ಪಾದ್ರಿ ಮಾತು ಕೇಳಿ ಏಸುಕ್ರಿಸ್ತನ ‘ಭೇಟಿ’ಗಾಗಿ ಉಪವಾಸ ಮಾಡಿದ್ದವರು ಮಸಣ ಸೇರಿದರು!
ನೈರೋಬಿ: ದೇವರನ್ನು ನಂಬಬೇಕು, ದೇವರನ್ನು ಪೂಜಿಸಬೇಕು, ದೇವರ ಬಳಿ ಪ್ರಾರ್ಥನೆ ಮಾಡಬೇಕು. ಆದರೆ ಇದನ್ನ ಬಿಟ್ಟು ಯಾರೋ ಹೇಳಿದಕ್ಕೆ ದೇವರನ್ನೇ ಹುಡುಕಿಕೊಂಡು ಹೋದ್ರೆ ಏನಾಗುತ್ತೆ ಗೊತ್ತ? ಇಲ್ಲೊಂದು ಘಟನೆ ಅದಕ್ಕೆ ಉದಾಹರಣೆಯಾಗಿದೆ. ಮೊದಲೇ ಹಸಿವಿನಿಂದ ನರಳುವ ಆ ಬಡ ದೇಶದಲ್ಲಿ ಪಾದ್ರಿಯೊಬ್ಬರ ಮಾತು ಕೇಳಿ ನೂರಾರು ಜನ ಮಸಣ ಸೇರಿದ್ದಾರೆ.
ಹೌದು, ದೇವರ ರೂಪ ಬೇರೆ ಬೇರೆಯಾದ್ರೂ ದೇವರ ಶಕ್ತಿ ಒಂದೇ ಅನ್ನೋದು ಮಾನವರ ನಂಬಿಕೆ. ಹೀಗೆ ಯೇಸು ಕ್ರಿಸ್ತನನ್ನು ಆತ್ಮಿಕವಾಗಿ ಸಂಧಿಸಲು ಉಸಿರು ಇರುವ ತನಕ ಉಪವಾಸ ವ್ರತಾಚರಣೆ ಮಾಡುವಂತೆ ಪಾದ್ರಿಯೊಬ್ಬರು ಸಲಹೆ ನೀಡಿದ್ದರು. ಆ ಪಾದ್ರಿಯ ಮಾತನ್ನು ಕೇಳಿದ್ದ ಸುಮಾರು 400ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಘಟನೆ ಕೀನ್ಯಾದಲ್ಲಿ (Kenya) ನಡೆದಿದೆ. ಅಲ್ಲದೆ ಈ ಘಟನೆ ಜಗತ್ತಿನಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ಈ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗುತ್ತಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಉಪವಾಸ ಮಾಡಿದ್ದವರು ಮಸಣ ಸೇರಿದರು?
ಅಂದಹಾಗೆ ಘಟನೆ ನಡೆದಿರುವುದು ಕೀನ್ಯಾದ ಮಲಿಂದಿ ಪಟ್ಟಣದ ಸಮೀಪದ ಶಕಹೋಲಾ ಅರಣ್ಯ ಪ್ರದೇಶದಲ್ಲಿ. ಈ ಪ್ರದೇಶದಲ್ಲಿ ಡೂಮ್ಸ್ ಡೇ ಆರಾಧನೆ (Doomsday Cult) ಎಂಬ ವ್ರತಾಚರಣೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಇವರಿಗೆ ಯೇಸುವನ್ನು ಸಂಧಿಸಲು ಜೀವ ಇರುವವರೆಗೆ ಉಪವಾಸ ವ್ರತಾಚಾರಣೆ ಮಾಡಲು ಪಾದ್ರಿಯೊಬ್ಬರು ಸಲಹೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಹೀಗಾಗಿ ಆಹಾರ, ನೀರು ಸೇವಿಸಿದೆ ಇಂತಹ ಮೂಢನಂಬಿಕೆಯ ಆಚರಣೆ ಮಾಡಿದ್ದ ನೂರಾರು ಮಂದಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೇಸ್ ಸಂಬಂಧ ಯೇಸುವಿನ ಭಕ್ತರನ್ನು ಡೂಮ್ಸ್ ಡೇ ಆರಾಧಾನೆಗೆ ಪ್ರೇರಿಪಿಸಿದ್ದ ಧಾರ್ಮಿಕ ನಾಯಕರ ಪೌಲ್ ಮ್ಯಾಂಕೆಝಿನ ಬಂಧಿಸಲಾಗಿದೆ.
