ಇಂಡೋನೇಷ್ಯಾದಲ್ಲಿ 5.6 ತೀವ್ರತೆಯ ಭೂಕಂಪ: 46 ಸಾವು, 300 ಮಂದಿಗೆ ಗಾಯ
ಇಂಡೋನೇಷ್ಯಾದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಘಟನೆಯಲ್ಲಿ 46 ಜನ ಸಾವನ್ನಪ್ಪಿದ್ದು ಜೊತೆಗೆ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಜಾವಾದಲ್ಲಿ ಹಲವಾರು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಸಿಯಾಂಜೂರ್ ಆಡಳಿತದ ಮುಖ್ಯಸ್ಥ ಹರ್ಮನ್ ಸುಹೆರ್ಮನ್ ಅವರು ಮೆಟ್ರೋ ಟಿವಿ ವರದಿಗಾರರೊಂದಿಗೆ ಮಾತನಾಡಿ, "ಸದ್ಯಕ್ಕೆ ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಸಿಯಾಂಜೂರ್‌ನಲ್ಲಿ ನಾಲ್ಕು ಆಸ್ಪತ್ರೆಗಳಿವೆ. ಆಸ್ಪತ್ರೆಯಲ್ಲಿ ಮಾತ್ರ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ ಮತ್ತು 300 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕಟ್ಟಡಗಳ ಅವಶೇಷಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸಾವು ಮತ್ತು ಗಾಯಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ" ಎಂದರು.
ರಾಜಧಾನಿ ಜಕಾರ್ತಾದಿಂದ ಆಗ್ನೇಯಕ್ಕೆ 75 ಕಿಮೀ ದೂರದಲ್ಲಿರುವ ಸಿಯಾಂಜೂರ್‌ನಲ್ಲಿ 10 ಕಿಮೀ (6.2 ಮೈಲುಗಳು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆ (BMKG) ತಿಳಿಸಿದೆ. ಈ ಭೂಕಂಪದಿಂದ ಸುನಾಮಿ ಸಂಭವಿಸುವ ಸಾಧ್ಯತೆಯಿಲ್ಲ ಎಂದು ಅದು ಹೇಳಿದೆ.

ಸಿಯಾಂಜೂರ್ ಪ್ರದೇಶದಲ್ಲಿ ಹಲವಾರು ಮನೆಗಳು ಮತ್ತು ಇಸ್ಲಾಮಿಕ್ ಬೋರ್ಡಿಂಗ್ ಶಾಲೆಗೆ ಹಾನಿಯಾಗಿದೆ. ಅಧಿಕಾರಿಗಳು ಹಾನಿಯ ಪ್ರಮಾಣವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಏಜೆನ್ಸಿ ಹೇಳಿದೆ. ಮೆಟ್ರೊ ಟಿವಿಯ ದೃಶ್ಯಾವಳಿಗಳು ಸಿಯಾಂಜೂರ್‌ನಲ್ಲಿನ ಕೆಲವು ಕಟ್ಟಡಗಳು ಸಂಪೂರ್ಣವಾಗಿ ಕುಸಿದಿರುವುದನ್ನು ತೋರಿಸುತ್ತವೆ. ಮನೆಗಳು, ಶಾಲೆ, ಕಚೇರಿಗಳು ಸಂಪೂರ್ಣವಾಗಿ ಕುಸಿದೆ. ಹಲವಾರು ಜನ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿದ್ದಾರೆ. ಸ್ಥಳೀಯರು ಭೂಕಂಪದ ಗಂಭೀರತೆಯ ಬಗ್ಗೆ ವಿವರಿಸಿದ್ದಾರೆ.
BREAKING: #BNNIndonesia Reports
— Gurbaksh Singh Chahal (@gchahal) November 21, 2022
According to local officials, "nearly 20 people were killed and 300 were injured" in #Indonesia's #WestJava 5.6 magnitude #earthquake. pic.twitter.com/jFlNLVssVb
"ನಾನು ತುಂಬಾ ಆಘಾತಕ್ಕೊಳಗಾಗಿದ್ದೇನೆ. ಮತ್ತೊಂದು ಭೂಕಂಪ ಸಂಭವಿಸಬಹುದೆಂದು ನಾನು ಚಿಂತೆ ಮಾಡಿದ್ದೇನೆ. ಭೂಕಂಪ ಸಂಭವಿಸಿದ ಕೂಡಲೇ ಜನ ಮನೆಯಿಂದ ಹೊರಗೆ ಓಡಿ ಬಂದರು. ಜೊತೆಗೆ ತಲೆ ಸುತ್ತುವಿಕೆ ಹಾಘೂ ವಾಂತಿಯನ್ನು ಮಾಡಿಕೊಂಡಿರುವ ದೃಶ್ಯಗಳು ಕಂಡು ಬಂದಿದೆ" ಎಂದು ಸ್ಥಳೀಯ ಮಚ್ಲಿಸ್ ಮೆಟ್ರೋ ಟಿವಿಗೆ ತಿಳಿಸಿದರು. ಭೂಕಂಪದ ನಂತರದ ಎರಡು ಗಂಟೆಗಳಲ್ಲಿ 25 ಭೂಕಂಪಗಳು ದಾಖಲಾಗಿವೆ ಎಂದು ಬಿಎಂಕೆಜಿ ತಿಳಿಸಿದೆ.

ಸ್ಥಲೀಯರು ಇತರರು ಕಟ್ಟಡಗಳು ಅಲುಗಾಡುತ್ತಿರುವುದನ್ನು ಮತ್ತು ಪೀಠೋಪಕರಣಗಳು ಚಲಿಸುತ್ತಿರುವುದನ್ನು ನೋಡಿ ಭಯಭೀತರಾಗಿದ್ದಾರೆ ವರದಿಯಾಗಿದೆ. ಇಂಡೋನೇಷ್ಯಾ "ಪೆಸಿಫಿಕ್ ರಿಂಗ್ ಆಫ್ ಫೈರ್" ಎಂದು ಕರೆಯಲ್ಪಡುತ್ತದೆ. ಇದು ಹೆಚ್ಚು ಭೂಕಂಪನ ಸಕ್ರಿಯ ವಲಯವಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಭೂಕಂಪಗಳು ಮತ್ತು ಜ್ವಾಲಾಮುಖಿಗಳು ಸೃಷ್ಟಿಯಾಗುತ್ತವೆ.












Click it and Unblock the Notifications