Nobel Peace Prize: ಜೈಲಿನಲ್ಲಿದ್ದಾಗಲೇ ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದ ಮಹನೀಯರು- ಯಾರು? ಇವರ ಸಾಧನೆ ಏನು? ತಿಳಿಯಿರಿ
ತುಳಿತಕ್ಕೊಳಗಾದ ಮಹಿಳೆಯರ ಪರವಾಗಿ ಹೋರಾಡಿದ ಇರಾನಿನ ನರ್ಗೆಸ್ ಮೊಹಮ್ಮದಿ ಅವರಿಗೆ 2023 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ ಮಾಡಿರುವ ಅವರನ್ನು ಇರಾನ್ ಸರ್ಕಾರ ಜೈಲಿನಲ್ಲಿಟ್ಟಿದೆ.
ಇಲ್ಲಿಯವರೆಗೆ, ಇರಾನ್ ಆಡಳಿತವು ನರ್ಗೆಸ್ ಮೊಹಮ್ಮದಿಯನ್ನು 13 ಬಾರಿ ಬಂಧಿಸಿದೆ. ಐದು ಬಾರಿ ಅಪರಾಧಿ ಎಂದು ತೀರ್ಪು ನೀಡಿದೆ. ಆಕೆಗೆ ಒಟ್ಟು 31 ವರ್ಷಗಳ ಜೈಲು ಶಿಕ್ಷೆಯಾಗಿದೆ. 154 ಛಡಿ ಏಟಿನ ಶಿಕ್ಷೆ ವಿಧಿಸಿದೆ. ಈಗಲೂ ನರ್ಗೆಸ್ ಅವರು ಜೈಲಿನಲ್ಲಿಯೇ ದಿನಗಳನ್ನು ಕಳೆಯುತ್ತಿದ್ದಾರೆ.
ಜೈಲಿನಲ್ಲಿರುವಾಗಲೇ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾದ ಮಹನೀಯರಲ್ಲಿ ನರ್ಗೆಸ್ ಅವರು ಐದನೇಯವರು. ಇನ್ನುಳಿದ ನಾಲ್ವರು ಹೋರಾಟಗಾರರ ಬಗ್ಗೆ ತಿಳಿಯಿರಿ

1935: ಕಾರ್ಲ್ ವಾನ್ ಒಸಿಟ್ಜ್ಕಿ, ಜರ್ಮನಿ
ಪತ್ರಕರ್ತ ಕಾರ್ಲ್ ವಾನ್ ಒಸಿಟ್ಜ್ಕಿ ಅವರು 1935 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದಾಗ ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್‌ನಲ್ಲಿ ಬಂಧಿಸಲ್ಪಟ್ಟಿದ್ದರು. ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಆಡಳಿತದ ಕಟುಟೀಕಾಕಾರರಾಗಿದ್ದ ವಾನ್ ಒಸಿಟ್ಜ್ಕಿ ಅವರನ್ನು ನಾಜಿ ಸೈನ್ಯ ಬಂಧಿಸಿತ್ತು. ಈ ಸಂದರ್ಭದಲ್ಲೇ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿತ್ತು.
ನೊಬೆಲ್ ಸಮಿತಿಯ ನಿರ್ಧಾರಕ್ಕೆ ಆಕ್ರೋಶಗೊಂಡ ಅಡಾಲ್ಫ್ ಹಿಟ್ಲರ್ ಯಾವುದೇ ಜರ್ಮನ್ ನಾಗರಿಕ ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಬಾರದು ಎಂಬ ನಿಷೇಧವನ್ನು ಹೇರಿದ. ಒಸ್ಸೆಟ್ಜ್ಕಿ ಅವರು 1938 ರಲ್ಲಿ ಬಂಧನದಲ್ಲಿರುವಾಗಲೇ ನಿಧನರಾದರು.

