ಇನ್ನೂ 4 ಗಡಿ ಪ್ರದೇಶಗಳನ್ನು ನುಂಗುತ್ತೇವೆ ಎಂದ ಚೀನಾ
ಬೀಜಿಂಗ್, ಜೂನ್ 19: ಲಡಾಖ್‌ನ ಗಲ್ವಾನ್ ಕಣಿವೆಯ ಪ್ರದೇಶದಲ್ಲಿ ಚೀನಾ ಉದ್ಧಟತನ ಮುಂದುವರೆದ ಬೆನ್ನಲ್ಲೇ ಭಾರತದ ಇನ್ನಷ್ಟು ಭೂಭಾಗವನ್ನು ಆಕ್ರಮಿಸಿಕೊಳ್ಳುವ ಮಾತುಗಳನ್ನು ಚೀನಾ ಆಡಿದೆ.
ಉದ್ಧಟತನ ಮುಂದುವರೆದಂತೆ ಆಧುನಿಕ ಚೀನಾ ನಿರ್ಮಾತೃ ಮಾವೋಝೆಡಾಂಗ್ ಟಿಬೆಟ್‌ನ್ನು ಆಕ್ರಮಿಸಿಕೊಂಡ ಬಳಿಕ ಅಂಗೈನ ಐದು ಬೆರಳಿನ ಸೂತ್ರವನ್ನು ಮುಂದಿಟ್ಟಿದ್ದರು.
ಇನ್ನೂ ನಾಲ್ಕು ಬಾಕಿ ಉಳಿದಿದೆ, ಅದರಲ್ಲಿ ನೇಪಾಳ ಭೂತಾನ್, ಅರುಣಾಚಲಪ್ರದೇಶ ಹಾಗೂ ಸಿಕ್ಕಿಂ ಎಂದು ಉದ್ಘರಿಸಿದ್ದರು. ಮಾವೋ ಅವರ ಈ ಹೇಳಿಕೆಯನ್ನು ಈಗ ಟಿಬೆಟ್ ಭಾಗದ ಚೀನಾ ಮುಖ್ಯಸ್ಥ ಲೊಬ್ಸಾಂಗ್ ಸಾಂಗಾಯ್ ಪುನರುಚ್ಚರಿಸಿದ್ದಾರೆ.
ಲಡಾಖ್ ಹಾಗೂ ಗಲ್ವಾನ್ ದಾಳಿ ಹಾಗೂ ಚೀನಾದ ಆಕ್ರಮಣ ಇದು ಅದರ ಮೊದಲ ಭಾಗವಾಗಿದೆ. ಟಿಬೆಟ್‌ನಲ್ಲಿ ಏನಾಗಿದೆ ಎಂದು ಭಾರತ ತಿಳಿದುಕೊಳ್ಳಲಿ, ಚೀನಾವನ್ನು ಕಡೆಗಣಿಸಿ ಸೈನ್ಯದ ಸಾಮರ್ಥ್ಯವನ್ನು ನಿರ್ಲಕ್ಷಿಸಿದರೆ ಭಾರತ ಪಾಠ ಕಲಿಯಬೇಕಾದೀತು ಎಂದು ಉದ್ಧಟತನದ ಮಾತುಗಳನ್ನಾಡಿದ್ದಾರೆ.
ಚೀನಾ-ಭಾರತ ಘರ್ಷಣೆ: ಇನ್ನೂ ನಾಲ್ಕು ಭಾರತೀಯ ಯೋಧರ ಸ್ಥಿತಿ ಗಂಭೀರ
ಭಾರತ ಹಾಗೂ ಚೀನಾ ಗಡಿ ಸಾಮರಸ್ಯ ಕಾಯ್ದುಕೊಂಡು ಸಾರ್ವಭೌಮತ್ವವನ್ನು ಗೌರವಿಸಬೇಕು ಎಂಬ ಶಾಂತಿ ಮಾತುಗಳ ಮಧ್ಯೆ ಟಿಬೆಟ್ ಆಡಳಿತದ ಚುಕ್ಕಾಣಿ ಹೊಂದಿರುವ ವ್ಯಕ್ತಿಯ ಹೇಳಿಕೆ ಇನ್ನಷ್ಟು ಸಂಘರ್ಷಕ್ಕೆ ಕಾರಣವಾಗಬಹುದು.
ಈ ಹೇಳಿಕೆ ಬಗೆಗೂ ಭಾರತ ಅಧಿಕೃತವಾಗಿ ತನ್ನ ಆಕ್ಷೇಪವನ್ನು ವ್ಯಕ್ತಪಡಿಸುವ ಸಾಧ್ಯತೆ ಇದೆ. ಚೀನಾದ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ಷೇಪಗಳು ವ್ಯಕ್ತವಾಗಿವೆ.