ವಿಶ್ವದ ಕುಬೇರ ರಾಜಕಾರಣಿಗಳು: ಸೋನಿಯಾ ಗಾಂಧಿ ಹೆಸರು ಡಿಲಿಟ್!

Posted By:
Subscribe to Oneindia Kannada

ನಮ್ಮನ್ನಾಳುತ್ತಿರುವ ವಿಶ್ವದ ಇಪ್ಪತ್ತು ಶ್ರೀಮಂತ ರಾಜಕಾರಣಿಗಳ ಪಟ್ಟಿಯನ್ನು ಹಫಿಂಗ್ಟನ್ ಪೋಸ್ಟ್ ಪತ್ರಿಕೆ ಬಿಡುಗಡೆ ಮಾಡಿದೆ.

ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಅವರಿಗಿಂತ ಹಲವು ಮಿಲಿಯನ್ ಡಾಲರ್ ನಷ್ಟು ಶ್ರೀಮಂತರಾಗಿರುವ ರಾಜಕಾರಣಿಗಳು ಪಟ್ಟಿಯಲ್ಲಿರುವುದು ವಿಶೇಷ. (ದೇಶದ 100 ಶ್ರೀಮಂತ ಸೆಲೆಬ್ರಿಟಿಗಳು)

ಲಭ್ಯವಿರುವ ಮಾಹಿತಿ, ದಾಖಲೆಯನ್ನಾಧರಿಸಿ ಸದ್ಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪೊಲಿಟಿಕಲ್ ಲೀಡರ್ ಗಳ ಪಟ್ಟಿಯಲ್ಲಿ ರಾಜರು, ರಾಣಿಯರು, ಸುಲ್ತಾನ್, ಅಧ್ಯಕ್ಷರುಗಳಿದ್ದಾರೆ.

ಪಟ್ಟಿಯಲ್ಲಿ ಪುರುಷರ ಸಂಖ್ಯೆ ಹೆಚ್ಚಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳ ಕುಬೇರರ ಹೆಸರು ಹೆಚ್ಚಿದೆ. ಅವರ ಕುಟುಂಬದ ಆಸ್ತಿಪಾಸ್ತಿ, ಹೂಡಿಕೆಯನ್ನಾಧರಿಸಿ ಈ ಪಟ್ಟಿಯನ್ನು ಹಫಿಂಗ್ಟನ್ ಪೋಸ್ಟ್ ತಯಾರಿಸಿದೆ.

ಗಮನಿಸಬೇಕಾದ ಅಂಶವೇನಂದರೆ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿ ನಂತರ ಹಫಿಂಗ್ಟನ್ ಪೋಸ್ಟ್ ಡಿಲಿಟ್ ಮಾಡಿದ್ದು. (ಏಷ್ಯಾದ ಹತ್ತು ಶ್ರೀಮಂತ ಕುಟುಂಬ)

ಸೋನಿಯಾ ಜೊತೆ ಕತಾರ್ ದೊರೆ ಹಮೀದ್ ಬಿನ್ ಖಲೀಫ ಅಲ್ ತಾನಿ ಹೆಸರನ್ನು ಹಫಿಂಗ್ಟನ್ ಪೋಸ್ಟ್ ಪಟ್ಟಿಯಿಂದ ತೆಗೆದುಹಾಕಿದೆ. ಹಾಗಾಗಿ 18 ಶ್ರೀಮಂತ ರಾಜಕಾರಣಿಗಳ ಪಟ್ಟಿಯನ್ನು ಸ್ಲೈಡಿನಲ್ಲಿ ಕೊಡಲಾಗಿದೆ..

1. ವ್ಲಾದಿಮಿರ್ ಪುತಿನ್

1. ವ್ಲಾದಿಮಿರ್ ಪುತಿನ್

ದೇಶ: ರಷ್ಯಾ
ಹೆಸರು : ವ್ಲಾದಿಮಿರ್ ಪುತಿನ್
ಹುದ್ದೆ: ರಷ್ಯಾದ ಅಧ್ಯಕ್ಷ
ಆಸ್ತಿ ಮೌಲ್ಯ : 40 - 70 ಬಿಲಿಯನ್ ಡಾಲರ್

2. ಭೂಮಿಭೋಲ್ ಅದುಲ್ಯಾದೇಜ್

2. ಭೂಮಿಭೋಲ್ ಅದುಲ್ಯಾದೇಜ್

ದೇಶ: ಥಾಯ್ ಲ್ಯಾಂಡ್
ಹೆಸರು : ಭೂಮಿಭೋಲ್ ಅದುಲ್ಯಾದೇಜ್
ಹುದ್ದೆ: ಥಾಯ್ ಲ್ಯಾಂಡ್ ದೊರೆ
ಆಸ್ತಿ ಮೌಲ್ಯ : 30 ಬಿಲಿಯನ್ ಡಾಲರ್

