ಸೂಕ್ಷ್ಮಜೀವಿಗೆ ಕಲಾಂಗೆ ಹೆಸರು, ಮಾಜಿ ರಾಷ್ಟ್ರಪತಿಗೆ 'ನಾಸಾ' ಸಲಾಂ

Subscribe to Oneindia Kannada

ವಾಷಿಂಗ್ಟನ್, ಮೇ 18: ಭಾರತದ ಮಾಜಿ ರಾಷ್ಟ್ರಪತಿ, ಅಪರೂಪದ ಬಾಹ್ಯಾಕಾಶ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂರಿಗೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ವಿಶೇಷ ಗೌರವ ಸಲ್ಲಿಸಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಪತ್ತೆಯಾದ ವಿಶಿಷ್ಟ ಸೂಕ್ಷಜೀವಿಯೊಂದಕ್ಕೆ ನಾಸಾ ಕಲಾಂರ ಹೆಸರನ್ನಿಟ್ಟಿದೆ.

ಇದೊಂದು ಅಪರೂಪದ ಸೂಕ್ಷ್ಮ ಜೀವಿಯಾಗಿದ್ದು, ಸದ್ಯಕ್ಕೆ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಮಾತ್ರ ಕಾಣಿಸಿಕೊಂಡಿದೆ. ಈ ಜೀವಿಗೆ 'ಸೊಲಿಬಾಸಿಲಸ್ ಕಲಾಮಿ' ಎಂದು ಹೆಸರಿಡಲಾಗಿದೆ.

Karnataka Cabinet decided to desilting lakes with Rs 100 crores

ಈ ಕುರಿತು ಮಾತನಾಡಿರುವ ನಾಸಾದ ವಿಜ್ಞಾನಿ ಡಾ. ಕಸ್ತೂರಿ ವೆಂಕಟೇಶ್ವರನ್, "ಬ್ಯಾಕ್ಟೀರಿಯಕ್ಕೆ ಸೊಲಿಬಾಸಿಲಸ್ ಕಲಾಮಿ ಎಂದು ಹೆಸರಿಡಲಾಗಿದೆ. ಸೊಲಿಬಾಲಿಸಿಸ್ ಎನ್ನುವುದು ಈ ಬ್ಯಾಕ್ಟೀರಿಯಾದ ಜಾತಿಯಾಗಿದೆ. ಇದರ ಮುಂದೆ ಡಾ. ಅಬ್ದುಲ್ ಕಲಾಮ್ ಅವರ ಹೆಸರಿಡಲಾಗಿದೆ," ಎಂದು ಹೇಳಿದ್ದಾರೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಹಲವು ಸೂಕ್ಷ್ಮ ಜೀವಿಗಳು ಕಾಣಿಸಿಕೊಳ್ಳುತ್ತಿವೆ. ಭೂಮಿಯಿಂದ 400 ಕಿಲೋಮೀಟರ್ ದೂರದಲ್ಲಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಈ ಜೀವಿಗಳು ಕಂಡು ಬರುತ್ತಿವೆ.

ಈ ಸೂಕ್ಷ್ಮ ಜೀವಿ ಭೂಮಿಯಿಂದಲೇ ಬಾಹ್ಯಾಕಾಶ ಕೇಂದ್ರಕ್ಕೆ ಬಂದಿರಬಹುದು ಎಂದು ವೆಂಕಟೇಶ್ವರನ್ ನಂಬಿದ್ದಾರೆ.

ಸೂಕ್ಷ್ಮ ಜೀವಿಗೆ ನಾಸಾ ಅಬ್ದುಲ್ ಕಲಾಂರ ಹೆಸರಿಟ್ಟಿದ್ದಕ್ಕೆ ಹೆಮ್ಮೆಯಾಗಿದೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's former president and famous aerospace engineer Dr APJ Abdul Kalam has now been honoured by the NASA by naming a unique microbe found on the International Space Station after him. The microbe is called 'Solibacillus Kalamii'.
Please Wait while comments are loading...