸ್ತಾನ ಹಾಗೂ ಚೀನಾ ಗಡಿಯಲ್ಲಿರುವ ಈ ಪ್ರದೇಶ, ಚೀನಾದ ಪರ್ವತ ನಗರಿ ಮುರ್ಗೋಬ್‌ನಿಂದ 67 ಕಿಮೀ ದೂರದಲ್ಲಿದೆ. ಆರಂಭದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆದರೆ, 20 ನಿಮಿಷದ ಬಳಿಕ ಮತ್ತೆ 4.6 ತೀವ್ರತೆಯ ಭೂಕಂಪ ಆಗಿದೆ. ಈ ಪ್ರದೇಶ ವಿರಳ ಜನಸಂಖ್ಯೆಯನ್ನು ಹೊಂದಿದ್ದು, ಪಮೀರ್‌ ಪರ್ವತಿಗಳಿಂದ ಆವೃತವಾಗಿದೆ. ತಜಕೀಸ್ತಾನದ ಅತಿ ದೊಡ್ಡ ಸರೋವರ ಸಾರೇಜ್‌ ಸರೋವರ ಕೂಡ ಇಲ್ಲಿಯೇ ಇದೆ. ಈಗ ಈ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ.

ಮಧ್ಯ ಏಷ್ಯಾದಲ್ಲಿರುವ ತಜಕೀಸ್ತಾನದಲ್ಲಿ ನೈಸರ್ಗಿಕ ವಿಕೋಪಗಳು ಸಾಮಾನ್ಯವಾಗಿ ಬಿಟ್ಟಿವೆ. ಆಗಾಗ ಪ್ರವಾಹ, ಭೂಕಂಪ, ಭೂಕುಸಿತ, ಹಿಮಕುಸಿತ ಮತ್ತು ಹಿಮಪಾತದಂತಹ ನೈಸರ್ಗಿಕ ವಿಕೋಪಗಳು ಇಲ್ಲಿ ಸಂಭವಿಸುತ್ತಲೇ ಇರುತ್ತವೆ. ಗೊರ್ನೋ ಬದಾಕ್ಷಾಣ್‌ ಪ್ರದೇಶದಲ್ಲಿ ಫೆಬ್ರವರಿ 15ರಂದು ಹಿಮಕುಸಿತ ಸಂಭವಿಸಿದ 9 ಜನ ಸಾವನ್ನಪ್ಪಿದ್ದರು.

Magnitude 7.2 Earthquake Strikes Tajikistan Near Border With China

ದಿಲ್ಲಿಯಲ್ಲಿ ಬುಧವಾರ ಭೂಕಂಪನ!

ಬುಧವಾರವಷ್ಟೇ ದಿಲ್ಲಿ - ಎನ್‌ಸಿಆರ್‌ ಹಾಗೂ ಉತ್ತರ ಪ್ರದೇಶ ಮತ್ತು ಹರಿಯಾಣದ ಹಲವು ಪ್ರದೇಶದಲ್ಲಿ ಭೂಕಂಪನ ಸಂಭವಿಸಿತ್ತು. ನೇಪಾಳದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದ ಕಾರಣ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿಯೂ ಭೂಕಂಪನದ ಅನುಭವ ಆಗಿತ್ತು. ನೇಪಾಳದ ಜುಮ್ಲಾ ಪ್ರದೇಶದಿಂದ 67 ಕಿಮೀ ದೂರದಲ್ಲಿ ಮಧ್ಯಾಹ್ನ 1.30ಕ್ಕೆ ಭೂಕಂಪನ ಸಂಭವಿಸಿತ್ತು. ಉತ್ತರಾಖಂಡ್‌ನ ಪಿಥೋಗರ್‌ನಲ್ಲಿಯೂ ಕೂಡ ಭೂಕಂಪನ ಸಂಭವಿಸಿತ್ತು.

ಟರ್ಕಿ, ಸಿರಿಯಾದಲ್ಲಿ ಮೃತ್ಯುಕಂಪನ!

ಕೆಲ ದಿನಗಳ ಹಿಂದಷ್ಟೇ ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ ಫೆಬ್ರವರಿ 6ರಂದು ಸಂಭವಿಸಿದ ಪ್ರಬಲ ಭೂಕಂಪ ಮೃತ್ಯು ಕಂಪನವಾಗಿತ್ತು. 50 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು, ಸಾವಿರಾರು ಕಟ್ಟಡಗಳು ನೆಲಕ್ಕುರುಳಿದ್ದವು, ಅಲ್ಲಿ ಪದೇ ಪದೇ ಭೂಕಂಪ ಸಂಭವಿಸುತ್ತಿದೆ. ಪ್ರಬಲ ಭೂಕಂಪನದಿಂದ 1.5 ಮಿಲಿಯನ್‌ ಜನರು ನಿರಾಶ್ರಿತರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+