ನ್ಯೂಜಿಲೆಂಡ್ ಜೆಸಿಂಡಾ ಕ್ಯಾಬಿನೆಟ್‌ಗೆ ಕೇರಳದ ಪ್ರಿಯಾಂಕಾ

ವೆಲ್ಲಿಂಗ್ಟನ್, ನ.2: ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಅವರ ನೂತನ ಕ್ಯಾಬಿನೆಟ್‌ಗೆ ಕೇರಳ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್(41) ಆಯ್ಕೆಗೊಂಡು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಭಾರತ ಮೂಲದ ಮಹಿಳೆಯೊಬ್ಬರು ನ್ಯೂಜೆಲೆಂಡ್ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವುದು ಇದೇ ಮೊದಲು. ಪ್ರಧಾನಿ ಜೆಸಿಂಡಾ ಅವರು ಪ್ರಿಯಾಂಕಾ ಸೇರಿದಂತೆ ಐವರು ಹೊಸ ಸಚಿವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.

ಎರಡು ಬಾರಿ ಸಂಸದೆ ಪ್ರಿಯಾಂಕಾ ಅವರು ಕಮ್ಯೂನಿಟಿ ಹಾಗೂ ವಲೆಂಟರಿ ಸೆಕ್ಟರ್, ವೈವಿಧ್ಯತೆ ಸೇರಿದಂತೆ ವಿವಿಧ ಸಚಿವಾಲಯದ ಜವಾಬ್ದಾರಿಯನ್ನು ನೀಡಲಾಗಿದೆ.

Kerala Origin Priyanca Radhakrishnan Becomes New Zealands Cabinet Minister

ಕೇರಳದ ಎರ್ನಾಕುಲಂನ ಪರವೂರ್ ನಲ್ಲಿ ಜನಿಸಿರುವ ಪ್ರಿಯಾಂಕಾ ಅವರ ತಂದೆ ರಮನ್ ರಾಧಾಕೃಷ್ಣನ್ ಹಾಗೂ ತಾಯಿ ಉಷಾ. ಲೇಬರ್ ಪಾರ್ಟಿಯಲ್ಲಿ 14 ವರ್ಷದಿಂದ ಪ್ರಿಯಾಂಕಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಿಯಾಂಕಾ ಪತಿ ಹೆಸರು ರಿಚರ್ಡ್ಸನ್.

Kerala Origin Priyanca Radhakrishnan Becomes New Zealands Cabinet Minister

ಸಿಂಗಾಪುರದಲ್ಲಿ ಶಾಲಾ ಶಿಕ್ಷಣ ಪಡೆದಿರುವ ಪ್ರಿಯಾಂಕಾ ಅವರು ನಂತರ ಉನ್ನತ ವ್ಯಾಸಂಗಕ್ಕಾಗಿ ನ್ಯೂಜಿಲೆಂಡ್ ಗೆ ಬಂದವರು ವೆಲ್ಲಿಂಗ್ಟನ್ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Kerala Origin Priyanca Radhakrishnan Becomes New Zealands Cabinet Minister

ಕೌಟುಂಬಿಕ ಹಿಂಸಾಚಾರ, ಶೋಷಿತ ವಲಸೆ ಕಾರ್ಮಿಕರು, ಮಹಿಳೆಯ ದನಿಯಾಗಿ ಪ್ರಿಯಾಂಕಾ ಗುರುತಿಸಿಕೊಂಡಿದ್ದಾರೆ. 2019ರಲ್ಲಿ ಜನಾಂಗೀಯ ಸಮುದಾಯ ಸಚಿವಾಲಯದ ಸಂಸದೀಯ ಖಾಸಗಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+