1991: ಆಂಗ್ ಸಾನ್ ಸೂ ಕಿ, ಮ್ಯಾನ್ಮಾರ್
ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂ ಕಿ ಅವರಿಗೆ 1991 ರ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತು. ಆ ಸಮಯದಲ್ಲಿ ಅವರು ದೇಶದ ಮಿಲಿಟರಿ ನಾಯಕತ್ವದ ವಿರುದ್ಧ ಹೋರಾಟ ಮಾಡಿ ಗೃಹಬಂಧನದಲ್ಲಿದ್ದರು.
ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಪರ ಅಹಿಂಸಾತ್ಮಕವಾಗಿ ಸುದೀರ್ಘ ಹೋರಾಟ ಮಾಡಿದ ಸೂ ಕಿ ಅವರಿಗೆ ನೊಬೆಲ್ ಗೌರವ ಸಿಕ್ಕಿದೆ. ನೊಬೆಲ್ ಪುರಸ್ಕಾರ ಸ್ವೀಕರಿಸಲು ಓಸ್ಲೋಗೆ ಪ್ರಯಾಣಿಸಿದರೆ ಮ್ಯಾನ್ಮಾರ್‌ಗೆ ಮರಳಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಮಿಲಿಟರಿ ಆಡಳಿತ ಹೇಳಿತ್ತು.
ಬದಲಿಗೆ 1991 ರ ನೊಬೆಲ್ ಪುರಸ್ಕಾರ ಸಮಾರಂಭದಲ್ಲಿ ಆಕೆಯ ಇಬ್ಬರು ಪುತ್ರರು ಮತ್ತು ಅವರ ಪತಿ ಪಾಲ್ಗೊಂಡಿದ್ದರು. ಸೂ ಕಿ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಾಂಕೇತಿಕವಾಗಿ, ಆಕೆಯ ಅನುಪಸ್ಥಿತಿಯನ್ನು ಗುರುತಿಸಲು ವೇದಿಕೆಯ ಮೇಲೆ ಖಾಲಿ ಕುರ್ಚಿಯನ್ನು ಇರಿಸಲಾಗಿತ್ತು.
ಅವರು 2010 ರಲ್ಲಿ ಬಿಡುಗಡೆಯಾದರು. ಆ ನಂತರ ದೇಶವನ್ನು ಮುನ್ನಡೆಸಿದರು. ಫೆಬ್ರವರಿ 2021 ರ ಮಿಲಿಟರಿ ದಂಗೆಯ ಸಮಯದಲ್ಲಿ ಆಕೆಯನ್ನು ಮತ್ತೆ ಬಂಧಿಸಲಾಯಿತು. ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಆಕೆ ತಮ್ಮ ಉಳಿದ ಜೀವನವನ್ನು ಜೈಲಿನಲ್ಲಿ ಕಳೆಯುವ ಅಪಾಯವನ್ನು ಎದುರಿಸುತ್ತಾರೆ.

2010: ಲಿಯು ಕ್ಸಿಯಾಬೊ, ಚೀನಾ
ಚೀನಾದ ಭಿನ್ನಮತೀಯ ನಾಯಕ ಲಿಯು ಕ್ಸಿಯಾಬೊ ಅವರು ಜೈಲಿನಲ್ಲಿರುವಾಗಲೇ 2010 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದರು. ವಿಧ್ವಂಸಕ ಕೃತ್ಯದ ಆರೋಪದ ಮೇಲೆ 11 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದರು.
ಚೀನಾದಲ್ಲಿ ಮೂಲಭೂತ ಮಾನವ ಹಕ್ಕುಗಳಿಗಾಗಿ ಅಹಿಂಸಾತ್ಮಕ ಹೋರಾಟ ಕೈಗೊಂಡಿದ್ದಕ್ಕಾಗಿ ಅವರನ್ನು ಗೌರವಿಸಲಾಗಿದೆ. ಅವರ ಕುರ್ಚಿಯನ್ನು ಸಾಂಕೇತಿಕವಾಗಿ ಖಾಲಿ ಬಿಡಲಾಯಿತು. ಅವರ ಪರವಾಗಿ ಯಾರೂ ಪ್ರಶಸ್ತಿಯನ್ನು ಸ್ವೀಕರಿಸಲೇ ಇಲ್ಲ.
