ಭಾರತಕ್ಕೆ ಅಮೆರಿಕ ನೂತನ ರಾಯಭಾರಿಯಾಗಿ ಕೆನ್ನೆಥ್ ಪ್ರಮಾಣ ವಚನ ಸ್ವೀಕಾರ

Posted By: Nayana
Subscribe to Oneindia Kannada

ವಾಷಿಂಗ್ ಟನ್‌, ನವೆಂಬರ್15 : ಭಾರತಕ್ಕೆ ಅಮೆರಿಕ ಮುಖ್ಯ ರಾಯಭಾರಿಯಾಗಿ ಕೆನ್ನೆಥ್ ಜಸ್ಟರ್ ಅವರು ಮಂಗಳವಾರ (ನ.14)ರಂದು ಪ್ರಮಾಣವಚನ ಸ್ವೀಕರಿಸಿದರು.

ಉಭಯ ದೇಶಗಳಿಗೂ ಲಾಭವಾಗುವಂತೆ ಸಹಭಾಗಿತ್ವವನ್ನು ಇನ್ನಷ್ಟು ಉತ್ತಮಗೊಳಿಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದರು.

Kenneth Juster is new US ambassador for India

ಡೊನಾಲ್ಡ್‌ ಟ್ರಂಪ್ ಅಧ್ಯಕ್ಷ ರಾಗುತ್ತಿದ್ದಂತೆಯೇ ಕಳೆದ ಜ.20ರಂದು ರಿಚರ್ಡ್ ವರ್ಮಾ ರಾಜೀನಾಮೆ ನೀಡಿದ ಬಳಿಕ ಖಾಲಿ ಇದ್ದ ಸ್ಥಾನವನ್ನು ಜಸ್ಟರ್(62) ತುಂಬಿದ್ದಾರೆ. ಕೆನ್ನೆಥ್ ಜಸ್ಟರ್ ನಾಮನಿರ್ದೇಶನವನ್ನು ನ.2ರಂದು ಅಮೆರಿಕದ ಶಾಸಕರು ಅವಿರೋಧವಾಗಿ ಆಯ್ಕೆ ಮಾಡಿದ್ದರು.

ಸದ್ಯದಲ್ಲೇ ಜಸ್ಟರ್ ಭಾರತಕ್ಕೆ ಬರಲಿದ್ದು, ಈ ಮಾಸಾಂತ್ಯದಲ್ಲಿ ನಿಗದಿಯಾಗಿರುವ ಹೈದರಾಬಾದ್‌ಗೆ ಇವಾಂಕಾ ಟ್ರಂಪ್ ಭೇಟಿಯನ್ನು ಯಶಸ್ವಿಗೊಳಿಸಲು ತಯಾರಿ ನಡೆಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
kenneth juster has appointed as US ambassador for India, He urged for good relationship between two Countries

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