Kamala Harris: ಭಾರತೀಯ ಮಹಿಳೆಗೆ ಸಿಗಲಿದೆ ಅಮೆರಿಕದ ಅಧ್ಯಕ್ಷ ಸ್ಥಾನ! ಟ್ರಂಪ್ ಹೀನಾಯ ಸೋಲು ಗ್ಯಾರಂಟಿ?
ಭಾರತ ಜಗತ್ತನ್ನೇ ಆಳುವ ಮಟ್ಟಕ್ಕೆ ಬೆಳೆದು ನಿಂತಿದೆ, ಸ್ವಾತಂತ್ರ್ಯ ಬಂದ ನಂತರ ಕಳೆದ 77 ವರ್ಷದಲ್ಲಿ ಭಾರತ ಹಂತ ಹಂತವಾಗಿ ಬಲಿಷ್ಠವಾಗಿ ಬೆಳೆದು ನಿಂತಿದೆ. ಅದರಲ್ಲೂ ನಮ್ಮ ಭಾರತೀಯರು ಬ್ರಿಟನ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಪ್ರಮುಖವಾಗಿ ಅಮೆರಿಕ ದೇಶದಲ್ಲಿ ರಾಜಕೀಯ ನಾಯಕರಾಗಿ ಕೂಡ ಬೆಳೆದು ನಿಂತಿದ್ದಾರೆ. ಹೀಗಿದ್ದಾಗಲೇ ಅಮೆರಿಕದ ಅಧ್ಯಕ್ಷೀಯ ಸ್ಥಾನ ಕೂಡ ಭಾರತ ಮೂಲದ ಹೆಣ್ಣು ಮಗಳಿಗೆ ಸಿಗುವುದು ಈಗ ಬಹುತೇಕ ಪಕ್ಕಾ ಆಗಿದೆ!
ಹೌದು, ಅಮೆರಿಕ ಅಧ್ಯಕ್ಷೀಯ ಚುನಾವಣೆ 2024 ಇಡೀ ಜಗತ್ತನ್ನು ಸೆಳೆಯುತ್ತಿದೆ. ಯಾಕಂದ್ರೆ ಜಾಗತಿಕ ಮಟ್ಟದಲ್ಲಿ ದೊಡ್ಡಣ್ಣ ಎಂದು ಬಿರುದು ಪಡೆದಿರುವ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಯಾರು ಆಯ್ಕೆ ಆಗುತ್ತಾರೆ? ಅನ್ನೋದು ದೊಡ್ಡ ಪ್ರಭಾವ ಬೀರುತ್ತದೆ. ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ & ಡೊನಾಲ್ಡ್ ಟ್ರಂಪ್ ನಡುವೆ ನೇರ ಪೈಪೋಟಿ ಆರಂಭವಾಗಿತ್ತು. ಆದ್ರೆ ಜೋ ಬೈಡನ್ ಬಗ್ಗೆ ಸ್ವಪಕ್ಷೀಯರೇ ಅಸಮಾಧಾನ ಹೊಂದಿದ್ದರು. ಅಲ್ಲದೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೀಡಿದ ಆಡಳಿತ ಅಮೆರಿಕದ ಜನರನ್ನು ರೊಚ್ಚಿಗೆಬ್ಬಿಸಿದೆ.

ಭಾರತ ಮೂಲದ ಮಹಿಳೆ ಅಖಾಡಕ್ಕೆ
ಪರಿಸ್ಥಿತಿಗೆ ತಕ್ಕಂತೆ ಡೊನಾಲ್ಡ್ ಟ್ರಂಪ್ ಕೂಡ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಟ್ರಂಪ್ ಗೆಲುವು ಬಹುತೇಕ ಪಕ್ಕಾ ಆಗಿತ್ತು. ಆದರೆ ಇದೇ ಸಮಯದಲ್ಲಿ ಅಲರ್ಟ್ ಆಗಿದ್ದ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ & ಡೆಮಾಕ್ರಟಿಕ್ ಪಕ್ಷದ ನಾಯಕರು, ಬೈಡನ್ ಅವರನ್ನ ಅಧ್ಯಕ್ಷೀಯ ಸ್ಥಾನದ ಸ್ಫರ್ಧೆಯಿಂದ ಹಿಂದೆ ಸರಿಯಲು ಮನವಿ ಮಾಡಿದ್ದರು. ಈ ಮಾತಿಗೆ ತಲೆಬಾಗಿ, ಭಾರತ ಮೂಲದ ಮಹಿಳೆಯನ್ನು ಮುಂದೆ ಬಿಟ್ಟು ಈಗ ಜೋ ಬೈಡನ್ ಹಿಂದೆ ಸರಿದಿದ್ದಾರೆ.
ಬೈಡನ್ ಬದಲು ಭಾರತದ ಮಹಿಳೆ!
ಭಾರತೀಯರು ಎಲ್ಲಾ ಕ್ಷೇತ್ರದಲ್ಲೂ ಗಟ್ಟಿಯಾಗಿ ನೆಲೆ ನಿಂತು ಬೆಳೆದಿದ್ದಾರೆ. ಅಮೆರಿಕ ದೇಶ ಕೂಡ ಭಾರತೀಯರು ಇಲ್ಲದೆ ಬದುಕಲು ಆಗಲ್ಲ ಎಂಬ ಸ್ಥಿತಿಗೆ ತಲುಪಿದೆ. ಇಂತಹ ಪರಿಸ್ಥಿತಿ ನಡುವೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೂಡ ಭಾರತ ಮೂಲದ ಕಮಲಾ ಹ್ಯಾರಿಸ್‌ಗೆ ಚಾನ್ಸ್ ಸಿಕ್ಕಿದೆ. ಯಾವಾಗ ಟ್ರಂಪ್ ವಿರುದ್ಧ ಜೋ ಬೈಡನ್ ಗೆಲ್ಲುವುದು ಸಾಧ್ಯ ಇಲ್ಲವೇ ಇಲ್ಲ ಎಂಬುದು ಗೊತ್ತಾಯಿತೋ, ಆಗಲೇ ಒಬಾಮಾ ಸಹಿತ ಡೆಮಾಕ್ರಟಿಕ್ ಪಕ್ಷದ ನಾಯಕರೆಲ್ಲಾ ಸೇರಿ ಬೈಡನ್ ಮನವೊಲಿಸಿ ಕಮಲಾ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನಡುವೆ ನೇರ ಪೈಪೋಟಿ ಇದೀಗ ಶುರುವಾಗಿದೆ. ಹಾಗೇ ಭಾರತ ಮೂಲದ ಮಹಿಳೆ ಕಮಲಾ ಹ್ಯಾರಿಸ್ ಅಮೆರಿಕದ ಪವರ್‌ಫುಲ್ ಹುದ್ದೆಗೆ ಏರುವುದು ಬಹುತೇಕ ಪಕ್ಕಾ ಆಗುತ್ತಿದೆ.












Click it and Unblock the Notifications