3. ಹಸಿನ್ ಲಾಲ್ ಬೋಲ್ಕಿಯಾ

3. ಹಸಿನ್ ಲಾಲ್ ಬೋಲ್ಕಿಯಾ

ದೇಶ: ಬ್ರೂನಿ
ಹೆಸರು : ಹಸಿನ್ ಲಾಲ್ ಬೋಲ್ಕಿಯಾ
ಹುದ್ದೆ: ಬ್ರೂನಿ ಸುಲ್ತಾನ
ಆಸ್ತಿ ಮೌಲ್ಯ : 20 ಬಿಲಿಯನ್ ಡಾಲರ್

4. ಅಬ್ದುಲ್ಲಾ ಬಿನ್

4. ಅಬ್ದುಲ್ಲಾ ಬಿನ್

ದೇಶ: ಸೌದಿ ಅರೆಬಿಯಾ
ಹೆಸರು : ಅಬ್ದುಲ್ಲಾ ಬಿನ್ ಅಬ್ದುಲ್ಲಾ ಅಜೀಜ್ ಅಲ್ - ಸೌದ್
ಹುದ್ದೆ: ಸೌದಿ ಅರೆಬಿಯಾ ದೊರೆ
ಆಸ್ತಿ ಮೌಲ್ಯ : 18 ಬಿಲಿಯನ್ ಡಾಲರ್

5. ಶೇಕ್ ಖಲೀಫಾ

5. ಶೇಕ್ ಖಲೀಫಾ

ದೇಶ: ಅರಬ್ ಗಣರಾಜ್ಯ
ಹೆಸರು : ಶೇಕ್ ಖಲೀಫಾ ಬಿನ್ ಜಯೇದ್ ಅಲ್-ನಹನ್
ಹುದ್ದೆ: ಅರಬ್ ಗಣರಾಜ್ಯ ಅಧ್ಯಕ್ಷ, ಅಬುದಾಬಿ ಮುಖ್ಯಸ್ಥ
ಆಸ್ತಿ ಮೌಲ್ಯ : 15 ಬಿಲಿಯನ್ ಡಾಲರ್

6. ಶೇಕ್ ಮೊಹಮ್ಮದ್ ರಷೀದ್

6. ಶೇಕ್ ಮೊಹಮ್ಮದ್ ರಷೀದ್

ದೇಶ: ದುಬೈ
ಹೆಸರು : ಶೇಕ್ ಮೊಹಮ್ಮದ್ ಬಿನ್ ಅಲ್ ಮೊಕ್ತಂ
ಹುದ್ದೆ: ಅರಬ್ ಗಣರಾಜ್ಯ ಪ್ರಧಾನಿ, ದುಬೈ ಆಡಳಿತ ಮುಖ್ಯಸ್ಥ
ಆಸ್ತಿ ಮೌಲ್ಯ : 7 ಬಿಲಿಯನ್ ಡಾಲರ್

7. ಹನ್ಸ್ ಅಡಮ್

7. ಹನ್ಸ್ ಅಡಮ್

ದೇಶ: ಲಿಂಚಿಸ್ಟಿನಿಯನ್
ಹೆಸರು : ಹನ್ಸ್ ಅಡಮ್ II
ಹುದ್ದೆ: ಲಿಂಚಿಸ್ಟಿನಿಯನ್ ಯುವರಾಜ
ಆಸ್ತಿ ಮೌಲ್ಯ : 5 ಬಿಲಿಯನ್ ಡಾಲರ್ (Photo courtesy: Sean Gallup/Getty Images)

8. ಕಿಂಗ್ ಜಾಂಗ್ ಉನ್

8. ಕಿಂಗ್ ಜಾಂಗ್ ಉನ್

ದೇಶ: ಉತ್ತರ ಕೊರಿಯಾ
ಹೆಸರು : ಕಿಂಗ್ ಜಾಂಗ್ ಉನ್
ಹುದ್ದೆ: ಉತ್ತರ ಕೊರಿಯಾ ಮುಖ್ಯಸ್ಥ
ಆಸ್ತಿ ಮೌಲ್ಯ : 4-5 ಬಿಲಿಯನ್ ಡಾಲರ್

9. ಮೊಹಮ್ಮದ್ VI

9. ಮೊಹಮ್ಮದ್ VI

ದೇಶ: ಮೊರಕ್ಕೊ
ಹೆಸರು : ಮೊಹಮ್ಮದ್ VI
ಹುದ್ದೆ: ಮೊರಕ್ಕೊ ದೊರೆ
ಆಸ್ತಿ ಮೌಲ್ಯ : 2.5 ಬಿಲಿಯನ್ ಡಾಲರ್ (Photo courtesy: FADEL SENNA/AFP/Getty Images)

