ಕಾಶ್ಮೀರ ಕೇಳಿದ್ದ ಭುಟ್ಟೋಗೆ ಸಿಕ್ಕಿದ್ದು ಕೋಳಿ ಮೊಟ್ಟೆǃ

ಲಂಡನ್, ಅ. 27: ಕಾಶ್ಮೀರವನ್ನು ನಮಗೆ ನೀಡಿ ಎಂದು ಹೇಳಿದ್ದ ಪಾಕಿಸ್ತಾನದ ಬಿಲಾವಲ್ ಭುಟ್ಟೋಗೆ ಜನ ನೀಡಿದ್ದು ಮೊಟ್ಟೆ, ನೀರಿನ ಬಾಟಲಿಗಳನ್ನು! ಭಾರತದ ಮೇಲಿನ ಕಾಶ್ಮೀರದ ಹಕ್ಕು ವಿರೋಧಿಸಿ ಭಾನುವಾರ ಲಂಡನ್ ನಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಜನ ಭುಟ್ಟೋಗೆ ತಕ್ಕ ಉಡುಗೊರೆಯನ್ನೇ ನೀಡಿದ್ದಾರೆ.

ಮಿಲಿಯನ್ ಮಾರ್ಚ್ ಹೆಸರಿನಲ್ಲಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಜನರ ಆಕ್ರೋಶಕ್ಕೆ ಬಿಲಾವಲ್ ತುತ್ತಾಗಿದ್ದಾರೆ. ಪಾಕಿಸ್ತಾನದ ಮಾನ ಇಂಗ್ಲೆಂಡನಲ್ಲೂ ಹರಾಜಾಗಿದ್ದು ಬಿಲಾವಲ್ ವೇದಿಕೆ ಏರುತ್ತಿದ್ದಂತೆ ಜನ ನೀರಿನ ಕ್ಯಾನ್, ಬಾಟಲ್, ಮೊಟ್ಟೆ ಎಸೆಯಲು ಆರಂಭಿಸಿದರು. ಅಲ್ಲದೇ ಬಿಲಾವಲ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಲು ಆರಂಭಿಸಿದರು.[ಕಾಶ್ಮೀರ ಬೇಕೆಂದ ಭುಟ್ಟೋ ಮೇಲೆ ಟ್ವೀಟ್ ಬಾಂಬ್]

pakistan

ಗೋ ಬಿಲಾವಲ್ ಗೋ, ನಿಮಗೆ ಇಲ್ಲೇನು ಕೆಲಸ? ಎಂಬ ಘೋಷಣೆಗಳು 'ಮಿಲಿಯನ್ ಮಾರ್ಚ್' ಪ್ರಚಾರಾಂದೋಲನದಲ್ಲಿ ಕೇಳಿಬಂದವು. ಈ ಮಾರ್ಚ್ ಕಾಶ್ಮೀರದ ಬಗ್ಗೆ ಮತ್ತು ಕಾಶ್ಮೀರಿಗಳ ಕ್ಷೇಮಕ್ಕಾಗಿ ನಡೆಯುತ್ತಿದೆ. ಬಿಲಾವಲ್ ಗೆ ಇಲ್ಲಿ ಯಾವ ಕೆಲಸವೂ ಇಲ್ಲ ಎಂದು ಉದ್ರಿಕ್ತ ಗುಂಪು ಘೋಷಣೆ ಕೂಗುತ್ತಾ ಸಾಗಿತು.[ಹೀನಾ-ಬಿಲಾವಲ್ ಎಕ್ಸಟರ್ನಲ್ ಅಫೇರ್ಸ್ ವಿರುದ್ಧ ಫತ್ವಾ?]

ಕಳೆದ ಸಪ್ಟೆಂಬರ್ ನಲ್ಲಿ ಸಂಪೂರ್ಣ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಹೇಳಿದ್ದ ಜ್ಯೂ.ಭುಟ್ಟೋ ಮೇಲೆ ಸಾಮಾಜಿಕ ಜಾಲ ತಾಣಗಳಲ್ಲಿ ಟ್ವೀಟ್ ಬಾಂಬ್ ಗಳ ಪ್ರಹಾರ ನಡೆದಿತ್ತು. ಭುಟ್ಟೋ ಹೇಳಿಕೆಯನ್ನು ಅಣಕಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+