ಕೊಲೆ ಕೂಡ ಮಾಡಿದ್ದಾರಾ?
ಇನ್ನು ಕಾರ್ಯಾಚರಣೆ ಕೈಗೊಂಡಿದ್ದ ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರು 12 ಶವ ಪತ್ತೆ ಹಚ್ಚಿದ್ದು, ಅಸ್ವಸ್ಥಗೊಂಡಿದ್ದ ಹಲವರನ್ನು ರಕ್ಷಿಸಿದ್ದಾರೆ. ಒಟ್ಟು ಸಾವಿನ ಸಂಖ್ಯೆ 403 ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ ತನಿಖೆ ನಡೆಸಿದ ಅಧಿಕಾರಿಗಳು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಆಗ ಪ್ರಮುಖವಾಗಿ ಹಸಿವಿನಿಂದಲೇ ಅವರೆಲ್ಲಾ ಮೃತಪಟ್ಟಿರುವುದು ತಿಳಿದು ಬಂದಿದೆ. ಇನ್ನೊಂದು ಮನಕಲಕುವ ವಿಚಾರ ಏನೆಂದ್ರೆ ಮಕ್ಕಳು ಘಟನೆಯಲ್ಲಿ ಮೃತಪಟ್ಟಿದ್ದು ಇಲ್ಲಿ ಕೆಲವರನ್ನ ಕತ್ತು ಹಿಸುಕಿ ಸಾಯಿಸಿದ ಆರೋಪ ಕೇಳಿಬಂದಿದೆ. ಇನ್ನೂ ಕೆಲವರನ್ನು ಹೊಡೆದು, ಉಸಿರುಗಟ್ಟಿಸಿ ಕೊಂದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಒಟ್ನಲ್ಲಿ ಕೀನ್ಯಾದ ಈ ಘಟನೆ ತೀವ್ರ ಸಂಚಲನ ಸೃಷ್ಟಿಸಿದೆ. ಅಲ್ಲದೆ ಘಟನೆ ಬಗ್ಗೆ ಕೀನ್ಯಾ ಸರ್ಕಾರ ಕೂಡ ಗಂಭೀರ ಕ್ರಮ ಕೈಗೊಂಡಿದ್ದು, ಸೂಕ್ತ ತನಿಖೆಗೆ ಆದೇಶ ನೀಡಿದೆ. ಇನ್ನು ಜಗತ್ತಿನಾದ್ಯಂತ ಕೀನ್ಯಾ ಘಟನೆ ವೈರಲ್ ಆಗುತ್ತಿದ್ದು ತೀವ್ರ ಆಕ್ರೊಶ ವ್ಯಕ್ತವಾಗಿದೆ. ಹೀಗೆ ಅದೆಲ್ಲಾ ಏನೇ ಇರಲಿ, ಯಾರೋ ಹೇಳಿದರು ಅಂತಾ ಅವರ ಮಾತು ಕೇಳಿದ ಭಕ್ತರು ಮೊದಲೇ ಒಂದಷ್ಟು ಯೋಚಿಸಬೇಕಿತ್ತು. ತಾವು ಅಲ್ಲದಿದ್ದರೂ ತಮ್ಮ ಮಕ್ಕಳ ಕುರಿತು ಹಾಗೂ ಅವರ ಭವಿಷ್ಯದ ಬಗ್ಗೆ ಒಮ್ಮೆ ಚಿಂತಿಸಬೇಕಿತ್ತು. ಆದರೆ ಅದನ್ನ ಮಾಡದ ಕಾರಣ ಅಮಾಯಕ ಮಕ್ಕಳು ಕೂಡ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.












Click it and Unblock the Notifications