ಬಹುಮಾನವನ್ನು ಘೋಷಿಸಿದ ನಂತರ ಅವರ ಪತ್ನಿ ಲಿಯು ಕ್ಸಿಯಾ ಅವರನ್ನು ಗೃಹಬಂಧನದಲ್ಲಿ ಇರಿಸಲಾಯಿತು. ಅವರ ಮೂವರು ಸಹೋದರರು ಚೀನಾವನ್ನು ತೊರೆಯದಂತೆ ನಿರ್ಬಂಧಿಸಲಾಯಿತು.
ಲಿಯು ಕ್ಸಿಯಾಬೊ ಅವರು ಜುಲೈ 2017 ರಲ್ಲಿ ಚೀನೀ ಆಸ್ಪತ್ರೆಯಲ್ಲಿ 61 ನೇ ವಯಸ್ಸಿನಲ್ಲಿ ಯಕೃತ್ತಿನ ಕ್ಯಾನ್ಸರ್‌ನಿಂದ ನಿಧನರಾದರು. ಬಂಧನದಲ್ಲಿರುವಾಗಲೇ ಅಸುನೀಗಿದ ಎರಡನೇ ನೊಬೆಲ್ ಪ್ರಶಸ್ತಿ ವಿಜೇತರಾಗಿ ಇತಿಹಾಸದಲ್ಲಿ ದಾಖಲಾಗಿದ್ದಾರೆ.

2021: ಅಲೆಸ್ ಬಿಲಿಯಾಟ್ಸ್ಕಿ, ಬೆಲರೂಸಿ
ಬೆಲರೂಸಿಯನ್ ಹಕ್ಕುಗಳ ಹೋರಾಟಗಾರ ಅಲೆಸ್ ಬಿಲಿಯಾಟ್ಸ್ಕಿ ಅವರು ಜುಲೈ 2021 ರಲ್ಲಿ ಜೈಲಿನಲ್ಲಿ ಇರುವಾಗಲೇ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದರು.
ಅಲೆಸ್ ಬಿಲಿಯಾಟ್ಸ್ಕಿ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ವಯಾಸ್ನಾ ಸಂಸ್ಥೆಯ ಮುಖ್ಯಸ್ಥರು. ಬೆಲರೂಸಿಯನ್ ಪ್ರಬಲ ನಾಯಕ ಅಲೆಕ್ಸಾಂಡರ್ ಲುಕಾಶೆಂಕೊ ಅವರ ಆಡಳಿತ ದುರುಪಯೋಗದ ವಿರುದ್ಧ ಅವರು ಹೋರಾಟ ನಡೆಸಿಕೊಂಡು ಬಂದಿದ್ದಾರೆ.
ತೆರಿಗೆ ವಂಚನೆಯ ಆರೋಪವನ್ನು ಎದುರಿಸುತ್ತಿದ್ದ ಲುಕಾಶೆಂಕೊ ಅವರ ಆಡಳಿತದ ವಿರುದ್ಧ ತಿಂಗಳುಗಟ್ಟಲೇ ಸಾಮೂಹಿಕ ಪ್ರದರ್ಶಗಳನ್ನು ಅವರು ಮಾಡಿದ್ದಾರೆ. ಈ ಹೋರಾಟದ ವಿರುದ್ಧ ದಮನಕಾರಿ ನೀತಿಯನ್ನು ಅನುಸರಿಸಿದ ಲುಕಾಶೆಂಕೊ ಸರ್ಕಾರ ಅವರನ್ನು ಬಂಧಿಸಿ ಜೈಲಿನಲ್ಲಿರಿಸಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications