ಅಮೆರಿಕದಲ್ಲಿ ನ್ಯಾಯಾಧೀಶ ಹುದ್ದೆ ಅಲಂಕರಿಸಿದ ಭಾರತ ಮೂಲದ ಮಹಿಳೆ? ಯಾರಿವರು ಯಾವ ರಾಜ್ಯದವರು?
ಅಮೇರಿಕದಲ್ಲಿ ಭಾರತೀಯರ ಜನ ಸಂಖ್ಯೆ ಕಡಿಮೆ ಇರಬಹುದು. ಆದರೆ ಆ ದೇಶದ ಪ್ರತಿ ಕ್ಷೇತ್ರದಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ತಮ್ಮ ಛಾಪು ಮೂಡಿಸಿದ್ದಾರೆ. ಅಲ್ಲದೆ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರೂ ಅಷ್ಟೇ ದೊಡ್ಡ ಸಾಧನೆ ಮಾಡುತ್ತಿದ್ದಾರೆ. ಈ ಸಾಲಿಗೆ ಮತ್ತೊಂದು ಹೆಸರು ಸೇರಿಕೊಂಡಿದೆ. ಅವರೇ ಜಯಾ ಬಡಿಗ.
ಭಾರತೀಯ ಮೂಲದ ಮಹಿಳೆ ಜಯಾ ಬಡಿಗ ಅವರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಇವರು ಈ ಸ್ಥಾನಕ್ಕೆ ಏರಿದ ಮೊದಲ ಆಂಧ್ರಪ್ರದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇವರ ತಂದೆ ಸಂಸದರಾಗಿದ್ದು, ದೊಡ್ಡ ಉದ್ಯಮಿ.

ಯಾರು ಜಯಾ ಬಡಿಗ?
ಈ ನ್ಯಾಯಲಯದ ನ್ಯಾಯಾಧೀಶರಾಗುವ ಮುನ್ನ ಜಯಾ ಬಡಿಗ ಸ್ಯಾಕ್ರಮೆಂಟೊ ನ್ಯಾಯಾಲಯದ ಆಯುಕ್ತರಾಗಿದ್ದರು. ಜಯಾ ಬಡಿಗ ಅವರು ಕ್ಯಾಲಿಫೋರ್ನಿಯಾದಲ್ಲಿ ಕಾನೂನಿನ ಪರಿಣಿತರಾಗುವ ಮೊದಲು, ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನೇಕ ಜನರು ಇವರನ್ನು ಗುರವನ್ನಾಗಿ ಪರಿಗಣಿಸಿದ್ದಾರೆ.
ಜಯಾ ವೃತ್ತಿ ಜೀವನ
ಜಯಾ ಬಡಿಗ ಅವರು 2009ರಲ್ಲಿ ಕ್ಯಾಲಿಫೋರ್ನಿಯಾದ ಸ್ಟೇಟ್ ಬಾರ್ ಪರೀಕ್ಷೆಯಲ್ಲಿ ಪಾಸ್ ಆದರು. ಜಯಾ ಅವರು ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ 10 ವರ್ಷ ವಕೀಲರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅವರು ಕ್ಯಾಲಿಫೋರ್ನಿಯಾ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಕೇರ್ ಸರ್ವಿಸಸ್ ಮತ್ತು ಕ್ಯಾಲಿಫೋರ್ನಿಯಾ ಗವರ್ನರ್ ತುರ್ತು ಸೇವೆಗಳ ಕಚೇರಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿಗೆ ನೇಮಕಗೊಂಡ 18 ಹೊಸ ನ್ಯಾಯಾಧೀಶರದಲ್ಲಿ ಜಯಾ ಅವರೂ ಸಹ ಒಬ್ಬರು. ನ್ಯಾಯಾಧೀಶ ರಾಬರ್ಟ್ ಎಸ್. ಲ್ಯಾಫಮ್ ಅವರ ನಿವೃತ್ತಿಯ ನಂತರ ತೆರವಾದ ಸ್ಥಾನಕ್ಕೆ ಜಯಾ ಅವರನ್ನು ನೇಮಕ ಮಾಡಲಾಗಿದೆ.
ಮಾಜಿ ಸಂಸದರ ಪುತ್ರಿ ಜಯಾ
ಜಯಾ ಬಡಿಗ ಮಚಲಿಪಟ್ಟಣಂನ ಮಾಜಿ ಸಂಸದ ಮತ್ತು ಕೈಗಾರಿಕೋದ್ಯಮಿ ಬಡಿಗ ರಾಮಕೃಷ್ಣ ಅವರ ಪುತ್ರಿ. ರಾಮಕೃಷ್ಣ ಕುಟುಂಬದಲ್ಲಿ ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದು, ಜಯ ಮೂರನೇ ಪುತ್ರಿ. ಅವರ ಶೈಕ್ಷಣಿಕ ಪ್ರಯಾಣವು ಹೈದರಾಬಾದ್‌ನಲ್ಲಿ ಪ್ರಾರಂಭಿಸಿದರು, ಅಲ್ಲಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಅವರು ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾ ವಿಶ್ವವಿದ್ಯಾಲಯದಿಂದ ಜೂರಿಸ್ ಡಾಕ್ಟರ್ ಪದವಿಯನ್ನು ಪಡೆದಿದ್ದಾರೆ. ಅಮೆರಿಕಾದಲ್ಲಿ ಕಾನೂನು ಅಭ್ಯಾಸ ಮಾಡಲು ಇದು ಅಗತ್ಯವಾದ ಪದವಿ ಎಂದು ಪರಿಗಣಿಸಲಾಗಿದೆ. ಅಲ್ಲದೆ, ಜಯಾ ಬೋಸ್ಟರ್ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಅಂತಾರಾಷ್ಟ್ರೀಯ ಸಂವಹನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.












Click it and Unblock the Notifications