ಆಫ್ಘಾನಿಸ್ತಾನ: ತಾಲಿಬಾನಿಗಳ ಕಂಟಕದಿಂದ ಪಾರಾದ ಅಮೆರಿಕ ಅಧಿಕಾರಿ

ಆಫ್ಘಾನಿಸ್ತಾನ, ಸೆಪ್ಟೆಂಬರ್ 27: ಅಮೆರಿಕದ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಜೇಮ್ಸ್ ಮಾಟಿಸ್ ಅವರು ಆಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಅವರ ವಿಮಾನ ಬಂದಿಳಿದ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿಯಾಗಿದೆ.

ಆಫ್ಘಾನಿಸ್ತಾನದಲ್ಲಿ ಅಮೆರಿಕದ ರಾಜತಾಂತ್ರಿಕ ಸಿಬ್ಬಂದಿಗೆ ಉಗ್ರರಿಂದ ತೊಂದರೆಗಳು ಎದುರಾಗುವ ಮುನ್ಸೂಚನೆ ಇದ್ದ ಕಾರಣದಿಂದಲೇ ಆಪ್ಘಾನಿಸ್ತಾನಕ್ಕೆ ಜೇಮ್ಸ್ ಅವರ ಭೇಟಿಯನ್ನು ಏಕಾಏಕಿ ಏರ್ಪಡಿಸಲಾಗಿತ್ತು.

Kabul airport hit by rockets after US Defence Secretary James Mattis arrives

ಮಂಗಳವಾರವಷ್ಟೇ, ಭಾರತಕ್ಕೆ ಭೇಟಿ ನೀಡಿದ್ದ ಅವರು, ಅಮೆರಿಕಕ್ಕೆ ತೆರಳುವ ಮಾರ್ಗ ಮಧ್ಯೆ ಅವರು ಆಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಅಮೆರಿಕದ ನ್ಯಾಟೋ ಸಂಸ್ಥೆಯ ಮುಖ್ಯಸ್ಥ ಜೆನ್ಸ್ ಸ್ಟಾಲ್ಟೆನ್ ಬರ್ಗ್ ಇದ್ದರು.

ಜೇಮ್ಸ್ ಹಾಗೂ ಜೆನ್ಸ್ ವಿಮಾನ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ರಾಜತಾಂತ್ರಿಕ ಭವನಕ್ಕೆ ತೆರಳಿದ ಕೆಲವೇ ಹೊತ್ತಿನಲ್ಲಿ ಸುಮಾರು 20-30 ರಾಕೆಟ್ ಗಳು ಬಂದು ವಿಮಾನ ನಿಲ್ದಾಣದ ರನ್ ವೇ ಹಾಗೂ ವಿಮಾನ ನಿಲ್ದಾಣದ ಆವರಣದ ಮೇಲೆ ಬಂದು ಅಪ್ಪಳಿಸಿವೆ.

ತಕ್ಷಣವೇ ಎಚ್ಚೆತ್ತ ಅಲ್ಲಿನ ಸಿಬ್ಬಂದಿ, ನಿಲ್ದಾಣದಲ್ಲಿದ್ದ ಎಲ್ಲಾ ಉದ್ಯೋಗಿಗಳನ್ನು ತೆರವುಗೊಳಿಸಿದರು. ಐಎಎನ್ಎಸ್ ಸುದ್ದಿ ಸಂಸ್ಥೆಯ ಪ್ರಕಾರ, ಈ ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರರು ಹೊತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+