ಉತ್ತರ ಕೊರಿಯಾ ನೆಲದಲ್ಲಿ ಮತ್ತೆ ಅಧಿಕಾರಕ್ಕೆ ತಿಕ್ಕಾಟ ಶುರು, ಮಗಳನ್ನು ಮರೆಸುತ್ತಿರುವ ಸರ್ವಾಧಿಕಾರಿ | Kim Jong Un

ಉತ್ತರ ಕೊರಿಯಾ ಅಂದ್ರೆ ಸಖತ್ ವಿವಾದಗಳ ನಾಡು, ಅದರಲ್ಲೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪದೇ ಪದೇ ವಿವಾದಗಳ ಸುಳಿಯಲ್ಲಿ ಸಿಲುಕಿ ಸದ್ದು ಮಾಡುತ್ತಲೇ ಇರುತ್ತಾರೆ. ಈ ರೀತಿ ಇದ್ದಾಗ ಕಿಮ್ ಜಾಂಗ್ ಉನ್ ನಂತರ ಉತ್ತರ ಕೊರಿಯಾದ ಮುಂದಿನ ಅಧ್ಯಕ್ಷರು ಯಾರು? ಎಂಬ ಚರ್ಚೆ ನಡೆಯುತ್ತಲೇ ಇದೆ. ಇನ್ನೊಂದು ಕಡೆ ತನ್ನ ಮಗಳನ್ನೇ ಮುಂದಿನ ಅಧ್ಯಕ್ಷೆ ಅಗಿ ಆಯ್ಕೆಯ ಮಾಡಿಸಲು ಕಿಮ್ ಜಾಂಗ್ ಉನ್ ಮುಂದಾಗಿರುವ ಚರ್ಚೆ ನಡೆಯುತ್ತಿದೆ. ಇಂತಹ ಸಮಯದಲ್ಲೇ ತನ್ನ ಮಗಳ ಜೊತೆಗೆ ಕಿಮ್ ಅಧ್ಯಕ್ಷರ ಸಮವಸ್ತ್ರದಲ್ಲಿ ಎಂಟ್ರಿ ಕೊಟ್ಟಿದ್ದು ಚರ್ಚೆ ಹೆಚ್ಚು ಮಾಡಿದೆ.

ಉತ್ತರ ಕೊರಿಯಾ ಅನ್ನೋ ದೇಶವೇ ವಿಚಿತ್ರ, ಅದರಲ್ಲೂ ಅಲ್ಲಿ ಬದುಕುವ ಜನರ ಜೀವಕ್ಕೆ ಯಾವ ಗ್ಯಾರಂಟಿ ಕೂಡ ಇಲ್ಲ ಅಂತಾರೆ ಪಾಶ್ಚಿಮಾತ್ಯರು. ಎಲ್ಲಾ ಆರೋಪಗಳ ನಡುವೆ ಇದೀಗ ಕಿಮ್ ಜಾಂಗ್ ಉನ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು, ತನ್ನ ನೆಲದಲ್ಲಿ ಮತ್ತಷ್ಟು ಕಠಿಣ ಕಾನೂನು ಜಾರಿ ಮಾಡಿ ಇನ್ನಷ್ಟು ಹಿಡಿತ ಹೊಂದಲು ಮುಂದಾಗಿದ್ದಾನೆ. ಕಿಮ್ ವಂಶದ ಕೈಯಲ್ಲಿ ಸಿಲುಕಿರುವ ಉ.ಕೊರಿಯಾ ಹಲವು ದಶಕದಿಂದಲೂ ಒದ್ದಾಡಿ ಹೋಗಿದೆ.

Kim Jong Un

ಇಂತಹ ಪರಿಸ್ಥಿತಿಯಲ್ಲಿ ಮೊನ್ನೆ ಮೊನ್ನೆಯಷ್ಟೇ ಮತ್ತೆ ಅಧಿಕಾರ ವಹಿಸಿಕೊಂಡ ಕಿಮ್‌ ಜಾಂಗ್ ಉನ್ ಇದೀಗ ತನ್ನ ಮಗಳ ಜೊತೆಗೆ ಕಾರ್ಯಕ್ರಮ ಒಂದರಲ್ಲಿ ಪ್ರತ್ಯಕ್ಷನಾಗಿ ಅಚ್ಚರಿ ಮೂಡಿಸಿದ್ದಾನೆ. ತನ್ನ ಮಗಳನ್ನೇ ಮುಂದಿನ ಉತ್ತರಾಧಿಕಾರಿ ಮಾಡಲು ಇದೇ ಸರ್ವಾಧಿಕಾರಿ ಪ್ಲಾನ್ ಹಾಕಿದ್ದು, ಈಗ ಮಗಳಿಗೆ ಅಧ್ಯಕ್ಷೆಯ ರೀತಿ ವಸ್ತ್ರ ಹಾಕಲು ಹೇಳಿರುವುದು ಕುತೂಹಲ ಹೆಚ್ಚು ಮಾಡಿದೆ. ಉತ್ತರ ಕೊರಿಯಾದ ಮುಂದಿನ ಅಧ್ಯಕ್ಷರು ಯಾರಾಗಬೇಕು? ಎಂಬ ಚರ್ಚೆಗೆ ಕಿಮ್ ಜಾಂಗ್ ಉನ್ ಇದೀಗ ಬಹುತೇಕ ಉತ್ತರ ಕೊಟ್ಟಂತೆ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+