ಕತಾರ್ ನಲ್ಲಿ ಕನ್ನಡ ರಾಜ್ಯೋತ್ಸವ, ನಮ್ ರೇಡಿಯೋ ಜತೆ ಶಿವಣ್ಣ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 24: ಕತಾರ್ ದೇಶದ ರಾಜಧಾನಿ ದೋಹಾ ದಲ್ಲಿ "ಕರ್ನಾಟಕ ಸಂಘ ಆಫ್ ಕತಾರ್" 61ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದೆ.

ಶುಕ್ರವಾರ(ನವೆಂಬರ್ 25) ರಂದು ಈ ಶುಭ ಸಂದರ್ಭದಲ್ಲಿ ನಮ್ ರೇಡಿಯೋ ತನ್ನ ಹೊಸ STREAM ಅನ್ನು ಲೋಕಾರ್ಪಣೆ ಮಾಡುತ್ತಿದೆ. ಡಿಸೆಂಬರ್ ಮೊದಲ ವಾರದಿಂದ "ನಮ್ ರೇಡಿಯೋ" ತನ್ನ ಹೊಸ GULF STREAM ನಲ್ಲು ಕಾರ್ಯಕ್ರಮಗಳನ್ನು ನೀಡಲಾಗುತ್ತದೆ. [ಇದು ಆನ್‌ಲೈನ್ ರೆಡಿಯೋ, ಇದು ನಮ್ ರೆಡಿಯೋ]

Karnataka Rajyotsava at Qatar with Nam Radio

ಪಾಸ್ಟೈಮ್ ಪ್ರೋಡ್ಯೂಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನ "ನಮ್ ರೇಡಿಯೋ" (ಕನ್ನಡದ ಮೊದಲ ಆನ್ಲೈನ್ ರೇಡಿಯೋ) ಕಳೆದ ಫೆಬ್ರವರಿ 28 ರಂದು ಲೋಕಾರ್ಪಣೆ ಗೊಂಡಿದ್ದು ಭಾರತ ಹಾಗು ಅಮೆರಿಕಾ ಎರಡು ಸ್ಟ್ರೀಮ್ ಗಳಲ್ಲಿ ಇದುವರೆಗೆ ಯಶಸ್ವಿಯಾಗಿ ವೆಬ್ ಮೂಲಕ ಕಾರ್ಯಕ್ರಮ ನೀಡುತ್ತಿದೆ.

ಈಗ ನವೆಂಬರ್ 25 ರಂದು "ನಮ್ ರೇಡಿಯೋ" ತನ್ನ ಇನ್ನೊಂದು ಹೊಸ STREAM ಅನ್ನು ಕರಾವಳಿ ಕನ್ನಡಿಗರಿಗಾಗಿ ಪ್ರಾರಂಭಿಸುತ್ತಿದ್ದು ಇದರಲ್ಲಿ ತುಳು ಕಾರ್ಯಕ್ರಮಗಳು ಒಳಗೊಂಡಿರುವುದು ವಿಶೇಷವಾಗಿದೆ.

ನಮ್ ರೇಡಿಯೋ Android ಹಾಗು iOS ನಲ್ಲಿ ನಮ್ ರೇಡಿಯೋ ಆಪ್ ಉಚಿತವಾಗಿ ಲಭ್ಯವಿದೆ.

ಕತಾರ್ ಕನ್ನಡ ಹಬ್ಬಕ್ಕೆ ಶಿವಣ್ಣ: ನವೆಂಬರ್ 25ರಂದು ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭ 3 PM ನಂತರ ಆರಂಭವಾಗಲಿದೆ. ಸುಶ್ರಾವ್ಯ ಮ್ಯೂಸಿಕ್ ತಂಡದ ರಸಸಂಜೆ ಕಾರ್ಯಕ್ರಮ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನಗೊಂಡಿದೆ.

Karnataka Rajyotsava at Qatar with Nam Radio

ಮುಖ್ಯ ಅತಿಥಿಗಳಾಗಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಸಾಹಿತಿ ದೊಡ್ಡರಂಗೇಗೌಡ ಅವರು ಆಗಮಿಸಲಿದ್ದಾರೆ. ಕತಾರ್ ನಲ್ಲಿರುವ ರಾಯಭಾರಿ ಪಿ ಕುಮಾರನ್ ಅವರು ಗೌರವ ಅತಿಥಿಗಳಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Sangha at Qatar is celebrating Kannada Rajyotsava on November 25, 2016. Orchestra by Sushravya Music Troupe. Actor Shivarajkumar and writer Dr Doddarange Gowda is guest of Honor, H.E P Kumaran, ambassador of Qatar.
Please Wait while comments are loading...