ಕಾಬೂಲ್: ಸಂಸತ್ತಿನ ಮೇಲೆ ಉಗ್ರರ ದಾಳಿ, 6ಜನ ಬಲಿ
ಕಾಬೂಲ್, ಜೂ.22: ತಾಲಿಬಾನ್ ಉಗ್ರರು ಸೋಮವಾರ ಮಧ್ಯಾಹ್ನ ಸರಣಿ ಆತ್ಮಾಹುತಿ ದಾಳಿ ನಡೆಸಿ ಅಫ್ಘಾನಿಸ್ತಾನ ಬೆಚ್ಚುವಂತೆ ಮಾಡಿದ್ದಾರೆ. ಸಂಸತ್ ಭವನ ಸೇರಿದಂತೆ ಆರು ಕಡೆಗಳಲ್ಲಿ ಬಾಂಬ್ ಸ್ಫೋಟ ಕೇಳಿ ಬಂದಿದೆ. ಸದ್ಯದ ಮಾಹಿತಿ ಪ್ರಕಾರ ಈ ಘಟನೆಯಲ್ಲಿ ಆರು ಜನ ಮೃತಪಟ್ಟಿದ್ದಾರೆ.
ಸಂಭಾವ್ಯ ದಾಳಿಯ ನಿರೀಕ್ಷೆ ಇದ್ದ ಕಾರಣ ಸಂಸತ್ ಭವನದಿಂದ ಎಲ್ಲರನ್ನು ಹೊರಕ್ಕೆ ಕಳಿಸಲಾಗಿತ್ತು. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇರಾಕಿ ಉಗ್ರರಿಗಿಂತ ತಮ್ಮ ಪ್ರಾಬಲ್ಯ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಸಾಬೀತುಪಡಿಸಲು ತಾಲಿಬಾನಿ ಉಗ್ರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. [ಚಿತ್ರಗಳಲ್ಲಿ ಸಂಸತ್ ದಾಳಿ ಹುತಾತ್ಮರಿಗೆ ನಮನ]
ಅಫ್ಘಾನಿಸ್ತಾನದ ನೂತನ ರಕ್ಷಣಾ ಸಚಿವ ಮಸೂಮ್ ಸ್ತಾನೆಕ್ಜಾಯಿ ಅವರನ್ನು ಸಂಸದರಿಗೆ ಪರಿಚಯಿಸುವ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಆದರೆ, ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಿದ್ದರಿಂದ ಭಾರಿ ಪ್ರಾಣಹಾನಿ ತಪ್ಪಿಸಲಾಗಿದೆ.
#Afghanistan: 6 explosions go off near Parliament building, reports of #Taliban entering lower house v @rConflictNews pic.twitter.com/isqVDhjKtk
— Hassan Ridha (@sayed_ridha) June 22, 2015 ಇರಾಕಿ ಉಗ್ರ ಪಡೆ ಐಎಸ್ಐಎಸ್ ಗೆ ಅಫ್ಘಾನಿಸ್ತಾನಕ್ಕೆ ಕಾಲಿಡದಂತೆ ತಾಲಿಬಾನಿ ಉಗ್ರರು ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದಾದ ಬಳಿಕ ತಾಲಿಬಾನಿಗಳು ಈ ಕೃತ್ಯಕ್ಕೆ ಮುಂದಾಗಿದ್ದಾರೆ.











Click it and Unblock the Notifications