ಉಕ್ರೇನ್ ವಿವಾದ: ಮಾತುಕತೆಗೆ ಮುಂದಾದ ಬೈಡನ್, ಪುಟಿನ್
ಉಕ್ರೇನ್ ಬಿಕ್ಕಟ್ಟು ನಿವಾರಣೆಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ರಷ್ಯಾ ಪ್ರಧಾನಿ ವ್ಲಾಡಿಮಿರ್ ಪುಟಿನ್ ಮಾತುಕತೆಗೆ ಮುಂದಾಗಿದ್ದಾರೆ.
ಮೂರೂ ತಾಸಿಗೂ ಹೆಚ್ಚು ಅವಧಿ ಎರಡೂ ದೇಶಗಳ ನಾಯಕರು ಪರಸ್ಪರ ಚರ್ಚಿಸಿದರು. ಬಿಕ್ಕಟ್ಟು ಶಮನಕ್ಕೆ ರಾಜತಾಂತ್ರಿಕ ಮಾರ್ಗದಲ್ಲಿ ಪರಿಹಾರ ಹುಡುಕಲು ಯತ್ನಿಸುವುದಾಗಿ ಪುಟಿನ್ ಭರವಸೆ ನೀಡಿದರು.
ಫ್ರಾನ್ಸ್ ಮತ್ತು ರಷ್ಯಾದ ವಿದೇಶಾಂಗ ಸಚಿವರು ಶೀಘ್ರ ಭೇಟಿಯಾಗಿ ಬೆಲರೂಸ್ ಮತ್ತು ಉಕ್ರೇನ್ ಸುತ್ತಮುತ್ತಲ ದೇಶಗಳಿಂದ ರಷ್ಯಾದ ಪಡೆಗಳು ಹಿಂದಿರುಗುವ ಬಗ್ಗೆ ಚರ್ಚಿಸಿದ್ದಾರೆ.

ಕಳೆದೊಂದು ತಿಂಗಳಿನಿಂದಲೂ ರಷ್ಯಾದ ಆಕ್ರಮಣಕಾರಿ ನೀತಿ ಕುರಿತಾಗಿ ಎಚ್ಚರಿಸುತ್ತಾ ಬಂದಿರುವ ಅಮೆರಿಕ ಇಂದು ಉಕ್ರೇನ್ ಅನ್ನು ಮತ್ತೆ ಎಚ್ಚರಿಸಿದೆ. ರಷ್ಯಾ ಯಾವುದೇ ಕ್ಷಣದಲ್ಲಿ ಬೇಕಾದರೂ ದಾಳಿ ನಡೆಸಬಹುದು ಎಂದು ಶ್ವೇತಭವನ ಯುಕ್ರೇನ್ ಸರ್ಕಾರವನ್ನು ಎಚ್ಚರಿಸಿದೆ.
ಶ್ವೇತಭವನ ಎಚ್ಚರಿಕೆ ಕುರಿತಾಗಿ ಪ್ರತಿಕ್ರಿಯಿಸಿರುವ ಉಕ್ರೇನ್ ಅಮೆರಿಕ ಸರ್ಕಾರದ ಎಚ್ಚರಿಕೆಯನ್ನು ಕಡೆಗಣಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಷ್ಟು ಬೇಗ ಧೈರ್ಯ ಕಳೆದುಕೊಳ್ಳಬೇಕಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ.
ರಷ್ಯಾ ಮಿಲಿಟರಿ ಕಾರ್ಯಾಚರಣೆ ಇನ್ನೂ ಕೆಲ ಸಮಯ ಮುಂದುವರಿಯಲಿದೆ ಎಂಬ ಬೆಲರೂಸ್ ಸರ್ಕಾರದ ಹೇಳಿಕೆಯ ಹಿನ್ನೆಲೆಯಲ್ಲಿ ರಷ್ಯಾದ ಕದನ ವಿರಾಮ ಪ್ರಯತ್ನದ ಘೋಷಣೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಯುದ್ಧ ಟ್ಯಾಂಕ್ಗಳು ಉಕ್ರೇನ್ ಗಡಿ ಪ್ರವೇಶಿಸುವ ಮೊದಲು ಶಾಂತಿ ನೆಲೆಗೊಳಿಸಲು ಏನೆಲ್ಲಾ ಸಾಧ್ಯವೋ ಅವೆಲ್ಲವನ್ನೂ ಮಾಡುತ್ತೇವೆ. ಆದರೆ ದಾಳಿಗೆ ರಷ್ಯಾ ಸಿದ್ಧತೆ ಮಾಡಿಕೊಂಡಿರುವುದು ನಿಜ ಎಂದು ಅವರು ಹೇಳಿದರು.
