ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

U turn: ನರೇಂದ್ರ ಮೋದಿ ಭೇಟಿಗೆ ಮುಂದಾದ ಅಮೆರಿಕ

By Srinath
|
Google Oneindia Kannada News

US ambassador Nancy Powell to meet Narendra Modi U turn
ವಾಷಿಂಗ್ಟನ್, ಫೆ.11- ಇತ್ತ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದೆಹಲಿಯತ್ತ ಮುಖ ಮಾಡಿರುವಾಗ ಅತ್ತ ಅಮೆರಿಕ ಗುಜರಾತಿನತ್ತ ಮುಖಮಾಡಿದ್ದು, ಮೋದಿ ಭೇಟಿಗೆ ಧಾವಿಸಿಬರುತ್ತಿದೆ. ಇದರಿಂದ ಮೋದಿಗೆ ವೀಸಾ ಪ್ರಾಪ್ತಿಯಾಗುವ ಹಾದಿ ಸುಗಮವಾಗಿದೆ ಎನ್ನಲಾಗಿದೆ.

ಮುಸ್ಲಿಂ ವಿರೋಧಿ ದಂಗೆಗಳನ್ನು ಸೃಷ್ಟಿಸಿದ್ದು ನರೇಂದ್ರ ಮೋದಿಯೇ. ಹಾಗಾಗಿ ಅವರನ್ನು ಅಮೆರಿಕದೊಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಅವರಿಗೆ ವೀಸಾ ಸಹ ನೀಡುವುದಿಲ್ಲ ಎಂದು ಸಿಂಡರಿಸಿಕೊಂಡಿದ್ದ ಅಮೆರಿಕ ಇದೀಗ U turn ಹೊಡೆದಿದ್ದು, ಖುದ್ದು ತಾನೇ ಮೋದಿ ಭೇಟಿಗೆ ಭಾರತಕ್ಕೆ ಬರುತ್ತಿದೆ.

ಇಲ್ಲೊಂದು ಜಾಣ್ನುಡಿ ಜ್ಞಾಪಕಕ್ಕೆ ಬರುತ್ತಿದೆ: If Mohammed will not go to the mountain, the mountain must come to Mohammed!

ಲೋಕಸಭಾ ಚುನಾವಣೆಯಲ್ಲಿ ಮಗ್ನರಾಗಿರುವ ನರೇಂದ್ರ ಮೋದಿಗೆ ಇದರಿಂದ ಕೋಡು ಮೂಡಿದಂತಾಗಿದೆ. ಅಂಬಾಸಿಡರ್ ನ್ಯಾನ್ಸಿ ಪಾವೆಲ್ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಡುವಣ ಭೇಟಿ ವಿಷಯವನ್ನು ಅಮೆರಿಕದ ವಿದೇಶಾಂಗ ವಿಭಾಗ ಖಚಿತಪಡಿಸಿದೆ. ಆದರೆ ಎಂದು ಈ ಮಹತ್ವದ ಭೇಟಿ ನಡೆಯುತ್ತದೆ ಎಂಬುದರ ಬಗ್ಗೆ ಅದು ಬಾಯ್ಬಿಟ್ಟಿಲ್ಲ. ಇದೇ ಫೆಬ್ರವರಿ ಮಾಸಾಂತ್ಯ ಅಹಮದಾಬಾದಿನಲ್ಲಿ ನ್ಯಾನ್ಸಿ-ಮೋದಿ ಭೇಟಿ ಏರ್ಪಡುವ ಸಾಧ್ಯತೆಯಿದೆ.

ಅಮೆರಿಕ-ಭಾರತ ಸಂಬಂಧಗಳನ್ನು ಮತ್ತಷ್ಟು ಸುಭ್ರದಗೊಳಿಸಲು ಕಳೆದ ನವೆಂಬರಿನಿಂದ ಅಮೆರಿಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಅಂಗವಾಗಿ ಮೋದಿ ಜತೆಗೂ ಭೇಟಿ ಕಾರ್ಯಕ್ರಮ ಏರ್ಪಡಿಸಿದೆ.

ಮೋದಿ ಪ್ರಧಾನ ಮಂತ್ರಿಯಾಗುವುದು ದಿಟವಾಗುತ್ತಿದೆ ಎಂಬ ಸೂಕ್ಷ್ಮವನ್ನು ಅರಿತ ಅಮೆರಿಕ, ಮುಂದೆ ಆಭಾಸವಾಗುವುದು ಬೇಡವೆಂದು ಮೋದಿಗೆ ವೀಸಾ ನೀಡುವ ನಿಟ್ಟಿನಲ್ಲಿ ಅಂಬಾಸಿಡರ್ ನ್ಯಾನ್ಸಿ ಪಾವೆಲ್ ಅವರನ್ನು ಗುಜರಾತಿಗೆ ಕಳುಹಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

English summary
Lok Sabha polls 2014- US ambassador Nancy Powell to meet Narendra Modi. The US ambassador to India plans to meet BJP's prime ministerial candidate Narendra Modi, an official said on Monday, signalling a turnaround after years of shunning him over anti-Muslim riots. Ambassador Nancy Powell's encounter with the Gujarat CM would put an end to the boycott of Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X