10. ಸೆಬೆಸ್ಟಿನ್ ಪಿನೆರಾ

10. ಸೆಬೆಸ್ಟಿನ್ ಪಿನೆರಾ

ದೇಶ: ಚಿಲಿ
ಹೆಸರು : ಸೆಬೆಸ್ಟಿನ್ ಪಿನೆರಾ
ಹುದ್ದೆ: ಚಿಲಿ ಅಧ್ಯಕ್ಷ
ಆಸ್ತಿ ಮೌಲ್ಯ : 2.5 ಬಿಲಿಯನ್ ಡಾಲರ್

11. ಆಲ್ಬರ್ಟ್ II

11. ಆಲ್ಬರ್ಟ್ II

ದೇಶ: ಮೊನಕೋ
ಹೆಸರು : ಆಲ್ಬರ್ಟ್ II
ಹುದ್ದೆ: ಮೊನಾಕೋ ಯುವರಾಜ
ಆಸ್ತಿ ಮೌಲ್ಯ : 1 ಬಿಲಿಯನ್ ಡಾಲರ್

12. ಖಬೂಸ್ ಬಿನ್ ಸೇದ್

12. ಖಬೂಸ್ ಬಿನ್ ಸೇದ್

ದೇಶ: ಒಮನ್
ಹೆಸರು : ಖಬೂಸ್ ಬಿನ್ ಸೇದ್
ಹುದ್ದೆ: ಒಮನ್ ಸುಲ್ತಾನ್
ಆಸ್ತಿ ಮೌಲ್ಯ : 700 ಮಿಲಿಯನ್ ಡಾಲರ್ (Photo courtesy: AFP/Getty images)

13. ತಿಯದಾರೋ ಒಬೆಂಗ್

13. ತಿಯದಾರೋ ಒಬೆಂಗ್

ದೇಶ: ಗಿನಿ
ಹೆಸರು : ತಿಯದಾರೋ ಒಬೆಂಗ್
ಹುದ್ದೆ: ಗಿನಿ ಅಧ್ಯಕ್ಷ
ಆಸ್ತಿ ಮೌಲ್ಯ : 600 ಮಿಲಿಯನ್ ಡಾಲರ್

14. ಬಷರ್ ಅಸದ್

14. ಬಷರ್ ಅಸದ್

ದೇಶ: ಸಿರಿಯಾ
ಹೆಸರು : ಬಷರ್ ಅಸದ್
ಹುದ್ದೆ: ಸಿರಿಯಾ ಅಧ್ಯಕ್ಷ
ಆಸ್ತಿ ಮೌಲ್ಯ : 500 ಮಿಲಿಯನ್ ಡಾಲರ್

15. ಎಲಿಜಬೆತ್ II

15. ಎಲಿಜಬೆತ್ II

ದೇಶ: ಇಂಗ್ಲೆಂಡ್
ಹೆಸರು : ಎಲಿಜಬೆತ್ II
ಹುದ್ದೆ: ಇಂಗ್ಲೆಂಡ್ ರಾಣಿ
ಆಸ್ತಿ ಮೌಲ್ಯ : 450 ಮಿಲಿಯನ್ ಡಾಲರ್

16. ಸಾಬ ಅಲ್- ಅಹಮದ್

16. ಸಾಬ ಅಲ್- ಅಹಮದ್

ದೇಶ: ಕುವೈತ್
ಹೆಸರು : ಸಾಬ ಅಲ್- ಅಹಮದ್ ಅಲ್-ಜಬೀರ್ ಅಲ್-ಸಾಬ
ಹುದ್ದೆ: ಕುವೈಟ್ ಎಮಿರ್
ಆಸ್ತಿ ಮೌಲ್ಯ : 350 ಮಿಲಿಯನ್ ಡಾಲರ್

17. Mswati III

17. Mswati III

ದೇಶ: ಸ್ವಾಜಿಲ್ಯಾಂಡ್
ಹೆಸರು : Mswati III (ಕನ್ನಡದಲ್ಲಿ ಬರೆಯುವ ಬಗ್ಗೆ ಗೊಂದಲವಿದೆ)
ಹುದ್ದೆ: ಸ್ವಾಜಿಲ್ಯಾಂಡ್ ದೊರೆ
ಆಸ್ತಿ ಮೌಲ್ಯ : 100 ಮಿಲಿಯನ್ ಡಾಲರ್

18. ಇಹಾಂ ಆಲಿವೇವ್

18. ಇಹಾಂ ಆಲಿವೇವ್

ದೇಶ: ಅಜರ್ಬೈಜಾನ್
ಹೆಸರು :ಇಹಾಂ ಆಲಿವೇವ್
ಹುದ್ದೆ: ಅಜರ್ಬೈಜಾನ್ ಅಧ್ಯಕ್ಷ
ಆಸ್ತಿ ಮೌಲ್ಯ : 75 ಮಿಲಿಯನ್ ಡಾಲರ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Huffingtonpost has compiled a list of some of the richest world leaders currently in power. The roster includes a mixture of kings, presidents, sultans and queens.
Please Wait while comments are loading...