ಉಕ್ರೇನ್ ಮತ್ತು ರಷ್ಯಾ ನಡುವಣ ಮಾತುಕತೆಗೆ ವೇದಿಕೆ ಒದಗಿಸು ಪ್ರಯತ್ನಕ್ಕೂ ಫ್ರಾನ್ಸ್ ಮುಂದಾಗಿದೆ. ರಷ್ಯಾ ಪರ ಬಂಡುಕೋರರು ಮತ್ತು ಉಕ್ರೇನ್ ಪಡೆಗಳು ಮುಖಾಮುಖಿಯಾಗಿರುವ ಪ್ರದೇಶದಲ್ಲಿ ಕದನ ವಿರಾಮ ಘೋಷಿಸಲು ನಡೆಸಬೇಕಾದ ಪ್ರತಿಕ್ರಿಯೆಯನ್ನು ನಿರ್ವಹಿಸಲು ಪುಟಿನ್ ಮತ್ತು ಮಾರ್ಕೊನ್ ಯತ್ನಿಸುತ್ತಿದ್ದಾರೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ಸತತ ಪ್ರಯತ್ನಗಳು ನಡೆಯಲಿವೆ.
ಫ್ರಾನ್ಸ್, ರಷ್ಯಾ, ಉಕ್ರೇನ್, ಮತ್ತು ಜರ್ಮನಿ ದೇಶಗಳು 2014ರ ಮಿನ್ಸ್ಕ್ ಶಿಷ್ಟಾಚಾರದ ಪ್ರಕಾರ ಪೂರ್ವ ಉಕ್ರೇನ್ನಲ್ಲಿ ಶಾಂತಿ ಕಾಪಾಡಲು ಪ್ರಯತ್ನ ಮುಂದುವರಿಸಲಿವೆ. ಯೂರೋಪ್ನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಉನ್ನತ ಮಟ್ಟದ ಸಭೆ ನಡೆಸಲು ರಷ್ಯಾ ಮತ್ತು ಫ್ರಾನ್ಸ್ ಸಮ್ಮತಿಸಿವೆ.
ಉಕ್ರೇನ್ನಲ್ಲಿ ರಕ್ತಪಾತ ತಡೆಯುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಹ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಯಾವುದೇ ಸಂದರ್ಭದಲ್ಲಿ ಭೇಟಿಯಾಗಲು ಸಿದ್ಧರಾಗಿದ್ದಾರೆ.
ಪಾಶ್ಚಾತ್ಯ ದೇಶಗಳ ಪ್ರಯತ್ನದ ನಡುವೆಯೂ ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾ ಸಿದ್ಧತೆ ಅಂತಿಮಗೊಳಿಸಿದೆ. ಆಕ್ರಮಣಕ್ಕೆ ರಷ್ಯಾ ಅಂತಿಮ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
Recommended Video
ಇದು ಅತ್ಯಂತ ಸೂಕ್ಷ್ಮ ಮತ್ತು ಗಂಭೀರ ಪರಿಸ್ಥಿತಿ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಹೇಳಿದ್ದರು. ಉಕ್ರೇನ್ ಸುತ್ತಮುತ್ತ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ರಷ್ಯಾ ಬೆಂಬಲಿತ ಪ್ರತ್ಯೇಕವಾದಿಗಳ ಪ್ರಯತ್ನಕ್ಕೆ ಪೂರಕವಾಗಿ ರಷ್ಯಾ ಸೇನೆ ಶೆಲ್ ದಾಳಿಯನ್ನು ಚುರುಕುಗೊಳಿಸಿತ್ತು.












Click it and Unblock the Notifications