ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್ ನಲ್ಲಿ ಭಾರತೀಯ ಸೇರಿ ಮೂವರನ್ನು ಅಪಹರಿಸಿ ಹತ್ಯೆ

|
Google Oneindia Kannada News

ಕಾಬೂಲ್, ಆಗಸ್ಟ್ 2: ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಅಂತರರಾಷ್ಟ್ರೀಯ ಆಹಾರ ಸಂಸ್ಥೆ ಸೊಡೆಕ್ಸೊಗಾಗಿ ಕೆಲಸ ಮಾಡುತ್ತಿದ್ದ ಮೂವರು ವಿದೇಶೀಯರನ್ನು ಗುರುವಾರ ಭಯೋತ್ಪಾದಕರು ಅಪಹರಿಸಿ, ಹತ್ಯೆ ಮಾಡಿದ್ದಾರೆ. ಈ ಪ್ರಕರಣದಿಂದ ಸುರಕ್ಷತೆ ಬಗ್ಗೆ ಮತ್ತಷ್ಟು ಆತಂಕ ಹೆಚ್ಚಾಗಿದೆ.

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಹತ್ಯೆಯಾದ ಮೂವರು ಸೊಡೆಕ್ಸೊನಲ್ಲಿ ಬಾಣಸಿಗರಾಗಿದ್ದರು. ಅಂದಹಾಗೆ ಸೊಡೆಕ್ಸೊ ಜಗತ್ತಿನ ಎರಡನೇ ಅತಿ ದೊಡ್ಡ ಆಹಾರ ಹಾಗೂ ಪೂರೈಕೆ ಸೇವೆ ಒದಗಿಸುವ ಕಂಪೆನಿ.

ಭಾರತೀಯ, ಮಲೇಷಿಯನ್ ಹಾಗೂ ಮೆಸಿಡೋನಿಯನ್ ನಾಗರಿಕರನ್ನು ಅಪಹರಿಸಿ, ಹತ್ಯೆ ಮಾಡಲಾಗಿದೆ. ನಮಗೆ ಅವರ ಶವಗಳು ದೊರೆತಿವೆ ಎಂದು ಕಾಬೂಲ್ ನ ಪೊಲೀಸ್ ಮುಖ್ಯಸ್ಥ ತಿಳಿಸಿದ್ದಾರೆ.

Kabul: Indian among 3 foreigners kidnapped, shot dead by terrorists

ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ಅಪಹರಣ ಪ್ರಕರಣಗಳು ತೀರಾ ಹೆಚ್ಚಾಗಿವೆ. ಹಣಕ್ಕಾಗಿ ಆಫ್ಘರನ್ನೇ ಅಪಹರಿಸಲಾಗುತ್ತದೆ. ಈ ಮಧ್ಯೆ ವಿದೇಶಿಯರೂ ಈ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ. ಒಂದೋ ಕ್ರಿಮಿನಲ್ ಗಳು ಅಥವಾ ಭಯೋತ್ಪಾದಕರ ಸಂಘಟನೆಗಳು ಹಣಕ್ಕಾಗಿ ಇಂಥ ಕೃತ್ಯ ಎಸಗುತ್ತಿವೆ.

ಮಲೇಷಿಯನ್ ನಾಗರಿಕರ ವಯಸ್ಸು 64, ಭಾರತೀಯನ ವಯಸ್ಸು 39 ಹಾಗೂ ಮೆಸಿಡೋನಿಯನ್ ನಾಗರಿಕನ ವಯಸ್ಸು 37. ಸ್ಥಳೀಯ ಚಾಲಕನ ಜತೆಗೆ ಈ ಮೂವರು ಕೆಲಸಕ್ಕೆ ತೆರಳುತ್ತಿದ್ದರು.

ಶವವಾಗಿ ಪತ್ತೆಯಾದ ಮೂವರ ಬಳಿ ಕಂಪೆನಿಯ ಐಡೆಂಟಿಟಿ ಕಾರ್ಡ್ ಪತ್ತೆಯಾಗಿದೆ. ಮತ್ತು ಸೊಡೆಕ್ಸೊ ಕೂಡ ಈ ಮೂವರು ತಮ್ಮ ಕಂಪೆನಿಯಲ್ಲೇ ಕೆಲಸ ಮಾಡುತ್ತಿದ್ದವರು ಎಂದು ಹೇಳಿಕೊಂಡಿದೆ. ಈ ಬಗ್ಗೆ ಸೊಡೆಕ್ಸೊ ಯಾವುದೇ ಹೇಳಿಕೆ ನೀಡಿಲ್ಲ.

ಮೂವರನ್ನು ಕಾಬೂಲ್ ನ ಪೂರ್ವ ಭಾಗದ ಹೊರವಲಯ ಪುಲ್-ಇ-ಚರ್ಕಿಯಲ್ಲಿ ಅಪಹರಿಸಲಾಗಿತ್ತು. ಆದರೆ ಮೃತದೇಹಗಳು ಕಾಬೂಲ್ ಪ್ರಾಂತ್ಯದ ದಕ್ಷಿಣ ಭಾಗದ ಮುಸ್ಸಾಹಿ ಜಿಲ್ಲೆಯಲ್ಲಿ ಕಾರೊಂದರಲ್ಲಿ ಪತ್ತೆಯಾಗಿದೆ. ಅವರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಸೊಡೆಕ್ಸೊ ಕಂಪೆನಿ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.

English summary
Terrorists kidnapped and killed three foreign nationals working for international food company Sodexo in Kabul on Thursday, deepening concerns about security of expatriates in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X